NEWSನಮ್ಮಜಿಲ್ಲೆ

ಜನಗಣತಿ ಕಾರ್ಯಕ್ಕೆ ಗೈರಾದ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಆಯುಕ್ತ ರಮೇಶ್ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಲಿರುವ ಭಾರತದ ರಾಷ್ಟ್ರೀಯ ಜನಗಣತಿ–2027 ಕಾರ್ಯದ ಅಂಗವಾಗಿ ಗಣತಿದಾರರು ಮತ್ತು ಮೇಲ್ವಿಚಾರಕರಾಗಿ ನೇಮಕಗೊಂಡಿರುವ ಎಲ್ಲ ಅಧಿಕಾರಿ ಮತ್ತು ನೌಕರರು ಈ ಕೂಡಲೇ ತಮಗೆ ನಿಯೋಜಿಸಿರುವ ಗಣತಿ ಬ್ಲಾಕ್ ಹಾಗೂ ಮೇಲ್ವಿಚಾರಕರ ಸರ್ಕಲ್‌ಗಳಲ್ಲಿ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸುವಂತೆ ಪ್ರಧಾನ ಜನಗಣತಿ ಅಧಿಕಾರಿ ಹಾಗೂ ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ಅವರು ಸೂಚಿಸಿದ್ದಾರೆ.

ನಿಯೋಜಿಸಲಾದ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಅಂತಿಮ ಕರೆ ನೀಡಿರುವ ಅವರು, ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 4393 ಗಣತಿದಾರರನ್ನು ಮತ್ತು 732 ಮೇಲ್ವಿಚಾರಕರನ್ನು ರಾಷ್ಟ್ರೀಯ ಜನಗಣತಿ 2027ರ ಕಾರ್ಯಕ್ಕೆ ಈಗಾಗಲೇ ನಿಯೋಜಿಸಿ ಆದೇಶವನ್ನು ನೀಡಲಾಗಿದೆ.

ನಿಯೋಜಿತ ಎಲ್ಲ ಅಧಿಕಾರಿ ಮತ್ತು ನೌಕರರಿಗೆ ಎರಡು ಬಾರಿ ತರಬೇತಿಯನ್ನು ನೀಡಲಾಗಿದೆ. ತರಬೇತಿಗೆ ಗೈರಾಗಿರುವ ಅಧಿಕಾರಿ ಮತ್ತು ನೌಕರರಿಗೆ ಈಗಾಗಲೇ ಕಾರಣ ಕೇಳಿ ಪತ್ರ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ತರಬೇತಿಗೆ ಗೈರಾಗಿರುವ ಹಾಗೂ ತರಬೇತಿಗೆ ಹಾಜರಾಗಿ ನೇಮಿಸಲಾದ ಸ್ಥಳಕ್ಕೆ ಕರ್ತವ್ಯಕ್ಕೆ ಒಟ್ಟು 1774 ಗೈರಾಗಿರುವ ಗಣತಿದಾರರು ಮತ್ತು ಮೇಲ್ವಿಚಾರಕರು ಕೂಡಲೇ ನೇಮಿಸಿದ ವಾರ್ಡ್ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ತಿಳಿಸಿದ್ದಾರೆ.

ಗೈರುಹಾಜರಾತಿಗೆ ಶಿಸ್ತು ಕ್ರಮ: ಮನೆಪಟ್ಟಿ ಮತ್ತು ಮನೆಗಣತಿ ಕಾರ್ಯಕ್ಕೆ ಇದುವರೆಗೆ ನಿಯೋಜಿಸಲ್ಪಟ್ಟಿರುವ ಗಣತಿ ಬ್ಲಾಕ್ ಹಾಗೂ ಸೂಪರ್ವೈಸರ್ ಸರ್ಕಲ್ ಗಳಲ್ಲಿ ಕರ್ತವ್ಯಕ್ಕೆ ಹಾಜರಾಗದ ಗಣತಿದಾರರು ಮತ್ತು ಮೇಲ್ವಿಚಾರಕರ ವಿರುದ್ಧ ಜನಗಣತಿ ಕಾಯ್ದೆಯ1948ರ ಸೆಕ್ಷನ್- 11ರ ನಿಯಮಗಳ ಪ್ರಕಾರ, ಯಾವುದೇ ಜನಗಣತಿ ಅಧಿಕಾರಿ ಅಥವಾ ಜನಗಣತಿ ಕಾರ್ಯದಲ್ಲಿ ಸಹಾಯ ಮಾಡಲು ಕಾನೂನಿನ ಪ್ರಕಾರ ಕರೆಯಲ್ಪಟ್ಟ ಯಾವುದೇ ವ್ಯಕ್ತಿ.

ಈ ಕಾಯ್ದೆ ಅಥವಾ ಅದರ ಅಡಿಯಲ್ಲಿ ಮಾಡಲಾದ ಯಾವುದೇ ನಿಯಮಗಳಿಂದ ವಿಧಿಸಲ್ಪಟ್ಟ ಕರ್ತವ್ಯವನ್ನು ನಿರಾಕರಿಸಿದರೆ, ಅಥವಾ ಮತ್ತೊಬ್ಬ ವ್ಯಕ್ತಿ ಅಂತಹ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯುವ ಅಥವಾ ಅಡ್ಡಿಪಡಿಸುವುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಗೈರುಹಾಜರಾತಿ ಅವಧಿಯನ್ನು ಡೈಸ್-ನಾನ್ (Dies-Non) ಎಂದು ಪರಿಗಣಿಸಲಾಗುವುದು. ಸೇವಾ ನಿಯಮಾವಳಿಯಂತೆ ಶಿಸ್ತು ಕ್ರಮ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

ಆಯುಕ್ತರ ಎಚ್ಚರಿಕೆ: ಜನಗಣತಿ ಕಾರ್ಯವು ರಾಷ್ಟ್ರೀಯ ಮಹತ್ವದ ಕರ್ತವ್ಯವಾಗಿದ್ದು, ಈ ಕಾರ್ಯಕ್ಕೆ ನೇಮಕಗೊಂಡ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಕ್ಷಣವೇ ತಮಗೆ ನಿಯೋಜಿಸಲ್ಪಟ್ಟ ವಾರ್ಡ್ ವ್ಯಾಪ್ತಿಯಲ್ಲಿನ ಚಾರ್ಜ್ ಅಧಿಕಾರಿಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಮೂಲಕ ಜವಾಬ್ದಾರಿಯುತವಾಗಿ ರಾಷ್ಟ್ರೀಯ ಕಾರ್ಯವನ್ನು ನಿರ್ವಹಿಸುವಂತೆ ತಪ್ಪಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಆಯುಕ್ತರು ಎಚ್ಚರಿಕೆ ನೀಡಿದರು.

Deva
the authorDeva

Leave a Reply

error: Content is protected !!
Latest news
KKRTC: 26 ತಿಂಗಳ ಹಿಂಬಾಕಿ ಪಾವತಿಸಲು 3ದಿನದೊಳಗೆ ನೌಕರರ ಮಾಹಿತಿ ನೀಡಿ- ನಿಗಮದ ಡಿಸಿಗಳಿಗೆ ಲೆಕ್ಕಾಧಿಕಾರಿ ಆದೇಶ ಜನಗಣತಿ ಕಾರ್ಯಕ್ಕೆ ಗೈರಾದ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಆಯುಕ್ತ ರಮೇಶ್ ಎಚ್ಚರಿಕೆ ಸಿದ್ದಾರ್ಥ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಚಿರತೆ: ಪ್ರಾಣದ ಹಂಗು ತೊರೆದು ಅಮ್ಮನ ರಕ್ಷಿಸಿದ ಮಗಳು ಸಾರಿಗೆ ನೌಕರರ ಎಲ್ಲ ಸಂಘಟನೆಯವರು ಒಂದಾಗಿ ನೌಕರರಿಗೆ ಸಮಾನ ವೇತನ ಕೊಡಿಸಲು ಮುಂದಾಗಿ: ನೌಕರನ ಮನವಿ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರವು ಕಬ್ಬು ಬೇಸಾಯದಲ್ಲಿ ಎಐ ತಂತ್ರಜ್ಞಾನ ಜಾರಿಗೆ ತರಲಿ: ಕುರುಬೂರು ಶಾಂತಕುಮಾರ್ ಹುಚ್ಚಮ್ಮ ದೇವಿಯ 650 ಕುರಿಗಳ ಮೆರವಣಿಗೆ, 12 ಟನ್ ಮಟನ್ ಸಾರು: ಇತಿಹಾಸ ನಿರ್ಮಿಸಿದ ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಅನ್ನ... KSRTC: ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾಡುತ್ತಿರುವ ಪಾದಯಾತ್ರೆಗೂ ಅಡ್ಡಿ ಮಾಡುತ್ತಿರುವ ಜಂಟಿ ಸಂಘಟನೆ... ಸಾವಿರಾರು ಜನರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಆರೋಗ್ಯ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಸಾರಿಗೆ ನೌಕರರು... ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ನಿಮ್ಮ ನಿಮ್ಮ ಕುಟುಂಬದ ಭವಿಷ್ಯ ಶೂನ್ಯ! ನಾಳೆ ಸಕ್ಕರೆ ನಾಡು ಮಂಡ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ: ಸ್ವಾಗತಕ್ಕೆ ಸಜ್ಜಾದ ಶ್ರೀಮಠ