ಮೈಸೂರು: ಸರ್ಕಾರ ಈ ವರ್ಷ ಆನ್‌ಲೈನ್ ಕ್ಲಾಸ್ ಮಾಡಿ ಎಲ್ಲರನ್ನು ಪಾಸ್ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವೈಯುಕ್ತಿಕ ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತರಾತುರಿಯಲ್ಲಿ ಶಾಲೆ ಆರಂಭಿಸೋದು ಬೇಡ. ಬದಲಿಗೆ ಸಂಪೂರ್ಣ ಕೊರೊನಾ ಮುಕ್ತವಾದ ನಂತರ ತೆರೆಯಲಿ. ಇದರಿಂದ ಮಕ್ಕಳ ಪಾಲಕರು ಭಯಪಡುವುದು ತಪ್ಪುತ್ತದೆ ಎಂದು ಹೇಳಿದರು.
ಶಾಲೆಗಳ ಪುನಾರಂಭ ಕುರಿತು 5ದಿನದಲ್ಲಿ ದೃಢ ನಿರ್ಧಾರ: ಸಚಿವ ಸುರೇಶ್ ಕುಮಾರ್
ನೀರಿನಿಂದಾಚೆ ಮೋದಿ ಹೆಸರು ನಡೆಯೋಲ್ಲ
ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ನೀರಿನಿಂದಾಚೆಗಿನ ದೇಶಗಳಲ್ಲಿ ಮೋದಿ ಹೆಸರು ಲೆಕ್ಕಕ್ಕಿಲ್ಲ. ಹೀಗಾಗಿ ಅಮೆರಿಕದಲ್ಲಿ ಅವರ ಹೆಸರು ನಡೆಯೋದಿಲ್ಲ. ಟ್ರಂಪ್ ಸೋಲು ಅನುಭವಿಸುತ್ತಾರೆ. ಟ್ರಂಪ್ ಚುನಾವಣೆಯಲ್ಲಿ ಮೋದಿ ಹೆಸರು ಹೋಳಿಕೊಂಡು ಮತ ಕೇಳಿದ್ದರು. ಆದರೆ ಅಮೆರಿಕ ಚುನಾವಣೆಯೇ ಬೇರೆ ಎಂದರು.
ಇನ್ನು ಅನಿವಾಸಿ ಭಾರತೀಯರೂ ಮೋದಿ ಮುಖ ನೋಡಿಕೊಂಡು ವೋಟು ಕೊಡಲ್ಲ. ಭಾರತದಲ್ಲೇ ಮೋದಿ ವಿರುದ್ಧ ಜನಾಭಿಪ್ರಾಯ ಶುರುವಾಗಿದೆ. ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಿದ್ದಾರೆ. ಜಿಡಿಪಿ ಪಾತಾಳಕ್ಕೆ ಕುಸಿದಿದ್ದು, ಇದರಿಂದ ಯುವ ಜನರು ಮೋದಿ ವಿರುದ್ಧ ಸಿಟ್ಟು ಹೊರ ಹಾಕುತ್ತಿದ್ದಾರೆ ಎಂದು ಹೇಳಿದರು.