NEWSನಮ್ಮಜಿಲ್ಲೆ

ಬನ್ನೂರು: ಭಾಗ್ಯಜ್ಯೋತಿ ನಿವಾಸಿಗಳಿಗೆ ವಿದ್ಯುತ್‌ ಬಿಲ್‌ ಶಾಕ್‌- ಪಾವತಿಸದಿದ್ದರೆ ಕರೆಂಟ್‌ ಕಟ್‌ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು : ಕೊರೊನಾ ವೈರಸ್‌ನಿಂದಾಗಿ ಕೆಲಸವೂ ಇಲ್ಲದೇ ಇತ್ತ ಜೀವನ ಸಾಗಿಸುವುದಕ್ಕೆ ಪರದಾಡುತ್ತಿರುವ ಭಾಗ್ಯಜ್ಯೋತಿ ನಿವಾಸಿಗಳಿಗೆ ವಿದ್ಯುತ್‌ ಬಿಲ್‌ ಬಾಕಿ ಕಟ್ಟುವಂತೆ ಚೆಸ್ಕಾಂ ವಸೂಲಿಗೆ ಇಳಿದು ಬಡವರನ್ನು ಸುಲಿಗೆ ಮಾಡಲು ಹೊರಟಿದೆ.

ಮನೆಗೆ 500ರಿಂದ 1000 ಬಾಕಿ ಬಿಲ್‌ ಬಂದರೆ ಬಾಯಿ ಮೇಲೆ ಕೈಯಿಟ್ಟುಕೊಂಡು ಇಷ್ಟೊಂದಾ… ಎಂದು ಆಘಾತಕ್ಕೆ ಒಳಗಾಗುವ ಬಡ ಫಲಾನುಭವಿಗಳ ಮನೆಗೆ ಸಾವಿರಾರು ರೂ. ವರೆಗೆ ವಿದ್ಯುತ್‌ ಬಿಲ್‌ ಬಾಕಿ ಕಟ್ಟುವಂತೆ ಚೆಸ್ಕಾಂ ವಸೂಲಿಗೆ ಮುಂದಾಗಿರುವುದು ಭಾಗ್ಯಜ್ಯೋತಿ ನಿವಾಸಿಗಳು ಶಾಕ್‌ಗೆ ಒಳಗಾಗುವಂತೆ ಮಾಡಿದೆ.

ಜಿಲ್ಲೆಯ ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿನ ಜನತಾ ಕಾಲೋನಿಗಳ ನಿವಾಸಿಗಳು ಭಾಗ್ಯಜ್ಯೋತಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ವಿದ್ಯುತ್‌ ಬಿಲ್‌ ನೋಡದ ಫಲಾನುಭವಿಗಳ ಮನೆಗೆ ವಿದ್ಯುತ್‌ ಬಿಲ್‌ ಕೊಡಲಾಗುತ್ತಿದ್ದು ಇದನ್ನು ಕಂಡು ಫಲಾನುಭವಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಇಷ್ಟೊಂದು ಹಣ ಎಲ್ಲಿಂದ ಭರಿಸಬೇಕು. ಅದೇ ನ್ಯೂಡೆಲ್ಲಿಯಲ್ಲಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರ 200 ಯೂನಿಟ್‌ ವರೆಗೆ ಪ್ರತಿಯೊಬ್ಬರಿಗೂ ಊಚಿತವಾಗಿ ವಿದ್ಯುತ್‌ ನೀಡುತ್ತಿದೆ. ಆದರೆ, ನಮ್ಮ ರಾಜ್ಯ ಸರ್ಕಾರ ಉಚಿತ ಎಂದು ಹೇಳಿ ಈಗ ಹಣ ವಸೂಲಿ ಮಾಡುತ್ತಿದೆ. ಇದು ಹೀಗೆ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ನಿವಾಸಿಗಳು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾಗ್ಯಜ್ಯೋತಿ ಯೋಜನೆ
ಕಡು ಬಡವರಿಗೆ ಉಚಿತ ವಿದ್ಯುತ್‌ ನೀಡುವ ಯೋಜನೆ ಈ ಭಾಗ್ಯಜ್ಯೋತಿ. ಕೇವಲ 40 ಯೂನಿಟ್‌ ಉಚಿತ ವಿದ್ಯುತ್‌ ಬಳಕೆಗೆ ಅವಕಾಶ. ಹೆಚ್ಚುವರಿ ಕರೆಂಟ್‌ ಉರಿಸಿದರೆ ಅದಕ್ಕೆ ಬಿಲ್‌ ಭರಿಸಬೇಕು. ತಿಂಗಳವರೆಗೆ ಕೇವಲ ಒಂದು ಬಲ್ಬ್ ಉರಿಸಿದರೆ ಸಾಕು ಉಚಿತ 40 ಯೂನಿಟ್‌ ಮುಗಿದು ಹೋಗುತ್ತದೆ. ಜತೆಗೆ ಒಂದೇ ಬಲ್ಬನಿಂದ ಇಡೀ ಮನೆಯನ್ನು ಬೆಳಗಲು ಸಾಧ್ಯವಿಲ್ಲ.

ಆದರೆ ಪ್ರತಿ ಭಾಗ್ಯಜ್ಯೋತಿ ಮನೆಯಲ್ಲೂ ಕಡಿಮೆ ಎಂದರೆ ಮೂರರಿಂದ ನಾಲ್ಕು ಬಲ್ಬ್, ಟಿವಿ ಇದ್ದೇ ಇರುತ್ತವೆ. ಹೆಚ್ಚುವರಿ ವಿದ್ಯುತ್‌ ಉರಿಸಿದ ಫಲಾನುಭವಿಗಳಿಗೆ ಚೆಸ್ಕಾಂ ಬಿಲ್‌ ನೀಡಿ ಬಾಕಿಯನ್ನು ಪಾವತಿಸುವಂತೆ ಪೀಡಿಸುತ್ತಿರುವುದು ಫಲಾನುಭವಿಗಳ ಎದೆ ಬಡಿತ ಹೆಚ್ಚಾಗಲು ಕಾರಣವಾಗಿದೆ.

ಜನತಾ ಕಾಲೋನಿಗಳ ವಾಸವಾಗಿರುವ ಕಡು ಬಡವರ ಮನೆ ಬೆಳಗಲಿ ಎಂದು 40 ಯೂನಿಟ್‌ವರೆಗೆ ಉಚಿತ ಕರೆಂಟ್‌ ನೀಡಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರ ಭಾಗ್ಯಜ್ಯೋತಿ ಯೋಜನೆ ಜಾರಿಗೆ ತಂದಿತ್ತು. 40 ಯೂನಿಟ್‌ಗಿಂತ ಹೆಚ್ಚಿಗೆ ವಿದ್ಯುತ್‌ ಉರಿಸಿದ್ದ ಪ್ರತಿ ಭಾಗ್ಯಜ್ಯೋತಿ ಫಲಾನುಭವಿಗಳ ಹೆಸರಲ್ಲಿದ್ದ ಸಾವಿರಾರು ಬಾಕಿಹಣ ಭರಿಸುವಂತೆ ಈ ಸರ್ಕಾರ ಅಧಿಕಾರಿಗಳ ಮೂಲಕ ಎಚ್ಚರಿಕೆ ನೀಡುತ್ತಿದೆ.

ಈ ಹಿಂದೆ ಇದೇ ಯಡಿಯೂರಪ್ಪ ಸರ್ಕಾರ ಭಾಗ್ಯ ಜ್ಯೋತಿ ಫಲಾನುಭವಿಗಳು ಭರಿಸಬೇಕಾಗಿದ್ದ ಬಾಕಿ ಹಣವನ್ನು ಮನ್ನಾ ಮಾಡಿತ್ತು. ಈಗ ಮತ್ತೆ ಬಿಲ್‌ ಪಾವತಿಸುವಂತೆ ಒತ್ತಡ ಹೇರುತ್ತಿದ್ದು ಬಿಲ್‌ ಕಟ್ಟುವುದಕ್ಕೆ ಹಣವಿಲ್ಲದೆ ಭಾಗ್ಯಜ್ಯೋತಿ ಫಲಾನುಭವಿಗಳು ಬಾಕಿ ಹಣ ಮನ್ನಾ ಮಾಡುವಂತೆ ಬೀದಿಗೆ ಬಂದು ನಿಂತಿದ್ದಾರೆ. ಪ್ರತಿ ಮನೆಗೆ ಸಾವಿರಾರು ರೂಪಾಯಿ ವಿದ್ಯುತ್‌ ಬಾಕಿ ಹಣ ಭರಿಸುವಂತೆ ಚೆಸ್ಕಾಂ ಫಲಾನುಭವಿಗಳಿಗೆ ಬಿಲ್‌ ನೀಡಿ ಬನ್ನೂರು ವ್ಯಾಪ್ತಿಯ ಗ್ರಾಮಗಳ ಜನತಾ ಕಾಲೋನಿಯ ನಿವಾಸಿಗಳ ನಿದ್ದೆಗೆಡಿಸಿದೆ.

ಭಾಗ್ಯಜ್ಯೋತಿ ಯೋಜನೆ ಫಲಾನುಭವಿಗಳಿಗೆ 40 ಯೂನಿಟ್‌ ವರೆಗೆ ಉಚಿತವಾಗಿ ವಿದ್ಯುತ್‌ ನೀಡಲಾಗುವುದು ಅದಕ್ಕಿಂತ ಹೆಚ್ಚಾದರೆ ಅಂದರೆ 41 ಯೂನಿಟ್‌ ಉಪಯೋಗಿಸಿದರೂ ಭಾಗ್ಯಜ್ಯೋತಿ ಯೋಜನೆ ಫಲಾನುಭವಿಗಳೂ ಪೂರ್ತಿಯಾಗಿ ಎಲ್ಲಾ ಯೂನಿಟ್‌ ಹಣವನ್ನು ಪಾವತಿ ಮಾಡಲೇ ಬೇಕು. ಒಂದು ವೇಳೆ ಪಾವತಿ ಮಾಡದಿದ್ದರೆ. ಅಂಥ ಫಲಾನುಭವಿಗಳಿಗೆ ಒಂದು ವಾರ ಇಲ್ಲ 15 ದಿನಗಳು ಕಾಲವಕಾಶ ನೀಡಿ ನಂತರ ಅವರ ಮನೆಯ ವಿದ್ಯುತ್‌ಅನ್ನು ಕಡಿತಗೊಳಿಸಲಾಗುವುದು. ಇದು ನಮಗೆ ಈ ಸ್ಥಿತಿಯಲ್ಲಿ ಅನಿವಾರ್ಯವಾಗಿದೆ.

l ಮಹದೇವಯ್ಯ, ಎಇಇ ಬನ್ನೂರು

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ