ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮಂಗಳವಾರ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡಲ್ಲಿ ಅಕ್ಕಪಕ್ಕದ ಮನೆಗಳು ಸೇರಿ 3ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ನಗರದ ಹೊಸಗುಡ್ಡದಹಳ್ಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಭಾರಿ, ಇನ್ನು ಬೆಂಕಿಯನ್ನು ಸಂಪೂರ್ಣವಾಗಿ ತಹಬಿಗೆ ತರಲಾಗಿಲ್ಲ. ಈ ನಡುವೆ ಫ್ಯಾಕ್ಟರಿಯ ಹಿಂಭಾಗದಲ್ಲಿ ಇದ್ದ ಮನೆಗೂ ಬೆಂಕಿ ಆವರಸಿದ್ದು, ಸಂಪೂರ್ಣ ಸುಟ್ಟುಹೋಗಿದೆ. ಈ ಮನೆಯನ್ನು ಮೂರು ವರ್ಷದ ಹಿಂದಷ್ಟೇ ನಿರ್ಮಾಣ ಮಾಡಲಾಗಿತ್ತು ಎಂದು ಮನೆ ಮಾಲೀಕ ತಿಳಿಸಿದ್ದಾರೆ.
ಇನ್ನು ಮನೆಯ ಅಕ್ಕಪಕ್ಕದಲ್ಲಿ ಕೆಮಿಕಲ್ ಫ್ಯಾಕ್ಟರಿ ನಡೆಸುವುದಕ್ಕೆ ಮತ್ತು ಕೆಮಿಕಲ್ ದಾಸ್ತಾನು ಮಾಡುವುದಕ್ಕೆ ಅನುಮತಿ ಇಲ್ಲ. ಈ ನಡುವೆ ಹೇಗೆ ಇವರು ಫ್ಯಾಕ್ಟರಿ ನಡೆಸುತ್ತಿದ್ದರು ಎಂದು ಬಿಬಿಎಂಪಿ ಅಧಿಕಾರಿಗಳು ದಾಖಲೆಗಳನ್ನು ಕಲೆಹಾಕುತ್ತಿದ್ದಾರೆ.
ಅಗ್ನಿ ಅವಘಡ ನಿನ್ನೆ ಸಂಭವಿಸಿದೆ ಎಂಬ ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಎಂಟು ಅಗ್ನಿ ಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ಆರಿಸಲು ಸತತ ಪ್ರಯತ್ನ ನಡೆಸಿದವು ಆದರೂ ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದರಿಂದ ಇನ್ನಷ್ಟು ಅಗ್ನಿ ಶಾಮಕ ವಾಹನಗಳನ್ನು ಕರೆಸಲಾಯಿತು. ಇಂದು ಸ್ವಲ್ಪಮಟ್ಟಗೆ ಬೆಂಕಿಯ ಹೊಗೆ ಬರುತ್ತಿದ್ದು ಸಂಪೂರಣವಾಗಿ ನಂದಿಸಲಾಗಿಲ್ಲ.
ಆಕಸ್ಮಿಕ ಅನಾಹುತದಿಂದಾಗಿ ದಟ್ಟ ಹೊಗೆ ಬಾನೆತ್ತರಕ್ಕೆ ಆವರಿಸಿದೆ. ಜತೆಗೆ ಬೆಂಕಿಯ ಕೆನ್ನಾಲಿಗೆಗಳು ಆಕಾಶದತ್ತ ಚಿಮ್ಮುತ್ತಿದ್ದವು. ಘಟನೆ ಸಂಭವಿಸುತ್ತಿದ್ದಂತೆ ಮಾಲೀಕರು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವಘಡ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.