NEWSನಮ್ಮಜಿಲ್ಲೆನಮ್ಮರಾಜ್ಯ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ನಿಧನ

65 ವರ್ಷದ ಸಚಿವ ಡಿ. ಸುಧಾಕರ್ ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಇಂದು ಭಾನುವಾರ ನಸುಕಿನ ಜಾವ ನಿಧನರಾಗಿದ್ದಾರೆ.

65 ವರ್ಷದ ಸಚಿವ ಡಿ. ಸುಧಾಕರ್ ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಅವರ ಆರೋಗ್ಯ ಸಮಸ್ಯೆ ಬಿಗಡಾಯಿಸಿದ್ದರಿಂದ ಅವರನ್ನು ಮಣಿಪಾಲ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಸುಧಾಕರ್ ಚಿಕಿತ್ಸೆ ಸ್ಪಂದಿಸದೆ ಬೆಳಗಿನ ಜಾವ 3:15ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಡಿ.ಸುಧಾಕ‌ರ್ ಅವರು ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದು, ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಚಿತ್ರದುರ್ಗದ  ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದರು.

ಮೊಣಕಾಲು ಶಸ್ತ್ರಚಿಕಿತ್ಸೆ ಸಂಬಂಧ ಸಚಿವ ಸುಧಾಕ‌ರ್ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು.

ಬಳಿಕ ಅವರನ್ನು ಮಣಿಪಾಲ್‌ ಆಸ್ಪತ್ರೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಸುಧಾರಕರ್ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

ಅಂತಿಮ ದರ್ಶನಕ್ಕೆ ವ್ಯವಸ್ಥೆ: ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಸುಧಾಕರ್ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.  ಬಳಿಕ ಸ್ವಕ್ಷೇತ್ರ ಹಿರಿಯೂರು ನೆಹರು ಮೈದಾನದಲ್ಲೂ , ಆ ಬಳಿಕ ಅಲ್ಲಿಂದ ಚಳ್ಳಕೆರೆ ಡಿ.ಸುಧಾಕರ್ ಕ್ರೀಡಾಂಗಣದಲ್ಲೂ ಅಂತಿಮ ದರ್ಶನಕ್ಕೆ  ವ್ಯವಸ್ಥೆ  ಮಾಡಲಾಗಿದೆ.  ಈ ನಡುವೆ ಚಳ್ಳಕೆರೆ ಪಟ್ಟಣದ ಸಚಿವ ಡಿ. ಸುಧಾಕರ್ ಮನೆ ಬಳಿ ನೀರವ ಮೌನ ಆವರಿಸಿದೆ.

Megha
the authorMegha

Leave a Reply

error: Content is protected !!
Latest news
KSRTC- BMTC ನೂತನ ಎಂಡಿಗಳ ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು: ನೌಕರರ ಬೇಡಿಕೆ ಈಡೇರಿಕೆಗೆ ಸಭೆ ಕರೆಯಲು ಒತ್ತಾಯ ​NWKRTC ಸಂಸ್ಥೆಗೆ ಪ್ರಾಮಾಣಿಕ ಸೇವೆ ಸಲ್ಲಿಸಿ ನೂತನವಾಗಿ ನೇಮಕಗೊಂಡ ದರ್ಜೆ-2ರ ಅಧಿಕಾರಿಗಳಿಗೆ ಎಂಡಿ ಪ್ರಿಯಾಂಗಾ ಕರೆ BMTC ಘಟಕ-29ರ ಆವರಣದಲ್ಲೇ ನಡೆದ ಅಪಘಾತ: ಗಾಯಾಳು ಚಾಲಕನಿಗೆ 6 ಸಾವಿರ ಕೊಟ್ಟು ಸುಮ್ಮನಾದ ಅಧಿಕಾರಿಗಳು- ಬಸ್‌ ನಿಲ್ಲಿಸಿ... KSRTC ಪುತ್ತೂರು: ಬಿದ್ದು ಎರಡೂ ಕಾಲುಗಳ ಮುರಿದುಕೊಂಡಿದ್ದ ಚಾಲಕನಿಗೆ 71 ಸಾವಿರ ರೂ. ನೆರವು- ಧೈರ್ಯ ತುಂಬಿದ ಡಿಎಂ KSRTC ಅರಸೀಕೆರೆ: ಚಾಲನಾ ಸಿಬ್ಬಂದಿ ಒಗ್ಗಟ್ಟಿಗೆ ಮಣಿದು ಎಂಡಿಗೆ ನೋಟಿಸ್‌ ಜಾರಿ ಮಾಡಿದ ಕಾರ್ಮಿಕ ಆಯುಕ್ತರು ಅರ್ಹ ದಲಿತರು, ಹಿಂದುಳಿದವರಿಗೆ ಯೋಜನೆ ಸೌಲಭ್ಯ ತಲುಪಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಅನುರಾಧ ತಾಕೀತು ಮಾವು ಬೆಳೆ ಹೆಕ್ಟೇರಿಗೆ 80 ಸಾವಿರ ರೂ. ಸಿಗಲಿದ್ದು ರೈತರು ಬೆಳೆ ವಿಮೆಗೆ ಅರ್ಜಿ ಹಾಕಿ: ಹಿರಿಯ ಸಹಾಯಕ ತೋಟಗಾರಿಕೆ ನಿರ್... ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ಭಾರಿ ನಗದು ಬಹುಮಾನ: ಕ್ರೀಡಾಪಟುಗಳ ಬದುಕಿಗೆ ಭರವಸೆ ನೀಡಿದ ಸಿಎಂ BMTC: ಮಹಿಳಾ ಕಂಡಕ್ಟರ್‌ಗಳಿಗೆ ಶೇ.33ರಷ್ಟು ಮುಂಬಡ್ತಿ ಮೀಸಲಾತಿ ಅಸಾಧ್ಯ- ಸಂಸ್ಥೆ ನಿಯಮದಲ್ಲೂ ಇಲ್ಲ ಅವಕಾಶ ಎಂದ ಸಿಪಿಎ... ಶಕ್ತಿಯೋಜನೆಗಾಗಿ ರಾಜಸ್ಥಾನದ ಆಧಾರ್‌ ಕಾರ್ಡ್‌ಗೆ ಬೆಂಗಳೂರು ನಿವಾಸಿ ಎಂಬ ನಕಲಿ ಕಾರ್ಡ್‌ ಸೃಷ್ಟಿಸಿಕೊಂಡು ಮಹಿಳೆ ಓಡಾಟ!