ಜಮ್ಮು: ಜಮ್ಮುವಿನ ನಾಗ್ರೋಟಾದ ಬಳಿಯ ನಿಷೇಧಿತ ಟೋಲ್ ಪ್ಲಾಜಾ ಬಳಿ ಗುರುವಾರ ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಭಾರತೀಯ ಭದ್ರತಾ ಪಡೆಗಳು ಯಶಸ್ವಿಯಾಗಿವೆ.
ಉಗ್ರರು ಅಡಗಿರುವ ಶಂಕೆ ಮೇರೆಗೆ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಗಂಟೆಗಳು ಕಾರ್ಯಾಚರಣೆ ನಡೆದಿದೆ. ಈ ವೇಳೆ ಇಲ್ಲಿ ಮೂರು-ನಾಲ್ಕು ಉಗ್ರರು ಇರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ತಮ್ಮ ಬೇಟಿ ಮುಂದುವರಿಸಿದ್ದರಿಂದ ಉಗ್ರರು ಸಿಕ್ಕಿಬಿದ್ದಿದ್ದಾರೆ.
ನಿಷೇಧಿತ ಟೋಲ್ ಪ್ಲಾಜಾ ಬಳಿ ಭದ್ರತಾ ಪಡೆಗಳು ನಾಕಾ ಬಂದಿ ಹಾಕಿ, ವಾಹನಗಳ ತಪಾಸಣೆ ನಡೆಸುವಾಗ ಉಗ್ರರ ಗುಂಪೊಂದು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿ, ಅರಣ್ಯದತ್ತ ಓಡಿದೆ. ತಕ್ಷಣವೇ ಮುಂಜಾನೆ 5ರಲ್ಲಿ ಎನ್‌ಕೌಂಟರ್ ಆರಂಭಿಸಿ ಸದೆ ಬಡಿದ್ದಾರೆ.
ಇನ್ನು ನಿಷೇಧಿತ ಟೋಲ್ ಪ್ಲಾಜಾ ಬಳಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಮುಜಾಗ್ರತಾ ಕ್ರಮವಾಗಿ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.