KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸಿ
ಅತಿಕುಶಲರಿಗೆ ತಿಂಗಳಿಗೆ 34225 ರೂ. ಮಾಲಿಗಳಿಗೆ 19319 ರೂ. ಕನಿಷ್ಠ ವೇತನ ಹೀಗೆ ಅವರ ಹುದ್ದೆಗಳಿಗೆ ತಕ್ಕಂತೆ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ, ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕಾರ್ಮಿಕ ಇಲಾಖೆ ಸರ್ಕಾರದ ಅಧೀಣ ಕಾರ್ಯದರ್ಶಿ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ ಕನಿಷ್ಠ ವೇತನ ದರಗಳನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ಪರಿಷ್ಕರಿಸಿ ಕಾರ್ಮಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ತುಳಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ನಿನ್ನೆ ಅಂದರೆ ಮೇ 22-2026ರಂದು ಆದೇಶ ಹೊರಡಿಸಿರು ತುಳಸಿ ಅವರು ಕನಿಷ್ಠ ವೇತನ ನೀಡುವ ಬಗ್ಗೆ ಮೂರು ವಲಯಗಳಾಗಿ ವಿಂಗಡಿಸಿದ್ದು ವಲಯ-1ರಲ್ಲಿ ಗುರುತಿಸಿಕೊಳ್ಳುವ ಕಾರ್ಮಿಕರಿಗೆ ಅಂದೆ ಅತಿಕುಶಲರಿಗೆ ತಿಂಗಳಿಗೆ 34225.42 ರೂ.ಗಳ ಕನಿಷ್ಠ ವೇತನ ನಿಗದಿ ಮಾಡಲಾಗಿದೆ. ವಲಯ-2 ಅತಿಕುಶಲರಿಗೆ ತಿಂಗಳಿಗೆ 31114.02 ರೂ.ಗಳನ್ನೂ ಹಾಗೂ ವಲಯ-3 ಅತಿಕುಶಲರಿಗೆ 28285.47 ರೂ.ಗಳ ಕನಿಷ್ಠ ವೇತನವನ್ನು ನಿಗದಿಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಇನ್ನು ಅದರಂತೆ ವಲಯ-1ರ ಕುಶಲ ಕಾರ್ಮಿಕರಿಗೆ ತಿಂಗಳಿಗೆ 31114.02 ರೂ.ಗಳನ್ನು ವಲಯ-2ರ ಕುಶಲ ಕಾರ್ಮಿಕರಿಗೆ 28285.47 ರೂ.ಗಳನ್ನು ಹಾಗೂ ವಲಯ-3ರ ಕುಶಲ ಕಾರ್ಮಿಕರಿಗೆ 25714.07 ರೂ.ಗಳ ಕನಿಷ್ಠ ವೇತನ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ.
ಅಲ್ಲದೆ ವಲಯ-1ರ ಅರೆಕುಶಲ ಕಾರ್ಮಿಕರಿಗೆ ತಿಂಗಳಿಗೆ 28285.47 ರೂ.ಗಳನ್ನು, ವಲಯ-2ರ ಅರೆಕುಶಲ ಕಾರ್ಮಿಕರಿಗೆ ತಿಂಗಳಿಗೆ 25714.07 ರೂ.ಗಳನ್ನು ಹಾಗೂ ವಲಯ-3ರ ಅರೆಕುಶಲ ಕಾರ್ಮಿಕರಿಗೆ ತಿಂಗಳಿಗೆ 23376.43 ರೂ.ಗಳನ್ನು ನಿಗದಿ ಮಾಡಲಾಗಿದೆ.
ಇನ್ನು ವಲಯ-1ರ ಅಕುಶಲ ಕಾರ್ಮಿಕರಿಗೆ ತಿಂಗಳಿಗೆ 25714.07 ರೂ.ಗಳು, ವಲಯ-2ರ ಅಕುಶಲ ಕಾರ್ಮಿಕರಿಗೆ ತಿಂಗಳಿಗೆ 23376.43 ರೂ.ಗಳು, ವಲಯ-1ರ ಅಕುಶಲ ಕಾರ್ಮಿಕರಿಗೆ ತಿಂಗಳಿಗೆ 21251.30 ರೂ.ಗಳ ಕನಿಷ್ಠ ವೇತನ ನಿಗದಿ ಮಾಡಲಾಗಿದೆ.
ಈ ವೇತನವನ್ನು ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ಅಥವಾ ಚೆಕ್ ಮೂಲಕ ಪಾವತಿ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಅಲ್ಲದೆ ಈ ಮೂರು ವಲಯಗಳ ಇತರ ಕೆಲಸಗಳನ್ನು ಇಲ್ಲಿ ಪರಿಗಣಿಸಲಾಗಿದ್ದು, ಇದರಲ್ಲಿ ಮಾಲಿಗಳು ಇವರಿಗೆ ಸಮನಾದ ಕೆಲಸ ಮಾಡುವವರಿಗೆ ದಿನಕ್ಕೆ 743.05 ರೂ.ಗಳಂತೆ ಅಂದರೆ ಕನಿಷ್ಠ 19319.36 ರೂ.ಗಳನ್ನು ತಿಂಗಳಿಗೆ ವೇತನವಾಗಿ ಪಾವತಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಯಾವ ಕೆಲಸಕ್ಕೆ ಎಷ್ಟು ಸಂಬಳ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ ಎಂಬುದನ್ನು ಪ್ರತಿಯೊಬ್ಬರು ಇಲ್ಲಿ ಕೊಟ್ಟಿರುವ ಪಿಡಿಎಫ್ ಫೈನ್ ನಲ್ಲಿ ನೋಡಿಕೊಳ್ಳಬಹುದಾಗಿದೆ. Minimum Wages Final Notification
Related









