NEWSನಮ್ಮರಾಜ್ಯಸಂಸ್ಕೃತಿ

100 ವರ್ಷವಾದರೂ ಸಾಧನೆಗಳ ಮೂಲಕ ಅರಸು ಜೀವಂತ: ಸಿಎಂ ಡಿ.ಕೆ.ಶಿವಕುಮಾರ್‌

ದೇವರಾಜ ಅರಸು ಅವರು ನಮ್ಮನ್ನು ಅಗಲಿ 45 ವರ್ಷಗಳಾಗಿವೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಅವರ ಭಾಷಣಗಳನ್ನು ಕೇಳಿದ್ದೇನೆ. ಅವರು ರಾಜೀನಾಮೆ ಕೊಟ್ಟಾಗ ಮಾಡಿದ ಕೊನೇ ಭಾಷಣ ನನ್ನ ಕಿವಿಯಲ್ಲಿ ಹಾಗೆ ಉಳಿದಿದೆ-ಸಿಎಂ ಡಿಕೆಶಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: “ದೇವರಾಜ ಅರಸು ಅವರು ನಮ್ಮ ರಾಜ್ಯದ ಪ್ರಗತಿಗೆ ಅಡಿಪಾಯ ಹಾಕಿದ್ದಾರೆ. 100 ವರ್ಷವಾದರೂ ಸಾಧನೆಗಳ ಮೂಲಕ ಅವರು ಜೀವಂತವಾಗಿರುತ್ತಾರೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.‌

ಅವರು ಇಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಅರಸುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇವರಾಜ ಅರಸು ಅವರು ನಮ್ಮನ್ನು ಅಗಲಿ 45 ವರ್ಷಗಳಾಗಿವೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಅವರ ಭಾಷಣಗಳನ್ನು ಕೇಳಿದ್ದೇನೆ. ಅವರು ರಾಜೀನಾಮೆ ಕೊಟ್ಟಾಗ ಮಾಡಿದ ಕೊನೇ ಭಾಷಣ ನನ್ನ ಕಿವಿಯಲ್ಲಿ ಹಾಗೆ ಉಳಿದಿದೆ ಎಂದರು.

ಇನ್ನು ಅವರು ಅವರು ಯಾವ ಭಾವನೆಯೊಂದಿಗೆ ರಾಜಕಾರಣ, ಅಧಿಕಾರ ನಡೆಸಿದ್ದೇನೆ ಎಂಬ ಬಗ್ಗೆ ಹೇಳಿದ್ದರು. ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಅರಸು ಅವರ ನಾಯಕತ್ವದಲ್ಲಿ ಉಳುವವನಿಗೆ ಭೂಮಿ ನೀಡಬೇಕು ಎಂದು ತಂದ ಭೂ ಸುಧಾರಣಾ ಕಾಯ್ದೆ ದೇಶಕ್ಕೆ ಒಂದು ಮಾದರಿ. ಅದೊಂದು ಕ್ರಾಂತಿ ಎಂದು ನೆನಪಿಸಿಕೊಂಡರು.

ಅರಸು ಅವರೊಬ್ಬ ಧೀಮಂತ ನಾಯಕ. ಅವರು ಎಲ್ಲ ಜನಾಂಗದವರನ್ನು ಬೆಳೆಸಿ, ಹಿಂದುಳಿದ ವರ್ಗಗಳ ನಾಯಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಿಂದುಳಿದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಸಲು ಅವರು ಕ್ರಮ ಕೈಗೊಂಡರು ಎಂದು ಹೇಳಿದರು.

ಅಂದಿನ ಕಾಲದಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಅಡಿಪಾಯ ಹಾಕಿದ ಧೀಮಂತ ನಾಯಕ ಅರಸು ಅವರು. ರೈತರು ಮಾತ್ರವಲ್ಲ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದರು. ಅವರ ಕೊಡುಗೆಯನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದೇವೆ. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಬಳಿಕ ಎಲ್ಲ ನಾಯಕರಿಗೆ ನಮನ ಅರ್ಪಿಸಿದ್ದೆ, ಇಂದು ಅರಸು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ” ಎಂದರು.

Deva
the authorDeva

Leave a Reply

error: Content is protected !!
Latest news
ರಾಮಲಿಂಗಾರೆಡ್ಡಿ: ರಾಜೀನಾಮೆ ವಾಪಸ್‌ -ಡಿಕೆಶಿ ಸರ್ಕಾರದಲ್ಲಿದ್ದ ಭಿನ್ನಮತ ಶಮನ ಸರ್ಕಾರದ ಮಹತ್ವಾಕಾಂಕ್ಷಿ ಭೂ ಗ್ಯಾರಂಟಿ ಯೋಜನೆಯ "ನನ್ನ ಇ-ಖಾತಾ ನನ್ನ ಹಕ್ಕು" ಅಭಿಯಾನಕ್ಕೆ ಉತ್ತಮ ಸ್ಪಂದನೆ ಪಾರ್ಕ್‌ಗಳ ನಡಿಗೆದಾರರ ಸ್ನೇಹಿಯನ್ನಾಗಿ ರೂಪಿಸಿ: ನೂತನ ಆಯುಕ್ತ ಜಗದೀಶ್ ಕರೆ 100 ವರ್ಷವಾದರೂ ಸಾಧನೆಗಳ ಮೂಲಕ ಅರಸು ಜೀವಂತ: ಸಿಎಂ ಡಿ.ಕೆ.ಶಿವಕುಮಾರ್‌ ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗ: ನೈರ್ಮಲ್ಯ ಇಲಾಖೆ ಆಯುಕ್ತೆ ಫೌಜಿಯಾ ನಾಳೆ ಇಪಿಎಸ್-95, BMTC-KSRTC ನಿವೃತ್ತ ನೌಕರರ ಸಂಘದ 101ನೇ ಮಾಸಿಕ ಸಭೆ ಸಾರಿಗೆ ನೌಕರರ ವೇತನ ಹೆಚ್ಚಳ ವಿಷಯ: ಜೂ.23ರ ಕೋರ್ಟ್ ವಿಚಾರಣೆಯತ್ತ ಎಲ್ಲರ ಚಿತ್ತ ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಮಾವು-ಹಲಸು ಮೇಳ: ಸಚಿವ ಮುನಿಯಪ್ಪ ಕುಣಿಹಳ್ಳಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ಗಿಡ ನೆಟ್ಟು ಪರಿಸರ ಜಾಗೃತಿ ವಿದೇಶದಲ್ಲಿ ಕನ್ನಡ ಕಲಿಕೆ: ‘ಕರ್ನಾಟಕ ಸಂಘ ಕತಾರ್’ನ ಅಧ್ಯಕ್ಷ ಸುಬ್ರಮಣ್ಯ ಅಭಯ