ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಗೋಕುಲದ ಅಧ್ಯಕ್ಷ ಲಯನ್ ಅರವಿಂದ
ನಮ್ಮ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನವನ್ನು ವಹಿಸಿದ ಕ್ಲಬ್ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ಲಯನಿಸಂನ "ನಾವು ಸೇವೆ ಸಲ್ಲಿಸುತ್ತೇವೆ" (We Serve) ಎಂಬ ಧ್ಯೇಯವಾಕ್ಯದಡಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ವ್ಯಕ್ತಪಡಿಸಿದರು.
Deva10.06.2026

ಬೆಂಗಳೂರು: ಲಯನ್ ಎಂ.ಎ.ಅರವಿಂದ ಅವರು 2026–27ನೇ ಸಾಲಿನ ಲಯನಿಸ್ಟಿಕ್ ವರ್ಷದ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಗೋಕುಲದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಜೂ.7ರಂದು ನಡೆದ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪಿಎಂಜೆಎಫ್ ಲಯನ್ ಕೆ.ಎಸ್. ಅಜಿತ್ ಬಾಬು ಪ್ರಮಾಣ ವಚನ ಬೋಧಿಸಿ ಅಧಿಕಾರ ಹಸ್ತಾಂತರ ಮಾಡಿದರು ಹಾಗೂ ನೂತನ ತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಯನ್ ಅರವಿಂದ, ನಮ್ಮ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನವನ್ನು ವಹಿಸಿದ ಕ್ಲಬ್ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ಲಯನಿಸಂನ “ನಾವು ಸೇವೆ ಸಲ್ಲಿಸುತ್ತೇವೆ” (We Serve) ಎಂಬ ಧ್ಯೇಯವಾಕ್ಯದಡಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಗಣ್ಯರು, ಮಾಜಿ ಜಿಲ್ಲಾ ಗವರ್ನರ್‌ಗಳು, ಲಯನ್ಸ್ ಸದಸ್ಯರು ಹಾಗೂ ಆಹ್ವಾನಿತ ಅತಿಥಿಗಳು ಉಪಸ್ಥಿತರಿದ್ದರು.
Related


Deva







