KSRTC ಎಂಡಿ ಅಕ್ರಮ್‌ಪಾಷ ವರ್ಗಾವಣೆ ಪ್ರಭಾರ ಎಂಡಿಯಾಗಿ ಡಾ.ಆರ್. ಸೆಲ್ವಮಣಿ ನೇಮಕ ಮಾಡಿ ಸರ್ಕಾರದ ಆದೇಶ
ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಡಾ. ಸೆಲ್ವಮಣಿ ಆರ್. ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ) ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಡಾ.ಆರ್. ಸೆಲ್ವಮಣಿ ಅವರನ್ನು ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.
ನಿಗಮದಲ್ಲಿ ಈವರೆಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಕ್ರಮ್ ಪಾಷ ಅವರನ್ನು ಸಂಸ್ಥೆಗೆ ಬಂದು ವರ್ಷ ಕಳೆಯುವದರೊಳಗೆ ಯಾವುದೇ ಹುದ್ದೆ ತೋರದೆ ಸರ್ಕಾರ ವರ್ಗಾವಣೆ ಮಾಡಿದ್ದು, ಆ ಸ್ಥಾನಕ್ಕೆ ಇಂದು ಡಾ.ಆರ್. ಸೆಲ್ವಮಣಿ ಅವರು ಪ್ರಭಾರವಾಗಿ ನೇಮಕಗೊಂಡಿದ್ದಾರೆ.
ಕಳೆದ ಒಂದು ವರ್ಷ ಇದೇ ಜೂನ್ 12ರಂದು ನಿಗಮದ ಎಂಡಿಯಾಗಿ ಅಕ್ರಮ್ ಪಾಷ ಅವರನ್ನು ನೇಮಕ ಮಾಡಲಾಗಿತ್ತು. ಈ ನಡುವೆ ನಿಗಮಕ್ಕೆ ಎಂಡಿ ಆಗಿ ಬಂದ ಬಳಿಕೆ ನೌಕರರಿಗೆ ಅಷ್ಟೇನು ಒಳ್ಳೆಯದಾಗುವ ರೀತಿಯಲ್ಲಿ ಎಂಡಿ ಸ್ಪಂದಿಸಿಲ್ಲ. ಜತೆಗೆ ಡ್ಯೂಟಿಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಹೇಳಿಕೊಳ್ಳಲು ನೌಕರರು ಹೋದರೆ ಅವರನ್ನು ಒದ್ದು ಹೊರಗಾಕಿ ಎಂದು ಹೇಳುತ್ತಿದ್ದರು.
ಇನ್ನು ನೌಕರರಿಗೆ 2020ರ ಜನವರಿ ಒಂದರಿಂದ ಅನ್ವಯವಾಗುವಂತೆ 2023ರ ಮಾರ್ಚ್‌ನಲ್ಲಿ ಆಗಿರುವ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ವೇತನ ಹೆಚ್ಚಳವಾಗಬೇಕಿದ್ದನ್ನು ಸರ್ಕಾರದೊಂದಿಗೆ ಮಾತನಾಡಿ ಕೊಡಿಸುವಲ್ಲಿ ಎಂಡಿ ವಿಫಲರಾಗಿದ್ದಾರೆ. ಆ ಬಗ್ಗೆ ಈವರೆಗೂ ನೌಕರರಿಗೆ ಅಸಮಾಧಾನವಿದೆ. ಈ ಎಲ್ಲವನ್ನು ಸರ್ಕಾರದ ಜತೆ ಮಾತನಾಡಿ ಕೊಡಿಸುವ ಗರುತರವಾದ ಜವಾಬ್ದಾರಿಯಿಂದ ಅಕ್ರಮ್ ಪಾಷ ಅವರು ನಯವಾಗಿ ಜಾರಿಕೊಂಡಿದ್ದು ನೌಕರರ ಬೇಸರಕ್ಕೆ ಕಾರಣವಾಗಿದೆ.
ಸರ್ಕಾರದ ಜತೆ ಮಾತನಾಡಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸುತ್ತಾರೆ ಎಂಬ ಕುತೂಹಲದಲ್ಲಿ ನಾಲ್ಕೂ ನಿಗಮದ ನೌಕರರಿದ್ದರು. ಆದರೆ ಅವರ ನಿರೀಕ್ಷೆಯನ್ನು ಹುಸಿಗೊಳ್ಳಿಸಿದ್ದು ಇದೇ ಅಕ್ರಮ್‌ಪಾಷ ಅವರು ಎಂಬುವುದು ನೋವಿನ ಸಂಗತಿ.
ಜತೆಗೆ ಡಿಪೋಗಳ ಮಟ್ಟದಲ್ಲಿ ಚಾಲನಾ ಸಿಬ್ಬಂದಿ ಸೇರಿದಂತೆ ಇತರ ನೌಕರರಿಗೆ ಆಗುತ್ತಿರುವ ಮಾನಸಿಕ ಕಿರುಕುಳ ಹಾಗೂ ಲಂಚಾವತಾರಕ್ಕೂ ಕಡಿವಾಣ ಹಾಕುವ ಜಾಣ್ಮೆಯನ್ನು ಅಕ್ರಮ್‌ಪಾಷ ತೋರಿಸುತ್ತಾರೆ ಎಂದು ನಂಬಲಾಗಿತ್ತು ಆ ನಂಬಿಕೆಯನ್ನು ಇವರು ಉಳಿಸಿಕೊಳ್ಳುವಲ್ಲಿ ಸೋತಿದ್ದಾರೆ.
ಇನ್ನು ಇವರು ಬರುವುದಕ್ಕಿಂತ ಹಿಂದೆ ಇದ್ದ ಎಂಡಿ ವಿ.ಅನ್ಬುಕುಮಾರ್ ಅವರು ನೌಕರರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಿರುವ ಯೋಜನೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಗುರುತರ ಆರೋಪದಡಿ ಲೋಕಾಯುಕ್ತಕ್ಕೆ ಕೆಆರ್‌ಎಸ್ ಪಕ್ಷದ ಮುಖಂಡರು 2025ರ ಏಪ್ರಿಲ್‌ನಲ್ಲಿ ದೂರು ನೀಡಿದ್ದರು. ಈ ಹಿನ್ನೆಯಲ್ಲಿ ಅವರನ್ನು ಸರ್ಕಾರ ರಜೆ ಮೇಲೆ ಕಳುಹಿಸಿ ಬಳಿಕ ವರ್ಗಾವಣೆ ಮಾಡಿತ್ತು.
ಆದರೆ, ಅಕ್ರಮ್ ಪಾಷ ಅವರನ್ನು ಈಗ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ. ಇದು ನೌಕರರ ಕಣ್ಣೀರಿನ… ಇರಬಹುದೇ ಗೊತ್ತಿಲ್ಲ. ಆದರೆ, ನೌಕರರಿಗೆ ನ್ಯಾಯಯುತವಾಗಿ ಕೊಡದ ಮತ್ತು ಕೊಡಿಸದ ಯಾರು ಕೂಡ ಖುಷಿಯಿಂದ ಅಧಿಕಾರ ಬಿಟ್ಟಿರುವುದು ಈವರೆಗೂ ಇಲ್ಲವೇ ಇಲ್ಲ.
Related









