NEWSಲೇಖನಗಳುಸಿನಿಪಥ

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಹೊಸ ಪ್ರತಿಭೆ “ಉತ್ತಮ್‌” ಎಂಟ್ರಿ

ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಪ್ರತಿಭಾನ್ವೇಷಣೆ ವಿಶೇಷ
    ಚಿತ್ರರಂಗದಲ್ಲಿ ಅದರಲ್ಲೂ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಬೇಕು ಎಂಬ ಮಹಾದಾಸೆ ಜತೆಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡು ಬರುವ ನೂರಾರು ಯುಕರಲ್ಲಿ ಕೆಲವರಿಗೆ ಮಾತ್ರ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟದ ಬಾಗಿಲು ತೆರೆಯುತ್ತದೆ. ಅದಕ್ಕೆ ಆ ಯುವ ಪ್ರತಿಭೆಗಳ ಪ್ರತಿಭೆಯೂ ಒಂದು ವರವಾದರೆ ಮತ್ತೊಂದು ಅವರ ಅದೃಷ್ಟವೂ ಎಂದು ಹೇಳಬಹುದು.

ಹೌದು! ಇಷ್ಟೊಂದು ಪೀಠಿಕೆ ಹಾಕುತ್ತಿರುವುದು ಏಕೆ ಎಂದು ನೀವು ಯೋಚಿಸುತ್ತಿದ್ದೀರ…? ಅದಕ್ಕೆ ಪಕ್ಕ ಕಾರಣವೂ ಇದೆ. ಅದೇನೆಂದರೆ ನಟನೆ ಎಂದರೆ ಏನು ಸಿನೆಮಾ ಮಾಡುವುದರ ಹಿಂದೆ ಏನೆಲ್ಲ ಪರಿಶ್ರಮವಿದೆ ಎನ್ನುವುದನ್ನೇ ತಿಳಿಯದ ಹಳ್ಳಿಹೈದನೊಬ್ಬ ನಾನು ಸಿನಿಮಾದಲ್ಲಿ ನಟಿಸಿ ಒಂದು ಉತ್ತಮ ಸ್ಥಾನ ಪಡೆಯಬೇಕು ಎಂಬ ಹಠದಿಂದ ಪ್ಯಾಟೆಗೆ ಬಂದು ಗಾಂಧಿನಗರಲ್ಲಿ ಛಾಪು ಮೂಡಿಲು ಸಿದ್ಧನಾಗಿರುವುದು.

ಯಸ್‌ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಹೊಸ ಮುಖ ಪರಿಚಯವಾಗುತ್ತಿದ್ದು, ಅದು ನಾಯಕ ನಟನಾಗಿ ಬೆಳ್ಳಿ ತೆರೆಯ ಮೇಲೆ ಮಿಂಚುವುದಕ್ಕೆ ರೆಡಿಯಾಗಿದ್ದಾರೆ. ಅದು ಯಾರು ಅಲ್ಲ ತುಮಕೂರಿನ ಉಪ್ಪಾರಹಳ್ಳಿಯ ಮಧ್ಯಮವರ್ಗದ ಉತ್ತಮ್‌ಎಂಬ ಪ್ರತಿಭೆ.

ಈತ  ಹಲವಾರು ರಂಗ ಶಾಲೆಗಳಲ್ಲಿ ಮೊದಲಿಗೆ ರಂಗ ತರಬೇತಿ ಪಡೆದು ನಂತರ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಈಗ ನಾವು ಹೇಳ ಹೊರಟಿರುವುದು ಆತನ ಬಗ್ಗೆಯೇ. ನಿಮಗೆ ಆತ ಯಾರು ಎನ್ನುವುದೇ ಗೊತ್ತಿಲ್ಲ ಹೀಗಿರುವಾಗ ಇಷ್ಟೊಂದು ಹೇಳುವುದು ಒಂದು ರೀತಿ ಉತ್ಪ್ರೇಕ್ಷೆ ಅಲ್ಲವೆ ಎನಿಸಬಹುದು. ಆದರೆ ಆತ ಬೆಳ್ಳಿ ತೆರೆಯಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಪಡುತ್ತಿರುವ ಪರಿಶ್ರಮಕ್ಕೆ ಇದು ಸಾಸಿವೆಯಷ್ಟೇ ಎಂದು ಅನಿಸುತ್ತಿದೆ. ಅಂದಹಾಗೆ ಈಗ ಸ್ವಲ್ಪ ಪಟ್ಟಿಗೆ ಆತನ ಶ್ರಮಕ್ಕೆ ಫಲ ಸಿಕ್ಕುವ ಕಾಲ ಬಂದಿದೆ.

ಸುಂದರವಾದ ಹಳೆಯ ಊರಲ್ಲಿ ಹೊಸ ಜಾತ್ರೆ !
ಇನ್ನು ನನ್ನ ಗೆಳೆಯ ಪುಟ್ಟಸ್ವಾಮಿ ಅವರ ಮನದಲ್ಲಿ ಮೂಡಿರುವಂತೆ ಸುಂದರವಾದ ಹಳೆಯ ಊರಲ್ಲಿ ಹೊಸ ಜಾತ್ರೆ ! ಅಲ್ಲೊಂದು ರಂಗಮಂದಿರ ಅದರ ಹೆಸರು ಸ್ಯಾಂಡಲ್‌ವುಡ್! ಇಲ್ಲಿಗೆ ಬರುವವರು ಎಷ್ಟೋ ಮಂದಿ! ಬಂದು ನೆಲೆ ನಿಂತವರೂ  ಎಷ್ಟೋ ! ಬದುಕು ಕಟ್ಟಿಕೊಂಡು ಚರಿತ್ರೆ ಸೃಷ್ಟಿಸಿದವರು ಇನ್ನೆಷ್ಟೋ !

ಎಂದು ಹೇಳಿರುವಂತೆಯೇ ತುಮಕೂರಿನ ಉಪ್ಪಾರ ಹಳ್ಳಿಯ ಉತ್ತಮ್‌ ಈಗ  ಸ್ಯಾಂಡಲ್‌ವುಡ್‌ನಲ್ಲಿ ಕಣ್ಣುಬಿಡುತ್ತಿರುವ ಹಸುಗೂಸು. ಈತ  ಸಾಫ್ಟ್‌ಆಂಡ್‌ಸ್ಮಾರ್ಟ್‌. ಈತನೇ ಹೇಳುವಂತೆ ಬಣ್ಣದ ಲೋಕಕ್ಕೆ ಬರಬೇಕು ಎಂಬ ಹೆಬ್ಬಯಕೆಯೊಂದಿಗೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಗಾಂಧಿನಗರದತ್ತ ಮುಖ ಮಾಡಿದ್ದಾನೆ. ಇಲ್ಲಿಗೆ ಬಂದಮೇಲೆ ಒಂದಷ್ಟು ದಿನ ಅಲೆದಾಟ ವನವಾಸವನ್ನು ಅನುಭವಿಸಿದ್ದು, ಸದ್ಯ “ಮಹಾಕರ್ಮ” ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾನೆ.

ಇದಕ್ಕೂ ಮುನ್ನ ನಟನೆಯಲ್ಲಿ ಪರಿಪಕ್ವತೆ ಕಾಣಲು ನಾಗರಾಜು ಕೋಟೆಯವರ ಸಾರಥ್ಯದ ಬಣ್ಣದ ಆಕ್ಟಿಂಗ್ ಕ್ಲಾಸ್‌ಗೆ ಗಮನಕೊಟ್ಟು ನಟನೆಯಲ್ಲಿ ಪಕ್ವ ಆದಮೇಲೆ ರವೀಂದ್ರ ಕಲಾಕ್ಷೇತ್ರದಲ್ಲಿ ಪರಿಚಯವಾದ ಗೆಳೆಯರೊಡನೆ ಕೋಲಾರದ ಆದಿಮ ನಾಟಕ ಕಂಪನಿಯಲ್ಲಿ ಒಂದಷ್ಟು ದಿನ ತರಬೇತಿ ಜತೆಗೆ ಕೆಲಸ ಮಾಡಿ ಮತ್ತೆ ಬೆಂಗಳೂರಿನತ್ತ ಮುಖಮಾಡಿದ್ದಾನೆ.

ನೆಲೆಕೊಟ್ಟ ಹಾಸ್ಯ-ಲಾಸ್ಯ
ಉದಯ ಟಿವಿ ಮತ್ತು ಉದಯ ಕಾಮಿಡಿಯಲ್ಲಿ ಶ್ರೀಕಂಠನ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿದ್ದ ಹಾಸ್ಯ-ಲಾಸ್ಯ ಧಾರಾವಾಹಿಯಲ್ಲಿ 200-250 ಎಪಿಸೋಡ್‌ವರೆಗೆ ನಟಿಸಿದ ನಂತರ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳು ಸಿಕ್ಕವು. ಏಳು ಸಿನಿಮಾಗಳಲ್ಲಿ ಆ ಸಣ್ಣಪುಟ್ಟ ಪಾತ್ರ ನಿರ್ವಹಿಸಿ ಅಲ್ಲೊಂದು ಕಡೆ ಗುರುತಿಸಿಕೊಂಡ ಮೇಲೆ ಅಂದರೆ, ಇತ್ತೀಚೆಗೆ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳಾದ ಸುಗರ್ಲೆಸ್, ಇನ್ಸ್ಪೆಕ್ಟರ್ ವಿಕ್ರಂ, ಸೋಕಿವಾಲಾ ಮತ್ತು  ನಾನು ಲೇಡೀಸ್ ಸಿನಿಮಾಗಳಲ್ಲೂ ಗುರುತಿಸುವಂತ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಸ್ತುತ  ಪೂರ್ಣಪ್ರಮಾಣದ ನಾಯಕ ನಟನಾಗಿ ಉತ್ತಮ್‌“ಮಹಾಕರ್ಮ” ಚಿತ್ರಕ್ಕೆ ಬಣ್ಣ ಹಚ್ಚಿದ್ದು ಈ ಸಿನಿಮಾದ ಚಿತ್ರೀಕರಣವು ಶೇ.50ರಷ್ಟು ಮುಗಿದಿದೆ. ಮಂಜುನಾಥ್ ವಿ. ನಿರ್ಮಾಪಕರು. ಕಿರಣ್ ದೋರ್ನಲ ಛಾಯಾಗ್ರಹಕ, ಚೇತನ್ ಕುಮಾರ್ ಸಂಗೀತವಿದ್ದು, ಮಧು ತುಂಬುಕೆರೆ ಈ ಚಿತ್ರದ ಸಂಪಾದಕರಾಗಿದ್ದಾರೆ.

ಈ ಹಿಂದೆ ಚಿತ್ರಕಥ ಚಿತ್ರ ನಿರ್ದೇಶಿಸಿದ್ದ ಯಶಸ್ವಿ ಬಾಲಾದಿತ್ಯ ವೇದಶ್ರೀ ಕ್ರಿಯೇಷನ್ಸ್ ಬ್ಯಾನರ್‌ನಡಿ ಮಹಾಕರ್ಮ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು  ಈ ಸಿನಿಮಾದಲ್ಲಿ ಹೊಸಬರೆ ಆದ ಅಭಿಲಾಶ್ ಆರ್ ಎಸ್., ನಾಯಕಿಯರಾಗಿ ಪದ್ಮಶ್ರೀ ಜೈನ್ ಮತ್ತು ಭೂಮಿಕಾ ಎಸ್ ಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಅದೇನೇ ಇರಲಿ ನಮ್ಮ ಕರುನಾಡಿನ ಜನರು ಉತ್ತಮ್‌ಎಂಬ ಈ ಹೊಸ ಪ್ರತಿಭೆಯ  ಕೈಹಿಡಿಯಲಿ  ಎಂದು ಆಶಿಸೋಣ ಮತ್ತು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಅವಕಾಶಗಳು ಸಿಗಲಿ ಎಂದು ಹಾರೈಸೋಣ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್