NEWSದೇಶ-ವಿದೇಶರಾಜಕೀಯ

ಸಕ್ರಿಯ ರಾಜಕಾರಣಕ್ಕೆ ಆಗಮಿಸುವ ಮುನ್ನವೇ ಹಿಂದೆ ಸರಿದ ಸೂಪರ್ ಸ್ಟಾರ್‌ ರಜಿನಿಕಾಂತ್‌

ರಾಜಕೀಯಕ್ಕೆ ಎಂಟ್ರಿ ಕೊಡದೆ ಜನರಿಗೆ ನನ್ನಿಂದ ಮಾಡಬಹುದಾದ ಎಲ್ಲಾ ಸಹಾಯ ಮಾಡುತ್ತೇನೆ ಎಂದ ತಲೈವಾ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಚೆನ್ನೈ: ಎಲ್ಲಾ ಪಕ್ಷಗಳಲ್ಲೂ ಸಂಚಲನಕ್ಕೆ ಕಾರಣರಾಗಿದ್ದ ನಟ ರಜಿನಿಕಾಂತ್​ ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ತಾವು ಸಕ್ರಿಯ ರಾಜಕಾರಣಕ್ಕೆ ಆಗಮಿಸುವುದಿಲ್ಲ ಎಂಬುದನ್ನು ತಮ್ಮ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಮೂರು ವರ್ಷಗಳಿಂದ ತಮಿಳುನಾಡು ಸಕ್ರಿಯ ರಾಜಕೀಯಕ್ಕೆ ತಾನು ಎಂಟ್ರಿ ನೀಡುವುದಾಗಿ ಆಗಿಂದಾಗ್ಗೆ ಹೇಳಿಕೆ ನೀಡಿದ್ದ ಅವರು, ರಜಿನಿ ಮಕ್ಕಳ್ ಮಂಡ್ರಮ್ ಎಂಬ ಹೆಸರಿನಲ್ಲಿ ತಮ್ಮ ಪಕ್ಷವನ್ನು ಅಭಿಮಾನಿಗಳ ಮೂಲಕ ಸಂಘಟಿಸಲು ಮುಂದಾಗಿದ್ದರು. ಆದರೆ ಕಳೆದು ಮೂರುದಿನಗಳಿಂದ ಬಾಧಿಸಿದ ಅನಾರೋಗ್ಯದಿಂದ ಸದ್ಯ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ.

ಅಲ್ಲದೆ, ರಾಜಕೀಯಕ್ಕೆ ಎಂಟ್ರಿ ಕೊಡದೆ ಜನರಿಗೆ ನನ್ನಿಂದ ಮಾಡಬಹುದಾದ ಎಲ್ಲಾ ಸಹಾಯಗಳನ್ನು ಮಾಡುತ್ತೇನೆ. ಹೀಗಾಗಿ ಅಭಿಮಾನಿಗಳು ದಯವಿಟ್ಟು ನನ್ನನ್ನು ಕ್ಷಮಿಸಬೇಕು, ನನ್ನ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದು ಟ್ವಿಟರ್​ನಲ್ಲಿ ಮೂರು ಪುಟಗಳ ಪತ್ರ ಬರೆಯುವ ಮೂಲಕ ತಮಿಳ್‌ ಮಕ್ಕಳಲ್ಲಿ ಮನವಿ ಮಾಡಿದ್ದಾರೆ.

ತಮಿಳುನಾಡಿನ ರಾಜಕೀಯದಲ್ಲಿ ಖಂಡಿತ ನಾನು ಬದಲಾವಣೆ ತರುತ್ತೇನೆ ಎಂದು ಆಶ್ವಾಸನೆ ನೀಡಿದ್ದ ರಜಿನಿಕಾಂತ್​ ಇಂದು ದಿಢೀರ್​ ಟ್ವೀಟ್ ಮಾಡುವ ಮೂಲಕ ಜನರಿಗೆ ಸಂದೇಶ ನೀಡಿದ್ದು ಈ ಸಂದೇಶದಲ್ಲಿ “ಆರೋಗ್ಯ ಸಮಸ್ಯೆ ಕಾರಣದಿಂದಾಗಿ ನಾನು ಸಕ್ರಿಯ ರಾಜಕೀಯದಿಂದ ದೂರ ಉಳಿಯಲಿದ್ದೇನೆ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ರಜಿನಿ ಬರೆದಿರುವ ಪತ್ರದಲ್ಲಿ ಏನಿದೆ?
“ನನ್ನ ಆರೋಗ್ಯ ಕಳೆದ ಹಲವು ದಿನಗಳಿಂದ ಹದಗೆಟ್ಟಿದೆ. ಈ ನಡುವೆ ಕೊರೊನಾ ಆರ್ಭಟ ಹೆಚ್ಚಾಗಿದ್ದು ವೈದ್ಯರ ಸಲಹೆಯನ್ನೂ ಮೀರಿ ನಾನು ಹೈದ್ರಾಬಾದ್​ನಲ್ಲಿ ನಡೆಯುತ್ತಿದ್ದ “ಅನ್ನಾತೆ” ಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಿದ್ದೆ. ಕೊರೊನಾ ಬಗ್ಗೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾಗ್ಯೂ ನಮ್ಮ ಚಿತ್ರೀಕರಣದ ತಂಡದಲ್ಲಿ ನಾಲ್ವರಿಗೆ ಈ ಸೋಂಕು ತಗುಲಿತ್ತು.

ನಾನು ಪರೀಕ್ಷೆಗೆ ಒಳಗಾಗಿದ್ದೆ ನನಗೆ ನೆಗೆಟೀವ್​ ಬಂದಿತ್ತಾದರೂ, ರಕ್ತದ ಒತ್ತಡ ಹೆಚ್ಚಾಗಿದೆ. ಹೀಗಾಗಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಈ ಹಿಂದೆ ನಾನು ಡಿಸೆಂಬರ್​ 31 ರಂದು ಸಕ್ರಿಯ ರಾಜಕೀಯಕ್ಕೆ ಎಂಟ್ರಿ ನೀಡುತ್ತೇನೆ, ಪಕ್ಷ ಘೋಷಣೆ ಮಾಡುತ್ತೇನೆ ಎಂದು ತಿಳಿಸಿದ್ದೆ. ಆದರೆ, ಕಡಿಮೆ ಸಂಖ್ಯೆಯ ಚಿತ್ರೀಕರಣದ ಸೆಟ್​ನಲ್ಲೇ ಅನೇಕರಿಗೆ ಕೊರೊನಾ ಸೋಂಕು ತಗುಲಿದೆ ಎಂದರೆ ರಾಜಕೀಯ ಸಮಾವೇಶದಲ್ಲಿ ಸಾವಿರಾರು ಜನ ಸೇರುತ್ತಾರೆ. ಈ ವೇಳೆ ಎಷ್ಟು ಜನರಿಗೆ ಈ ಸೋಂಕು ತಗುಲಬಹುದು?

ಈ ಆಲೋಚನೆಯೇ ನನ್ನನ್ನು ದಿಗ್ಬ್ರಾಂತಗೊಳಿಸಿದೆ. ಹೀಗಾಗಿ ರಾಜಕೀಯ ಸಮಾವೇಶಗಳನ್ನು ಆಯೋಜಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಆದರೆ, ಇಂತಹ ಸಮಾವೇಶಗಳನ್ನು ನಡೆಸದೆ ರಾಜಕೀಯದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸುವುದು ಅಸಾಧ್ಯ. ಇಂತಹ ಗೆಲುವು ಸಿಗದಿದ್ದರೆ ನನ್ನ ದೂರದೃಷ್ಟಿಯ ರಾಜಕೀಯ ಬದಲಾವಣೆ ತರುವುದು ಸಾಧ್ಯವೇ ಇಲ್ಲ. ಹೀಗಾಗಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವ ನನ್ನ ತೀರ್ಮಾನವನ್ನು ಕೈಬಿಡಲು ನಾನು ನಿರ್ಧರಿಸಿದ್ದೇನೆ.

ಸತ್ಯವನ್ನು ಹೇಳಲು ನಾನು ಎಂದಿಗೂ ಹಿಂದೇಟು ಹಾಕಿದವನಲ್ಲ. ಸಕ್ರಿಯ ರಾಜಕೀಯಕ್ಕೆ ಬರದಿದ್ದರೂ ಸಹ ನನ್ನ ತಮಿಳುನಾಡು ಜನರಿಗೆ ನನ್ನಿಂದಾಗುವ ಸಹಾಯವನ್ನು ಖಂಡಿತ ನಾನು ಮಾಡುತ್ತೇನೆ. ಈ ನನ್ನ ತೀರ್ಮಾನವನ್ನು ನನ್ನ ಅಭಿಮಾನಿಗಳು ಮತ್ತು ತಮಿಳರು ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ” ಎಂದು ಮೂರು ಪುಟಗಳ ಟ್ವೀಟ್‌ ನಲ್ಲಿ ಬರೆದು ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ.

1 Comment

Leave a Reply

error: Content is protected !!
LATEST
ಬಿಬಿಎಂಪಿ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಮೃತ KSRTC ಚಾ.ನಗರ ವಿ.ಕಾರ್ಯಾಗಾರದಿಂದ ಅಕ್ರಮವಾಗಿ ಖಾಸಗಿಯವರಿಗೆ ರವಾನೆಯಾದ ಇಂಜಿನ್‌ ಟ್ರಾಲಿ, ಸ್ಟ್ಯಾಂಡ್‌ ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!!