- ವಿಜಯಪಥ ಸಮಗ್ರ ಸುದ್ದಿ
ತಿರುವನಂತಪುರಂ: ಗ್ರಾಮ ಪಂಚಾಯಿತಿಯಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಗ್ರಾಪಂ ಅಧ್ಯಕ್ಷೆಪಟ್ಟ ಒಲಿದುಬಂದಿದೆ. ಈ ಮೂಲಕ ಸಾಮಾನ್ಯ ವ್ಯಕ್ತಿಯು ಕೂಡ ಉನ್ನತ ಹುದ್ದೆಗೆ ಏರಬಹುದು ಎಂಬುದಕ್ಕೆ ಕೊಲ್ಲಂ ಜಿಲ್ಲೆಯ ಪಥನಪುರಂ ಬ್ಲಾಕ್ ಸಾಕ್ಷಿಯಾಗಿದೆ.
ಹೌದು! ಗ್ರಾಮ ಪಂಚಾಯಿತಿಯಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆ ಕೆ. ಆನಂದ ವಲ್ಲಿ (46) ಇದೀಗ ಪಂಚಾಯಿತಿ ಅಧ್ಯಕ್ಷರಾಗುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಕಸಗುಡಿಸುವ ಅರೆಕಾಲಿಕ ಹುದ್ದೆಗೆ ಆನಂದವಲ್ಲಿ 2011ರಲ್ಲಿ ನೇಮಕಗೊಂಡಿದ್ದರು. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅನಂದವಲ್ಲಿ ಅವರು ಸ್ಪರ್ಧಿಸಿ ಜಯಗಳಿಸಿದ್ದಾರೆ. ಅಷ್ಟೇ ಅಲ್ಲದೇ ಅದೇ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಆನಂದ ವಲ್ಲಿ ಆಯ್ಕೆಯಾಗಿದ್ದಾರೆ.
ಇನ್ನು ಆಕೆ ಸುದ್ದಿಗಾಋರೊಂದಿಗೆ ಮಾತನಾಡಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷ ಹುದ್ದೆಗೆ ಏರುತ್ತೇನೆ ಎಂಬ ವಿಶ್ವಾಸ ಇರಲಿಲ್ಲ. ಕಸಗುಡಿಸುವ ಅರೆಕಾಲಿಕ ಕೆಲಸವನ್ನು ಪಂಚಾಯಿತಿಯಲ್ಲಿ ಮಾಡುವಾಗ ಕಚೇರಿಯಲ್ಲಿ ಇರುತ್ತಿದ್ದೆ ಎಂದು ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಖುಷಿಯನ್ನು ಅನಂದವಲ್ಲಿ ಹಂಚಿಕೊಂಡಿದ್ದಾರೆ.
ಪಿಯುಸಿವರೆಗೆ ಶಿಕ್ಷಣ ಪಡೆದಿರುವ ಇವರು 2011ರಲ್ಲಿ ಪಂಚಾಯಿಗೆ ಕೆಲಸಕ್ಕೆ ಸೇರಿದ್ದರು. ಇದೀಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಧೈರ್ಯ ಮತ್ತು ಸಾಧನೆ ಇತರರಿಗೆ ಮಾದರಿಯಾಗಿದೆ. ಈ ಮೂಲಕ ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಉನ್ನತ ಮಟ್ಟಕ್ಕೆ ಏರಬಹುದು ಎಂಬುದಕ್ಕೆ ಈಕೆಯೆ ಸಾಕ್ಷಿಯಾಗಿದ್ದಾರೆ.