NEWSನಮ್ಮರಾಜ್ಯರಾಜಕೀಯ

ಬಿಜೆಪಿ-ಕಾಂಗ್ರೆಸ್‌ ಟ್ವಿಟ್‌ವಾರ್‌: ಸುಳ್ಳು ಹೇಳುವುದರಲ್ಲಿ ನಿಮಗೆ ಸಾಟಿಯೇ ಇಲ್ಲ

ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಮಗ್ರ ಸುದ್ದಿ
    ಬೆಂಗಳೂರು: ಸುಳ್ಳು ಹೇಳುವುದರಲ್ಲಿ ನಿಮಗೆ ಸಾಟಿಯೇ ಇಲ್ಲ ಎಂದು ರಾಜ್ಯ ಬಿಜೆಪಿ ರಾಜ್ಯ ಕಾಂಗ್ರೆಸ್‌ ಕಾಲೆಳೆದಿದೆ.

ಬಿಜೆಪಿ ರಾಜ್ಯಯಲ್ಲಿ ಬಂಡ ಸಮರ್ಥನೆಗೆ ಮಿತಿ ಇಲ್ಲ ಎಂದು ರಾಜ್ಯ ಕಾಂಗ್ರೆಸ್‌ ಮಾಡಿದ ಟ್ವೀಟ್‌ಗೆ ಈ ರೀತಿ ಪ್ರತಿಕ್ರಿಯಿಸಿರುವ ಬಿಜೆಪಿ ಆರಂಭದಲ್ಲಿಯೇ ಜನತಾ ಕರ್ಫ್ಯೂ ಮತ್ತು ಲಾಕ್‌ಡೌನ್ ಮೂಲಕ ಕೊರೊನಾ ಮಹಾಮಾರಿಯ ಹರಡುವಿಕೆಯನ್ನು ನಿಯಂತ್ರಿಸಿದ್ದು ಪ್ರಧಾನಿ ಮೋದಿ ಸರ್ಕಾರ ಎಂಬ ಸಮರ್ಥನೆ ನೀಡಿದೆ.

ಇನ್ನು ಮುಂದುವರಿದು ಅಂದಹಾಗೆ 1984 ರಲ್ಲಿ ಮಧ್ಯಪ್ರದೇಶದಲ್ಲಿ ಗ್ಯಾಸ್ ದುರಂತವಾದಾಗ ಆರೋಪಿಯನ್ನು ಕದ್ದು ಮುಚ್ಚಿ ಹೊರಗೆ ಕಳುಹಿಸಿದ ಭಂಡರು ನೀವೇ ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದೆ.

ಬಂಡ ಸಮರ್ಥನೆಗೆ ಮಿತಿ ಇಲ್ಲ
ಇನ್ನು ರಾಜ್ಯ ಕಾಂಗ್ರೆಸ್‌ ಬಂಡ ಸಮರ್ಥನೆಗೆ ಮಿತಿ ಇಲ್ಲ ಎಂದು ಬಿಜೆಪಿಯನ್ನು ಜರಿದಿದೆ. ಅಲ್ಲದೇ ಕೊರೊನಾ ಬಗ್ಗೆ ನಮ್ಮ ರಾಹುಲ್‌ಗಾಂಧಿ ಆವರು ಮೊದಲೇ ಎಚ್ಚರಿಸಿದ್ದರು. ಅವರ ಮಾತನ್ನು ನಿರ್ಲಕ್ಷಿಸಿ “ನಮಸ್ತೆ ಟ್ರಂಪ್”ನಲ್ಲಿ ತಲ್ಲೀನರಾದಿರಿ ಎಂದು ಚಿವುಟಿದೆ.

ಇನ್ನು 21ದಿನದಲ್ಲಿ ಕೊರೊನಾ ಯುದ್ಧ ಗೆಲ್ಲುತ್ತೇವೆ ಎಂದಿರಿ. ಗಂಟೆ ,ಚಪ್ಪಾಳೆ, ದೀಪ ಎನ್ನುತ್ತಾ ನೀವು ಕೊರೊನಾ ಹೆಸರಲ್ಲಿ ಭ್ರಷ್ಟಾಚಾರ ಮಾಡಿದ್ದು ಬಿಟ್ಟು ಬೇರೇನು ಮಾಡಿದಿರಿ ಎಂದು ರಾಜ್ಯ ಕಾಂಗ್ರೆಸ್‌ ಛೇಡಿಸಿದೆ.

ಒಟ್ಟಾರೆ ರಾಜ್ಯ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಈ ರೀತಿಯ ಟ್ವೀಟ್‌ ಸಮರ ನಡೆಯುತ್ತಿದೆ. ಇದರಿಂದ ಜನರಿಗೆ ಏನು ಲಾಭ ಎಂಬುದನ್ನು ಪ್ರಜ್ಞಾವಂತ ನಾಗರಿಕರು ಕೇಳುತ್ತಿದ್ದಾರೆ. ಅದಕ್ಕೆ ಈ ಎರಡು ಪಕ್ಷದವರು ಸಮಂಜಸ ಉತ್ತರ ನೀಡುತ್ತಾರೆ ಎಂಬ ಆಶಾ ಭಾವನೆಯಿಂದ ಕಾಯುತ್ತಿರುವುದಾಗಿಯೂ ಹೇಳಿದ್ದಾರೆ. ಏನು ಮಾಡುತ್ತಾರೋ ನಾವು ಕಾದು ನೋಡೋಣ.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?