ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ ಮಧ್ಯಾಹ್ನ 3.50ರ ಶುಭ ಮುಹೂರ್ತದಲ್ಲಿ5+2 ಸೂತ್ರದಡಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
1. ಉಮೇಶ್ ಕತ್ತಿ-ಹುಕ್ಕೇರಿ ಶಾಸಕ 2. ಅರವಿಂದ್ ಲಿಂಬಾವಳಿ-ಮಹದೇವಪುರ ಶಾಸಕ 3. ಎಸ್. ಅಂಗಾರ-ಸುಳ್ಯ ಶಾಸಕ 4. ಮುರುಗೇಶ್ ನಿರಾಣಿ-ಬೀಳಗಿ ಶಾಸಕ 5. ಎಂಟಿಬಿ ನಾಗರಾಜ್-ವಿಧಾನ ಪರಿಷತ್ ಸದಸ್ಯ 6. ಆರ್. ಶಂಕರ್-ವಿಧಾನ ಪರಿಷತ್ ಸದಸ್ಯ 7. ಸಿ.ಪಿ. ಯೋಗೇಶ್ವರ್-ವಿಧಾನ ಪರಿಷತ್ ಸದಸ್ಯರು ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬೆಳಗ್ಗೆ 11 30ರಲ್ಲಿ ಸಿಎಂ ಯಡಿಯೂರಪ್ಪ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದರು.
ಈ ಹಿನ್ನೆಲೆಯಲ್ಲಿ ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಈ 7 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಇನ್ನು ಅಬಕಾರಿ ಸಚಿವ ಎಚ್.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡಲಾಗುವುದು. ಈ ಸಂಬಂಧ ಅವರ ಮನವೊಲಿಸಲಾಗುವುದು ಎಂದು ಸಿಎಂ ಹೇಳಿದರು.
ಅಲ್ಲದೆ ಬಹುತೇಕ ಸಚಿವನಾಗುತ್ತೇನೆ ಎಂಬ ಆಶಾಭಾವನೆ ಹೊಂದಿದ್ದ ಮುನಿರತ್ನ ಅವರ ಆಸೆಗೆ ಸಿಎಂ ತಣ್ಣೀರೆರಚಿದ್ದು, ಮುನಿರತ್ನ ಅವರು ಭಾರಿ ನಿರಾಸೆಗೊಂಡಿದ್ದಾರೆ.