NEWSನಮ್ಮಜಿಲ್ಲೆರಾಜಕೀಯ

ಸಿದ್ದರಾಮಯ್ಯ ಅಳುವ ಗಿರಾಕಿನಾ : ಮಾಜಿ ಸಚಿವ ಮಹದೇವಪ್ಪ ಪ್ರಶ್ನೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಈಗ ಸಿದ್ದರಾಮಯ್ಯ ಅಳುತ್ತಿದ್ದರು ಅಂತ ಮಾಜಿ ಪ್ರಧಾನಿ ದೇವೇಗೌಡರು ಹೇಳ್ತಾರೆ. ಹಾಗಾದರೆ ಸಿದ್ದರಾಮಯ್ಯ ಅಳುವ ಗಿರಾಕಿನಾ ಎಂದು ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸನ್ಮಾನಿಸಲು ಮೈಸೂರಿನ ಶ್ರೀರಾಂಪುರದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮ ಜನಾಧಿಕಾರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ವ್ಯಕ್ತಿ ಅಲ್ಲ, ಶಕ್ತಿ ಅಂತ ಮಾಜಿ ಪ್ರಧಾನಿ ಈ ಹಿಂದೆ ಹೇಳಿದ್ದರು ಎಂದ ಅವರು, ಹೆಚ್ಚು ಕಡಿಮೆಯಾದ್ರೆ ಸಿದ್ದರಾಮಯ್ಯ ಹಲ್ಲು ಉದುರಿಸಿಬಿಡುತ್ತಾರೆಯೇ ವಿನಾ ಅವರು ಅಳುವ ವ್ಯಕ್ತಿಯಲ್ಲ. ಸಿದ್ದರಾಮಯ್ಯ ಅಳುವ ಗಿರಾಕಿನಾ? ಅಳುತ್ತಿದ್ರು ಅಂದ್ರೆ ನಂಬಲು ಸಾಧ್ಯನಾ ಎಂದು ಕೇಳಿದರು.

ಪ್ರಜಾಪ್ರಭುತ್ವಕ್ಕೆ ಒಡ್ಡಿರುವ ಅಪಾಯವನ್ನು ಸಿದ್ದರಾಮಯ್ಯ ನಂತಹ ನಾಯಕರು ಮತ್ತು ನಮ್ಮಂತಹವರು ಪ್ರಶ್ನಿಸಿದರೆ ವಿಲನ್ ತರ ನೋಡ್ತಾರೆ. ಆಹಾರ ಪದ್ದತಿ ವಿಷಯಕ್ಕೆ ಬಂದಾಗ ಕೆಲವರು ಸಸ್ಯಾಹಾರಿಗಳು ಇನ್ನು ಕೆಲವರು ಮಾಂಸಾಹಾರಿಗಳು. ನನಗೆ ಬೇಕು ಅಂದಾಗ ಮಾಂಸ ತಿನ್ನುತ್ತೇನೆ ಎಂದರೆ ಅಧಿಕಾರದಲ್ಲಿ ಇರುವ ಜನರು ಪ್ರಜ್ಞೆ ಇಲ್ಲದವರು ತಿಂದು ಸಾಯಲಿ ಬಿಡು ಎನ್ನುತ್ತಾರೆ. ಇದನೆಲ್ಲ ಕೇಳುವ ಅಧಿಕಾರ ಯಾರ್ ಕೊಟ್ಟಿದ್ದಾರೆ ಇವರಿಗೆ ಎಂದು ಪ್ರಶ್ನಿಸಿದರು.

ಇನ್ನು ಸಂವಿಧಾನದ ಆಶಯಗಳನ್ನು ಪಾಲಿಸದವರು, ನಿರ್ವಹಣೆ ಮಾಡದವರು ಅಧಿಕಾರ ಹಿಡಿದಿರುವುದು ನಮ್ಮ ದೇಶದ ದುರದೃಷ್ಟ. ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿ ಆಗುತ್ತಿದೆ ಇದಕ್ಕೆ ಕಾರಣ ಸಿದ್ದರಾಮಯ್ಯ ಮತ್ತು ನಾನು. ಅದನ್ನು ಮಾಡಿದವರು ನಾವು ಸುಮ್ಮನೆ ಇದ್ದೇವೆ. ಆದರೆ, ಈಗ ಪರಿವೀಕ್ಷಣೆಗೆ ಹೋಗುವವರು ಕೈ ತೋರಿಸುತ್ತಾ ಪೋಸ್ ನೀಡ್ತಾರೆ ಎಂದರು.

ಸ್ಥಳೀಯ ಸಂಸ್ಥೆಗಳಿಂದ ಗುಣಾತ್ಮಕ ನಾಯಕತ್ವ ಬೆಳೆಯಬೇಕು. ಈ ನಾಯಕತ್ವ ಗ್ರಾಮೀಣ ಜನರ ಬದುಕಿನಲ್ಲಿ ಭರವಸೆ, ನಂಬಿಕೆಯನ್ನು ಬೆಳಸಬೇಕು, ಹಳ್ಳಿಯ ಅಭಿವೃದ್ಧಿಗೆ ಕೆಲಸ ಮಾಡುತ್ತಲೇ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು ಎಂದರು.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ