Vijayapatha – ವಿಜಯಪಥ
Saturday, November 2, 2024
NEWSನಮ್ಮಜಿಲ್ಲೆನಮ್ಮರಾಜ್ಯರಾಜಕೀಯ

ಬಿಜೆಪಿ ರಾಜಕೀಯವಾಗಿ ಆತ್ಮಹತ್ಯೆಗೆ ಮುಂದಾಗಿದೆ : ಗುಡುಗಿದ ಸಚಿವ ಡಾ. ಸುಧಾಕರ್

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬಿಜೆಪಿ ರಾಜಕೀಯವಾಗಿ ಆತ್ಮಹತ್ಯೆಗೆ ಮುಂದಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮೊದಲ ಬಾರಿ ಬಹಿರಂಗವಾಗಿ ಗುಡುಗಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ತಮ್ಮ ಸಂಪುಟದಲ್ಲಿ ನೂತನ ಸಚಿವರಿಗೆ ಮಾಡಿರುವ ಖಾತೆ ಹಂಚಿಕೆ ಮತ್ತು ಇತರ ಸದಸ್ಯರಿಗೆ ಖಾತೆ ಮರುಹಂಚಿಕೆ ಬಗ್ಗೆ ಟೀಕೆ ಮಾಡಿದ್ದು, ತನ್ನ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಎಂಥ ಪರಿಸ್ಥಿತಿಯಲ್ಲಿ ನಾನು ರಿಸ್ಕ್ ತೆಗೆದುಕೊಂಡು ಬಿಜೆಪಿಗೆ ಬಂದಿದ್ದೆ ಎಂಬುದು ಗೊತ್ತಿದೆ. ಪಕ್ಷಕ್ಕೆ ಒಳ್ಳೆಯ ಹೆಸರು ತರಲು ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಆದರೆ, ತಾನು ಬಿಜೆಪಿಗೆ ಬರುವಾಗ ನೀಡಲಾಗಿದ್ದ ಮಾತನ್ನು ಪಕ್ಷ ಉಳಿಸಿಕೊಳ್ಳಲಾಗಿಲ್ಲ ಎಂದೂ ಅವರು ವಿಷಾದ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿಗೆ ಮೂರು ಪರ್ಸೆಂಟ್ ವೋಟು ಬಂದಿರಲಿಲ್ಲ. ನಾನು ಬಿಜೆಪಿ ಸೇರಿ 85 ಸಾವಿರ ಮತ ಪಡೆದೆ. ಐದು ಸಾವಿರ ಮತದಿಂದ 85 ಸಾವಿರ ಮತ ಪಡೆಯುವುದು ಸಾಮಾನ್ಯ ವಿಷಯ ಅಲ್ಲ ಎಂದು ಹೇಳಿದರು.

ನಾನು ಪಕ್ಷ ಸೇರುವಾಗ ಏನೇನು ಮಾತುಕತೆ ಆಗಿತ್ತು ಅಂತ ನನಗೆ ಗೊತ್ತು. ವಿವಿಧ ಘಟನಾವಳಿಗಳ ಮೂಲಕ ಈ ಸರ್ಕಾರ ಬಂದಿದೆ. ಈ ವೇಳೆ ನಡೆದ ಮಾತುಕತೆ ಪ್ರಕಾರ ಈಗ ನಡೆದುಕೊಳ್ಳಬೇಕು. ನನಗೆ ಪಕ್ಷದ ಶಿಸ್ತು ಮುಖ್ಯ. ಸಿಎಂ ಏನು ಮಾಡಬೇಕಿತ್ತು ಅಂತ ನಾನು ಹೇಳಲು ಆಗುವುದಿಲ್ಲ ಎಂದರು.

ಸಿಎಂ ಭೇಟಿಯಾಗಿ ನಾನು ಮಾತನಾಡುತ್ತೇನೆ. ಆದರೆ, ಅಶೋಕ್ ಜತೆ ನಾನಿನ್ನೂ ಮಾತನಾಡಿಲ್ಲ. ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿದ್ದೇನೆ ಅಷ್ಟೇ. ನನ್ನ ಜತೆ ರಮೇಶ್ ಜಾರಕಿಹೊಳಿ ಕೂಡ ಮಾತನಾಡಿದ್ದಾರೆ ಎಂದವರು ತಿಳಿಸಿದ್ದಾರೆ.

ತಮ್ಮ ಖಾತೆ ಬದಲಾವಣೆ ಬಗ್ಗೆ ಮಾತನಾಡಿದ ಅವರು, ತಾನು ಯಾವುದೇ ಇಲಾಖೆಗೆ ಕಚ್ಚಿಕೊಂಡು ಕೂರುವುದಿಲ್ಲ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡೂ ಖಾತೆ ಒಬ್ಬರ ಬಳಿ ಇದ್ದರೆ ಒಳ್ಳೆಯದು ಎಂಬ ಕಾರಣಕ್ಕೆ ನನಗೆ ಕೊಡಲಾಗಿತ್ತು. ಈಗ ಅದನ್ನು ಯಾರಿಗೇ ಕೊಟ್ಟರೂ ಒಬ್ಬರ ಬಳಿಯೇ ಆ ಎರಡು ಖಾತೆಗಳು ಇರಬೇಕು. ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಎರಡೂ ಇಲಾಖೆ ಮಧ್ಯೆ ಸಮನ್ವಯತೆ ಇರುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಎಂಟಿಬಿ ನಾಗರಾಜ್ ಅವರಿಗೆ ಅನ್ಯಾಯ ಆಗಿದೆ. ವಸತಿ ಸಚಿವ ಸ್ಥಾನವನ್ನು ಅವರು ಬಿಟ್ಟು ಬಂದಿದ್ದರು. ಈಗ ಎಂಟಿಬಿ ನಾಗರಾಜ್ ಅವರ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ