Vijayapatha – ವಿಜಯಪಥ
Saturday, November 2, 2024
NEWSನಮ್ಮರಾಜ್ಯಸಿನಿಪಥ

ಟ್ರೈಲರ್ ಬಿಡುಗಡೆಯಾದ ಒಂದು ಗಂಟೆಯಲ್ಲೇ ಲಕ್ಷ ವೀಕ್ಷಕರ ಪಡೆದ “ರಾಮಾರ್ಜುನ”

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಿನಿಸುದ್ದಿ
ಬೆಂಗಳೂರು: “ರಾಮಾರ್ಜುನ” ಸಿನಿಮಾದ ಅಧಿಕೃತ ಟ್ರೈಲರ್ ಇಂದು ಮಧ್ಯಾಹ್ನ 3.33ಕ್ಕೆ ಬಿಡುಗಡೆಯಾಗಿದ್ದು, ಬಿಡುಗಡೆಗೊಂಡ ಒಂದು ಗಂಟೆಯಲ್ಲೆ ಒಂದು ಲಕ್ಷ ವೀಕ್ಷಕರನ್ನು ತಲುಪಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ವಿಂಕ್‌ವಿಸಲ್‌ ಪ್ರೊಡಕ್ಷನ್ಸ್ ನಡಿಯಲ್ಲಿ ಮೂಡಿ ಬಂದಿರುವ “ರಾಮಾರ್ಜುನ” ದ ನಾಯಕ ನಟನಾಗಿ ಅನಿಶ್ ನಟಿಸಿದ್ದು, ಇವರು ನಿರ್ಮಾಪಕ ಮತ್ತು ನಿರ್ದೇಶಕರಾಗಿಯೂ ಹೊಣೆ ಹೊತ್ತು ಸಿನಿಮಾ ಮಾಡಿದ್ದಾರೆ. ಇವರಿಗೆ ನಿಶ್ವಿಕಾ ನಾಯ್ಡು ನಾಯಕಿ ಸಾಥ್‌ ನೀಡಿದ್ದಾರೆ.

ಇನ್ನು ಶರತ್‌ ಲೋಹಿತ್‌, ರಂಗಾಯಣ ರಘು, ಲಕ್ಷ್ಮಣ, ರವಿ ಕಾಳೆ, ಬಾಲರಾಜ್‌, ಹನುಮಂತೇಗೌಡ, ಅರಣಾ ಬಾಲರಾಜ್‌, ಸ್ವಾತಿ ಮುಖ್ಯತಾರಾಗಣದಲ್ಲಿದ್ದು, ಈ ಸಿನಿಮಾ ಇಡೀ ಕುಟುಂಬ ಕುಳಿತು ನೋಡುವಂತದ್ದಾಗಿದೆ.

ಕಿರಣ ಚಂದ್ರ ಅವರು ಸಂಭಾಷಣೆ ಬರೆದಿದ್ದರೆ, ಆನಂದರಾಜ್‌ ವಿಕ್ರಮ್‌ ಸಂಗೀತ ನೀಡಿದ್ದಾರೆ. ಇಡೀ ಚಿತ್ರವನ್ನು ನೋಡಬೇಕಾದರೆ ಅದಕ್ಕೆ ಮುಖ್ಯವಾಗಿ ಕ್ಯಾಮರಾಮನ್‌ ಮತ್ತು ಎಡಿಟರ್‌ ಪ್ರಮುಖ ಪಾತ್ರ ವಹಿಸುವರು. ಹೀಗಾಗಿ “ರಾಮಾರ್ಜುನ” ಕ್ಕೆ ನವೀನ್‌ ಕುಮಾರ್‌ ಎಸ್‌. ಅವರು ಛಾಯಾಗ್ರಹಣ ಮಾಡಿದ್ದು, ಶರತ್‌ ಕುಮಾರ್‌ ಎಡಿಟ್‌ ಮಾಡಿ ಅದರ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಇನ್ನುಕನ್ನಡದ ಹಲವಾರು ಸಿನಿಮಾಗಳು ರಿಲೀಸ್​ ಆಗಲು ಈಗಾಗಲೇ ಸಜ್ಜಾಗುತ್ತಿವೆ, ಈ ನಡುವೆ “ರಾಮಾರ್ಜುನ” ಟ್ರೈಲರ್ ಬಿಡುಗಡೆಯಾಗಿದ್ದು ಸಿನಿ ಪ್ರಿಯರಲ್ಲಿ ಸಂತಸವನ್ನು ಇಮ್ಮಡಿಗೊಳಿಸಿದೆ.

ಒಂದು ಹೊಸ ಲುಕ್‌ನಲ್ಲಿ ಅನಿಶ್ ಇಲ್ಲಿ ಮಿಂಚಿದ್ದು, ಧೂಳೆಬ್ಬಿಸುವ ಖಡಕ್ ಡೈಲಾಗ್​ನೊಂದಿಗೆ ಅಭಿಮಾನಿಗಳೆದುರು ಬಂದಿದ್ದಾರೆ. ಈ ಚಿತ್ರವನ್ನು ಬಹುತೇಕ ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ಆದರೆ, ಒಂದು ಹಾಡಿಗಾಗಿ ನಾರ್ವೆಗೆ ಹೋಗಿ ಅಲ್ಲಿ ಚಿತ್ರೀಕರಣ ಮಾಡಿ ಬಂದಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ