NEWSನಮ್ಮರಾಜ್ಯರಾಜಕೀಯಲೇಖನಗಳು

ಖಾತೆ ಹಂಚಿಕೆ ಅಸಮಾಧಾನ- ಮುನಿಸಿಕೊಂಡ ಸಚಿವರು: ಅತ್ತ ಧರಿ, ಇತ್ತ ಪುಲಿ ಎಂಬಂಥ ಸ್ಥಿತಿಯಲ್ಲಿ ಸಿಎಂ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದೇ ಇದ್ದದ್ದು ಅನೇಕರಲ್ಲಿ ಅಸಮಾಧಾನ ತಂದಿರುವುದು ಒಂದೆಡೆಯಾದರೆ, ಖಾತೆ ಹಂಚಿಕೆಯಲ್ಲಿ ಸರಿಯಾದ ಖಾತೆ ಸಿಗದೇ ಮುನಿಸಿಕೊಂಡವರು ಇನ್ನೊಂದೆಡೆ ಇದ್ದಾರೆ. ಹೀಗಾಗಿ ಅತ್ತ ಧರಿ, ಇತ್ತ ಪುಲಿ ಎಂಬಂಥ ಸ್ಥಿತಿಗೆ ಸಿಎಂ ಯಡಿಯೂರಪ್ಪ ತಲುಪಿದ್ದಾರೆ.

ಹೌದು! ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಮರು ಹಂಚಿಕೆಯ ಕಸರುತ್ತು ಮಾಡಿಯೂ ಯಡಿಯೂರಪ್ಪ ಪಕ್ಷದೊಳಗೆ ಹೊಗೆಯಾಡುತ್ತಿರುವ ಅಸಮಾಧಾನವನ್ನು ಶಮನ ಮಾಡಲು ವಿಫಲರಾಗಿದ್ದಂತಿದೆ ಕಾಣುತ್ತಿದೆ. ಮಗದೊಂದೆಡೆ ಖಾತೆ ಮರು ಹಂಚಿಕೆಯಿಂದ ಬೇಸರಗೊಂಡವರಿರುವ ಹಾಲಿ ಸಚಿವರಲ್ಲೂ ಅಸಮಾಧಾನದ ಬೇಗುದಿ ಹಲವು ರಂಧ್ರಗಳಾಗಿ ಸಿಎಂ ಅವರನ್ನ ಕಾಡತೊಡಗಿದೆ.

ಮೊನ್ನೆ ನಡೆದ ಖಾತೆ ಮರು ಹಂಚಿಕೆ ವೇಳೆ ಡಾ. ಕೆ ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮಾಧುಸ್ವಾಮಿ ಅವರಿಗೆ ನೀಡಿದ್ದರು. ಇದರಿಂದ ಸುಧಾಕರ್ ಕುಪಿತಗೊಂಡಿದ್ದರು. ಇದೀಗ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಅವರಿಗೆ ಮರಳಿಸಲು ಸಿಎಂ ನಿರ್ಧರಿಸಿದ್ದಾರೆ.

ಹಾಗೆಯೇ, ಮಾಧುಸ್ವಾಮಿ ಅವರಿಗೆ ಬೇಸರವಾಗಬಾರದೆಂದು ಆನಂದ್ ಸಿಂಗ್ ಬಳಿ ಇರುವ ಪ್ರವಾಸೋದ್ಯಮ ಖಾತೆಯನ್ನ ಮಾಧುಸ್ವಾಮಿ ಅವರಿಗೆ ನೀಡಿ ತೇಪೆ ಹಾಕಲು ಬಿಎಸ್​ವೈ ಪ್ರಯತ್ನಿಸುತ್ತಿದ್ದಾರೆನ್ನಲಾಗಿದೆ. ಮುಖ್ಯಮಂತ್ರಿಗಳ ಈ ನಡೆಯಿಂದ ಮಾಧುಸ್ವಾಮಿ ಅವರ ಅಸಮಾಧಾನ ಇನ್ನೂ ಹೆಚ್ಚಾಗಿದೆ. ಆನಂದ್ ಸಿಂಗ್ ಕೂಡ ಮುನಿಸಿಕೊಂಡಿದ್ದಾರೆ.

ಯಾವುದಾದರೂ ಒಂದು ಖಾತೆ ಕೊಟ್ಟು ಸುಮ್ಮನಿರಬೇಕು. ಪದೇಪದೆ ಖಾತೆ ಬದಲಾವಣೆ ಮಾಡಿದರೆ ಗೌರವ ಎಲ್ಲಿ ಉಳಿಯುತ್ತದೆ ಎಂದು ತಮ್ಮ ಆಪ್ತವಲಯದಲ್ಲಿ ಪ್ರಶ್ನಿಸುತ್ತಿರುವ ಮಾಧುಸ್ವಾಮಿ ಸಂಪುಟಕ್ಕೆ ರಾಜೀನಾಮೆ ನೀಡಲು ಯೋಚಿಸಿದ್ದಾರೆನ್ನಲಾಗುತ್ತಿದೆ.

ಅಲ್ಲದೇ ಈ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲೂ ತಮ್ಮ ಮನದಾಳವನ್ನು ಹಂಚಿಕೊಂಡಿರುವ ಮಾಧುಸ್ವಾಮಿ ಅವರು, ನಾಳೆ ವರೆಗೂ ಕಾಯುತ್ತೇನೆ. ಬಳಿಕ ಏನಾಗುವುದೋ ನೋಡೋಣ ಎಂದು ಹೇಳಿಕೆ ನೀಡಿದ್ದಾರೆ. ಇದ್‌ ಜತೆಗೆ ಯಡಿಯೂರಪ್ಪ ಅವರ ದೂರವಾಣಿ ಕರೆಯನ್ನೂ ಅವರು ಸ್ವೀಕರಿಸುತ್ತಿಲ್ಲ. ಇದೀಗ ಅಶೋಕ್ ಅವರು ಮಾಧುಸ್ವಾಮಿಯನ್ನು ಸಂಪರ್ಕಿಸಿ ಸಮಾಧಾನಕ್ಕೆ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಮಗದೊಂದೆಡೆ ಆನಂದ್ ಸಿಂಗ್ ಅವರು ವಾಸೋದ್ಯಮ, ಪರಿಸರ ಖಾತೆಯನ್ನು ವಾಪಸ್‌ ಪಡೆದು ಹಜ್‌, ವಕ್ಫ್‌ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಖಾತೆಯನ್ನು ನೀಡಿದ್ದರಿಂದ ನನಗೆ ಯಾವ ಸಚಿವ ಸ್ಥಾನವೂ ಬೇಡ ಎಂದು ಹೇಳಿಕೆ ನೀಡಿದ್ದಾರೆ. ಆನಂದ್‌ ಸಿಂಗ್‌ ಅವರ ಈ ಹೇಳಿಕೆಯು ಬಿಎಸ್‌ವೈ ಮೇಲಿನ ಮುನಿಸಿನ ಸೂಚಕದಂತಿದೆ.

ಇನ್ನೂ ಮುಂದುವರಿದು ಮಾತನಾಡಿರುವ ಆನಂದ್‌ಸಿಂಗ್‌ ನಾನು ಶಾಸಕನಾಗಿಯೇ ಉಳಿಯುತ್ತೇನೆ. ಯಾವ ಖಾತೆಯೂ ಬೇಡ. ನನ್ನ ರಾಜಕೀಯ ಸ್ಥಿತಿಗತಿಗಳ ಕುರಿತು ಕುಟುಂಬದವರ ಜೊತೆ ಚರ್ಚಿಸಿದ್ದೇನೆ. ಸದ್ಯಕ್ಕೆ ಶಾಸಕನಾಗಿಯೇ ಉಳಿಯಲು ಬಯಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದ ಸುರಪುರ ಶಾಸಕ ರಾಜೂಗೌಡ ವ್ಯಾಘ್ರಗೊಂಡಿದ್ಧಾರೆ. ನಾಳೆ ಮುಖ್ಯಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಲಿರುವ ಅವರು ಕರ್ನಾಟಕ ಜಲಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

1 Comment

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ