NEWSನಮ್ಮರಾಜ್ಯರಾಜಕೀಯ

ಕಂದಾಯ ಸಚಿವರ ಪಿಎ ವಿರುದ್ಧ ಲಂಚ ಕೇಳಿದ ಆರೋಪ : ದೂರು ದಾಖಲು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಚಿಕ್ಕಮಗಳೂರು: ಕಂದಾಯ ಸಚಿವ ಆರ್. ಅಶೋಕ್‌ ಪಿಎ ಗಂಗಾಧರ್‌ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಅಶೋಕ ಪಿಎ ಗಂಗಾಧರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ದೂರನ್ನು ಸಲ್ಲಿಸಿದ್ದಾರೆ. ಸಬ್ ರಿಜಿಸ್ಟ್ರಾರ್ ಬಳಿ ಲಂಚ ಕೇಳಿದ ಪಿಎ ವಿರುದ್ಧ ಈ ದೂರು ನೀಡಲಾಗಿದೆ.

ಜ. 20ರಂದು ವಾಟ್ಸ್‌ಆಪ್ ಮೂಲಕ ಕಂದಾಯ ಸಚಿವರ ವೇಳಾಪಟ್ಟಿ ಬಂದಿತ್ತು. 2 ದಿನಗಳ ಹಿಂದೆ ಅಶೋಕ್ ಅವರ ಪಿಎ ಎನ್ನಲಾದ ಗಂಗಾಧರ್ ಕರೆ ಮಾಡಿ ಶೃಂಗೇರಿಗೆ ಕಂದಾಯ ಸಚಿವರು ಬರ್ತಾರೆ ಸಿಗಿ ಎಂದರು. ಸಂಜೆ ಕಂದಾಯ ಸಚಿವರು ಶೃಂಗೇರಿಗೆ ಬಂದಾಗ ಆದಿಚುಂಚನಗಿರಿ ಸಭಾ ಭವನಕ್ಕೆ ಹೋದೆ. ಈ ವೇಳೆ ಅವರು ಯಾರೆಂದು ನನಗೆ ಗೊತ್ತಿರಲಿಲ್ಲ. ಹಾಗಾಗಿ, ನಾನು ಮೊದಲೇ ಪೊಲೀಸರಿಗೆ ಅವರನ್ನು ತೋರಿಸಲು ಕೇಳಿದ್ದೆ.

ಶೃಂಗೇರಿಗೆ ಬಂದಾಗ ಇವರೇ ಕಂದಾಯ ಸಚಿವರ ಪಿಎ ಎಂದು ಪೊಲೀಸರು ಹೇಳಿದರು. ಆಗ ಗಂಗಾಧರ್ ಅವರನ್ನ ಭೇಟಿ ಮಾಡಿದೆ. ಅಲ್ಲೇ ಇದ್ದ ರೂಮಿಗೆ ಗಂಗಾಧರ್ ಕರೆದುಕೊಂಡು ಹೋದರು. ಈ ವೇಳೆ ಕೂಡಲೇ ಅವರು ಏನಿದೆ ಕೊಡಿ ಎಂದರು. ನಾನು ಕೊಡೋದಿಲ್ಲ, ತಗಳೋದೂ ಇಲ್ಲ ಎಂದು ನೇರವಾಗಿ ಹೇಳಿದೆ. ಆಮೇಲೆ ಆಯ್ತು ಹೋಗಿ ಎಂದರು ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಚೆಲುವರಾಜ್, ಕಂದಾಯ ಸಚಿವ ಆಶೋಕ್ ಪಿಎ ಎಂದು ಗಂಗಾಧರ್ ನನ್ನ ಬಳಿ ಲಂಚ ಕೇಳಿದ್ದು ನಿಜ. ಈ ಬಗ್ಗೆ ನನ್ನ ಬಳಿ ಆಡಿಯೋ ಇದೆ. ಇದಲ್ಲದೆ ನಾನು ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಇನ್ನು ಇವರು ನಿಜವಾಗಿಯೂ ಕಂದಾಯ ಸಚಿವರ ಪಿಎ ಹೌದಾ ಅಥವಾ ಬೇರೆಯವರೋ ಗೊತ್ತಿಲ್ಲ. ಹಾಗಾಗಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ. ಇಂದು ಬೆಳಗ್ಗೆ ಶೃಂಗೇರಿ ಪೊಲೀಸರಿಗೆ ದೂರು ನೀಡುವುದಾಗಿ ಚೆಲುವರಾಜ್ ಹೇಳಿದ್ದಾರೆ.

ಮತ್ತೊಮ್ಮೆ ಫೋನ್ ಮಾಡಿರುವ ಗಂಗಾಧರ್ ಫೈಲ್ ಕೊಡಲಿಲ್ಲ ಎಂದರು. ಯಾವ ಫೈಲ್ ಕೂಡ ಇಲ್ಲ, ನೀವು ಲಂಚ ಕೇಳಿದರೂ ನಾನು ಕೊಡಲಿಲ್ಲ ಇಂಥ ಜೀವನ ಯಾಕೆ  ಮಾಡುತ್ತೀರ ಎಂದು ಫೋನ್‌ನಲ್ಲೇ ತರಾಟೆಗೆ ತೆದುಕೊಂಡಿದ್ದಾರೆ.

ಒಟ್ಟಾರೆ, ಗಂಗಾಧರ್ ಕಂದಾಯ ಸಚಿವರ ಪಿಎನಾ ಅಥವಾ ಅವರ ಹೆಸರಲ್ಲಿ ಬೇರೆ ವ್ಯಕ್ತಿ ಕರೆ ಮಾಡಿದರಾ ಎಂಬುದು ಗೊತ್ತಾಗಿಲ್ಲ. ಪೊಲೀಸರ ತನಿಖೆಯಿಂದ ಹೊರಬೀಳಬೇಕಿದೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ