ವಿಜಯಪಥ ಸಮಗ್ರ ಸುದ್ದಿ
ಮಂಗಳೂರು: ಹಾಸನದ ಐದು ತಿಂಗಳ ಮಗುವಿನ ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲ್ಕಿ ನಿವಾಸಿ ರಾಯನ್, ಕಾರ್ಕಳದ ಕವಿತಾ, ಮರಿಯಮ್ಮ ಬಂಧಿತರು. ಇವರು ಮೂರು, ನಾಲ್ಕು ತಿಂಗಳ ಮಕ್ಕಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಇನ್ನು ರಾಯನ್‌ನನ್ನು ಮಂಗಳೂರಿನ ಕದ್ರಿಯ ಹೋಟೆಲ್‌ನಲ್ಲಿ ಬಂಧಿಸಿದ್ದು, ಮಗುವನ್ನು ಖರೀದಿಸಿ ಮಾರಾಟ ಮಾಡಿದ ಇನ್ನಿಬ್ಬರು ಮಹಿಳೆಯರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ರಾಯನ್ ಹಾಸನದ ಐದು ತಿಂಗಳ ಮಗುವನ್ನು ಕಾರ್ಕಳದ ಕವಿತಾ ಎಂಬುವರಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಆ ಮಗುವನ್ನು ಕವಿತಾ ಮಾರಿಯಮ್ಮ ಎಂಬುವರಿಗೆ ಮಾರಿದ್ದಾರೆ. ಈಗ ಈ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.