NEWSನಮ್ಮಜಿಲ್ಲೆಶಿಕ್ಷಣ-

ಮೈಸೂರಿನಲ್ಲಿ ದೇಶದ ಮೊದಲ ಅಕಾಡೆಮಿ ಆಫ್ ವರ್ಕ್‌ಪ್ಲೇಸ್ ಎಕ್ಸಲೆನ್ಸ್

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ದೇಶದ ಮೊದಲ ಅಕಾಡೆಮಿ ಆಫ್ ವರ್ಕ್‌ಪ್ಲೇಸ್ ಎಕ್ಸಲೆನ್ಸ್ ಮೈಸೂರಿನಲ್ಲಿ ಆರಂಭವಾಗುತ್ತಿದೆ.

ಕ್ಲೀನಿಂಗ್ ಸೈನ್ಸ್ ನಲ್ಲಿ ಬರೋಬ್ಬರಿ ಮೂರು ದಶಕಗಳ ಅನುಭವ ಇರುವ ಶೆವರನ್ ಸಂಸ್ಥೆಯು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಕ್ಲೀನ್‌ಫಿಕ್ಸ್ – ಸ್ವಿಜರ್‌ಲ್ಯಾಂಡ್ ಹಾಗೂ ಫಿಲ್ಮಾಪ್ ಇಟಲಿ ಸಂಯುಕ್ತಾಶ್ರಯದಲ್ಲಿ ಫೆಸಿಲಿಟಿ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ತರಬೇತಿ ನೀಡುವ ಸಲುವಾಗಿ ಇದನ್ನು ಪ್ರಾರಂಭ ಮಾಡಲು ಯೋಜನೆ ರೂಪಿಸಿದೆ.

ಈ ಒಪ್ಪಂದದ ಅಡಿಯಲ್ಲಿ ಜೆಎಸ್‌ಎಸ್ ವಿವಿಯ ಕೌಶಲಾಭಿವೃದ್ಧಿ ತರಬೇತಿ ನೀಡಿ ಪ್ರಮಾಣ ಪತ್ರಗಳನ್ನು ನೀಡುತ್ತದೆ. ಈ ಕೋರ್ಸ್ ಸ್ವಿಜರ್‌ಲ್ಯಾಂಡ್‌ನ ಸ್ಕಿಲ್ ಡೆವಲಪ್‌ಮೆಂಟ್ ಕೌನ್ಸಿಲ್‌ನಿಂದ ಮಾನ್ಯವಾಗಿದೆ.

ಈ ಸಂಬಂಧ ಮಾ.5ರಂದು ಜೆಎಸ್‌ಎಸ್ ಸಂಸ್ಥೆ ಹಾಗೂ ಶೆವರನ್ ಕ್ಲೀನ್‌ಫಿಕ್ಸ್ ಅಕಾಡೆಮಿ ನಡುವೆ ಕುಲಪತಿ ಡಾ.ಸಿದ್ದರಾಮಯ್ಯ ನೇತೃತ್ವದಲ್ಲಿ ಒಪ್ಪಂದ ವಾಡಿಕೊಳ್ಳಲಾಯಿತು. ಜೆಎಸ್‌ಎಸ್ ವಿವಿಯ ಕುಲಸಚಿವ ಡಾ.ಧನರಾಜ್, ಶೆವರನ್ ಕ್ಲೀನ್‌ಫಿಕ್ಸ್ ಅಕಾಡೆಮಿಯ ವ್ಯಾನೇಜಿಂಗ್ ಡೈರೆಕ್ಟರ್ ಕೆ.ಸ್ಯಾಮ್ ಚೆರಿಯನ್ ಒಪ್ಪಂದಕ್ಕೆ ಸಹಿ ಮಾಡಿದರು.

ಫೆಸಿಲಿಟಿ ಮ್ಯಾನೇಜ್‌ಮೆಂಟ್‌ನ ಕೌಶಲಾಭಿವೃದ್ಧಿ ತರಬೇತಿಯ ಮೊದಲ ಬ್ಯಾಚ್ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ವಿವಿ ಮಾಹಿತಿ ನೀಡಿದೆ. ಅಕಾಡೆಮಿ ಆಫ್ ವರ್ಕ್‌ಪ್ಲೇಸ್ ಎಕ್ಸಲೆನ್ಸ್‌ನ ನಿರ್ದೇಶಕ ಪ್ರೊ.ಬಸವರಾಜು, ಜೆಎಸ್‌ಎಸ್ ವಿವಿಯ ಉಪಕುಲಸಚಿವ ಡಾ.ಹರಿಪ್ರಸಾದ್, ಡಾ.ಭವಾನಿಶಂಕರ್, ಡಾ.ಚಂದ್ರಧರ್ ಉಪಸ್ಥಿತರಿದ್ದರು.

1 Comment

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ