ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಬೇಕಾಬಿಟ್ಟಿ ರಸ್ತೆಗಿಳಿದ ನಗರದ ಜನತೆಗೆ ಬಿಸಿ ಮುಟ್ಟಿಸಿರುವ ಪೊಲೀಸರು ಸುಮಾರು 5000ಕ್ಕೂ ಹೆಚ್ಚು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು, ನೂರಾರು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.
ಈ ಮೂಲಕ ಕೊರೊನಾ ಕರ್ಫ್ಯೂ ಕೊನೆಯ ದಿನಗಳಾದ ಶನಿವಾರ ಮತ್ತು ಭಾನುವಾರ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ಜನರ ವಿರುದ್ಧ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಇಷ್ಟು ಮಾತ್ರವಲ್ಲದೆ, ಈಗ ವಶಪಡಿಸಿಕೊಂಡಿರುವ ಹಾಗೂ ಇನ್ನು ಮುಂದಿನ ದಿನಗಳಲ್ಲಿ ವಶಪಡಿಸಿಕೊಳ್ಳುವ ಎಲ್ಲಾ ರೀತಿಯ ವಾಹನಗಳನ್ನು ಮೇ.24ರವರೆಗೆ ಮಾಲೀಕರಿಗೆ ಮರಳಿ ನೀಡಲಾಗುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಶನಿವಾರ ಒಂದೇ ದಿನ 2723 ದ್ವಿಚಕ್ರ ವಾಹನಗಳು, 171 ತ್ರಿಚಕ್ರ ವಾಹನಗಳು, 106 ನಾಲ್ಕು ಚಕ್ರದ ವಾಹನ ಸೇರಿದಂತೆ ಒಟ್ಟು 3000 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಭಾನುವಾರ ಕೂಡ ಕಾರ್ಯಾಚರಣೆ ನಡೆಸಿದ್ದ ಪೊಲೀಸರು 1984 ದ್ವಿಚಕ್ರ ವಾಹನಗಳು, 99 ತ್ರಿಚಕ್ರ ವಾಹನಗಳು, 144 ನಾಲ್ಕು ಚಕ್ರಗಳ ವಾಹನ ಸೇರಿದಂತೆ 2227 ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಂತೆ ಎರಡು ದಿನಗಳಲ್ಲಿ 5,227 ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Pl take lockdown seriously in the overall interest of everyone’s safety…. or be ready to get your vehicle seized for next two weeks. Choice is yours. https://t.co/ReF50cXpcw
— DGP KARNATAKA (@DgpKarnataka) May 8, 2021
Details of the vehicles seized for violation of #COVID19 guidelines:
As of May 9: from 10 AM to 8 PM
2-wheelers: 1984
3-wheelers: 99
4-wheelers: 144Total – 2227
————
Cases booked under NDMA: 23— Kamal Pant, IPS (@CPBlr) May 9, 2021