CrimeNEWSನಮ್ಮಜಿಲ್ಲೆ

ರಂಗಭೂಮಿ ಯುವ ಕಲಾವಿದ ವಿಕ್ರಮ್ ಕೋವಿಡ್‌ನಿಂದ ನಿಧನ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ‘ಮಲೆಗಳಲ್ಲಿ ಮದುಮಗಳು’ ಖ್ಯಾತಿಯ ರಂಗಭೂಮಿ ಯುವ ಕಲಾವಿದ, 37 ವರ್ಷದ ವಿಕ್ರಮ್ (ವಿಕ್ಕಿ) ಕೊರೊನಾ ಸೋಂಕಿನಿಂದ ಜಿಲ್ಲೆಯ ಬನ್ನೂರಿನಲ್ಲಿ ಮಂಗಳವಾರ ನಿಧನರಾದರು.

ರಂಗಾಯಣದಲ್ಲಿ ರಂಗಶಿಕ್ಷಣ ಪಡೆದಿದ್ದ ಅವರು, ಒಂದೊಳ್ಳೆ ರಂಗಭೂಮಿ ಕಲಾವಿದರಾಗಿ ಹೊರಹೊಮ್ಮಿದ್ದರು.

ವಿಕ್ರಮ್ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ್ದರಿಂದ ನಾಲ್ಕು ದಿನಗಳ ಹಿಂದೆ ಕೋವಿಡ್‌ ಟೆಸ್ಟ್‌ ಮಾಡಿಸಿದಾಗ ಪಾಸಿಟಿವ್‌ ಎಂದು ವರದಿ ಬಂದಿದೆ.  ಬಳಿಕ ಅವರು ತಿ.ನರಸೀಪುರದ ಸೋಸಲೆ ಮಠದಲ್ಲಿ ಐಸೊಲೇಷನ್‌ನಲ್ಲಿ ಇದ್ದರು. ಆದರೆ ಅವರಿಗೆ ಮಂಗಳವಾರ ತೀವ್ರ ಉಸಿರಾಟದ ಸಮಸ್ಯೆಯಾದ್ದರಿಂದ ಕ್ಲಿನಿಕ್‌ಗೆ ಹೋದಾಗ ಅವರಲ್ಲಿ ಸ್ಯಾಚುರೇಶನ್ ಮಟ್ಟ ಕಡಿಮೆಯಾಗಿದೆ, ಕೂಡಲೆ ಆಸ್ಪತ್ರೆಗೆ ದಾಖಲಾಗಬೇಕು ಎಂದು ವೈದ್ಯರು ಸೂಚಿಸಿದರು.

ವೈದ್ಯರ ಸೂಚನೆ ಮೇರೆಗೆ ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ವಿಕ್ರಮ್ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ದುರದೃಷ್ಟವಶಾತ್ ಅವರ ತಂದೆಯವರಿಗೂ ಸಹ ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು ಅವರನ್ನೂ ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ವಿಕ್ರಮ್ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ವಿಕ್ರಮ್ ಅವರೇ ಕುಟುಂಬಕ್ಕೆ  ಆಧಾರಸ್ತಂಭವಾಗಿದ್ದರು. ಈಗ ಇದ್ದ ಆಧಾರ ಸ್ತಂಭವೂ ಕೊರೊನಾಕ್ಕೆ ಬಲಿಯಾಗಿದೆ. ವಿಕ್ರಮ್ ಅವರಿಗೆ ಪಾಲಕರು ಮದುವೆ ಮಾಡಲು ಯೋಜಿಸುತ್ತಿದ್ದರು, ಆದರೆ ದುರದೃಷ್ಟವಶಾತ್ ವಿಧಿ ಅಟವೇ ಬೇರೆಯಾಯಿತು.

ವಿಕ್ರಮ್‌ ಯಾವಾಗಲು ಜೀವದಲ್ಲಿ ಪಾಸಿಟಿವ್‌ ಚಿಂತನೆ ಹೊಂದಿದ್ದ ವ್ಯಕ್ತಿಯಾಗಿದ್ದರು. ಸಕಾರಾತ್ಮಕ ವಿಧಾನವನ್ನು ಹೊಂದಿದ್ದ ಒಬ್ಬ ಒಳ್ಳೆಯ ಸ್ನೇಹಿತನನ್ನು ನಾವು ಈಗ ಕಳೆದಿಕೊಂಡಿದ್ದೇವೆ ಎಂದು ವಿಕ್ರಮ್‌ ಸ್ನೇಹಿತರು ಕಣ್ಣುತುಂಬಿಕೊಂಡರು. ವಿಕ್ರಮ್‌ ಆರೋಗ್ಯದ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ತಾಳಿದ್ದರಿಂದ ಅವನ ಜೀವನವೇ ಕೊರೊನಾಗೆ ಬಲಿಯಾಯಿತಲ್ಲ ಎಂದು ದುಃಖ ವ್ಯಕ್ತಪಡಿಸಿದರು.

ವಿಕ್ರಮ್ ಅವರು ಕುವೆಂಪು ಅವರ ಪ್ರಸಿದ್ಧ ಕೃತಿ ಮಲೆಗಳಲ್ಲಿ ಮದುಮಗಳು ನಾಟಕವನ್ನು ಹಲವು ವರ್ಷಗಳ ಹಿಂದೆ ರಂಗಾಯಣಕ್ಕಾಗಿ ನಿರ್ದೇಶಿಸಿದ್ದ ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ ಗುತ್ತಿ ಪಾತ್ರಧಾರಿಯಾಗಿ ಸುದೀರ್ಘ ಒಂಬತ್ತು ಗಂಟೆಗಳ ಕಾಲ ಪ್ರೇಕ್ಷಕರಿಗೆ ಮನರಂಜನೆ ಉಣಬಡಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇದಿಷ್ಟೇ ಅಲ್ಲದೆ ವಿಕ್ರಮ್ ಅವರು ಮಜಾ ಭಾರತಾ ಹಾಸ್ಯ ಕಾರ್ಯಕ್ರಮದ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು.  ಜತೆಗೆ ಕಿರುಚಿತ್ರಗಳಲ್ಲಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ತರಬೇತಿಯನ್ನು ನೀಡುತ್ತಿದ್ದರು. ಅವರು ಮೈಸೂರಿನ ಜಯಲಕ್ಷ್ಮಿಪುರಂನ ಖಾಸಗಿ ಶಾಲೆಯೊಂದರಲ್ಲಿ ಡ್ರಾಮಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ