NEWSನಮ್ಮಜಿಲ್ಲೆ

ಅಪಘಾತದಿಂದ ನರಳಾಡಿ ವೈದ್ಯ ರಮೇಶ್‌ ಸಾವು: ಮಾನವೀಯತೆ ಮರೆತ ಬಿಜೆಪಿ ತರೀಕೆರೆ ಶಾಸಕ ಸುರೇಶ್‌

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಚಿಕ್ಕಮಗಳೂರು: ಬಿಜೆಪಿ ಶಾಸಕರೊಬ್ಬರು ಮಾನವೀಯತೆ ಮರೆತಿದ್ದರಿಂದ ರಸ್ತೆ ಅಪಘಾತದಿಂದ ನರಳಾಡಿ ವೈದ್ಯರೊಬ್ಬರು ಮೃತಪಟ್ಟಿರುವುದು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.

ತರೀಕೆರೆ ತಾಲೂಕಿನ ಆರೋಗ್ಯ ಕೇಂದ್ರದ ಹೆಲ್ತ್‌ ಇನ್ಸ್‌ಪೆಕ್ಟರ್‌ ಡಾ. ರಮೇಶ್‌ ಅಪಘಾತದಲ್ಲಿ ಮೃತಪಟ್ಟವರು.

ಘಟನೆ ವಿವರ
ಬುಧವಾರ ಸಂಜೆ ತರೀಕೆರೆ ಆರೋಗ್ಯ ಕೇಂದ್ರದ ಹೆಲ್ತ್‌ ಇನ್ಸ್‌ಪೆಕ್ಟರ್‌ ಡಾ. ರಮೇಶ್‌ ಅವರು ಕರ್ತವ್ಯ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಲಕ್ಕವಳ್ಳಿ ಕ್ರಾಸ್‌ ಬಳಿ ಅಪಘಾತಕ್ಕೀಡಾಗಿದ್ದಾರೆ.

ಇದೇ ಸಮಯಕ್ಕೆ ತರೀಕೆರೆ ಶಾಸಕ ಡಿ.ಎಸ್‌. ಸುರೇಶ್‌ ಅವರು ಈ ಮಾರ್ಗವಾಗಿ ಬಂದಿದ್ದಾರೆ. ರಸ್ತೆ ಅಪಘಾತವಾಗಿರುವುದನ್ನು ಗಮನಿಸಿದ ಅವರು ರಸ್ತೆ ಬದಿಯಲ್ಲಿ ತಮ್ಮ ಇನ್ನೋವಾ ಕಾರನ್ನು ನಿಲ್ಲಿಸಿ ತಮ್ಮ ಗನ್‌ಮ್ಯಾನ್‌ ಅನ್ನು ಕಳುಹಿಸಿ ಮಾಹಿತಿ ಪಡೆದಿದ್ದಾರೆ. ಆದರೆ ಕಾರಿನಿಂದ ಕೆಳಗೆ ಇಳಿಯದೇ ಆಂಬುಲೆನ್ಸ್‌ಗೆ ಫೋನ್‌ ಮಾಡಿಸಿದ್ದಾರೆ.

ಅಪಘಾತದಿಂದ ತೀವ್ರ ರಕ್ತಶ್ರಾವವಾಗಿ ರಸ್ತೆಯಲ್ಲೆ ನರಳಾಡುತ್ತಿದ್ದ ವೈದ್ಯರನ್ನು ತಮ್ಮ ಕಾರಿನಲ್ಲಿ ಅಂದರೆ ಕೇವಲ 5-6 ನಿಮಿಷ ಪ್ರಯಾಣಿಸಿದರೆ ಸಿಗುತ್ತಿದ್ದ ತರೀಕೆರೆ ಆಸ್ಪತ್ರೆಗೆ ದಾಖಲಿಸಬಹುದಿತ್ತು. ಆದರೆ ಆ ರೀತಿ ಮಾಡದೆ ಆಂಬುಲೆನ್ಸ್‌ಗೆ ಫೋನ್‌ ಮಾಡಿಸಿದ್ದಾರೆ, ಸುಮಾರು 20 ನಿಮಿಷದ ಬಳಿಕ ಆಂಬುಲೆನ್ಸ್‌ ಬಂದು  ತರೀಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ವೈದ್ಯ ರಮೇಶ್‌ ಅವರು ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡು ರಕ್ತಶ್ರಾವದಿಂದ ವೈದ್ಯರೊಬ್ಬರು ರಸ್ತೆಯಲ್ಲೇ ನರಳಾಡುತ್ತಿದ್ದರು. ಅದೇ ದಾರಿಯಲ್ಲಿ ಬಂದ ಶಾಸಕ ಸುರೇಶ್‌ ತನ್ನ ಕಾರಿನಲ್ಲಿ ವೈದ್ಯರನ್ನು ಕರೆದುಕೊಂಡು ಹೋಗಿದ್ದರೆ ಅವರು ಬದುಕುತ್ತಿದ್ದರೇನೋ ಎಂದು ಶಾಸಕರ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಪಘಾತದಿಂದ ರಸ್ತೆಯಲ್ಲೇ 20 ನಿಮಿಷ ನರಳಾಡುತ್ತಿದ್ದರೂ ಮಾನವೀಯತೆ ಮೆರೆಯದ ಇಂಥ ಶಾಸಕರು ಯಾವ ಪುರುಷಾರ್ಥಕ್ಕೆ ಜನಪ್ರತಿನಿಧಿಗಳಾಗಿ ಇರಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಇದಾವುದಕ್ಕೂ ಶಾಸಕರು ಪ್ರತಿಕ್ರಿಯೆ ನೀಡಿಲ್ಲ. ಇನ್ನು ಕಾರಿನಿಂದ ಇಳಿದು ಅಪಘಾತಗೊಂಡವರ ಸ್ಥಿತಿ ನೋಡದೇ ಒಂದು ರೀತಿಯ ಉಡಾಫೆ ಮಾಡಿದ್ದು ಏಕೆ. ಅಲ್ಲದೆ ಅಪಘಾತ ಸ್ಥಳದಲ್ಲೇ ಇದ್ದ ಸ್ಥಳೀಯರು ಲಾಕ್‌ಡೌನ್‌ ಆಗಿರುವುದರಿಂದ ರಸ್ತೆಯಲ್ಲಿ ಯಾವುದೇ ವಾಹನಗಳು ಓಡಾಡುತ್ತಿಲ್ಲ. ಶಾಸಕರೇ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಬಹುದಲ್ಲ ಎಂದು ಮಾತನಾಡಿಕೊಂಡರೂ ಕೇಳಿಸದಂತೆ ಅವರು ವರ್ತಿಸಿರುವುದು ಈಗ ಭಾರಿ ಚರ್ಚೆಯಾಗುತ್ತಿದೆ.

ಅದೇನೆ ಇರಲಿ ಶಾಸಕರು ಸಮಯ ಪ್ರಜ್ಞೆ ಮೆರೆದಿದ್ದರೆ ಸಾವಿರಾರು ಜನರ ಪ್ರಾಣ ಉಳಿಸುತ್ತಿದ್ದ ವೈದ್ಯರ ಜೀವವನ್ನು ಉಳಿಸಬಹುದಿತ್ತೇನೋ. ಆದರೆ ….

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?