ವಿಜಯಪಥ ಸಮಗ್ರ ಸುದ್ದಿ
ದಾವಣಗೆರೆ: ಬಿಜೆಪಿಯಲ್ಲಿ ಈಗ ದುಡ್ಡು ಹೊಡೆಯುವುದು, ನಾಯಕತ್ವ ಬದಲಾವಣೆ ಮಾತಾಡುವುದು ಮಾತ್ರ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವ ಸೌಜನ್ಯವಿಲ್ಲ ಎಂದು ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ವಾಗ್ದಾಳಿ ನಡೆಸಿದ್ದಾರೆ.
ಈಗ ಅರುಣ್ ಸಿಂಗ್ ಬಂದು ಯಡಿಯೂರಪ್ಪ ಅವರನ್ನೆ ಮುಂದೂವರಿಸಿ ಎನ್ನುತ್ತಿದ್ದಾರೆ. ಆದರು, ಭಿನ್ನಮತ ಮುಗಿಯುವಂತೆ ಕಾಣುತ್ತಿಲ್ಲ. ಕೊರೊನಾದಿಂದ ಜನ ಸಾವನ್ನಪ್ಪುತ್ತಿದ್ದಾರೆ. ಅದರ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದ್ದಾರೆ.
ಇದರ ಜತೆಗೆ ರಾಜಕೀಯ ಮಾಡಿಕೊಂಡು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವವರು ಹಾಳಾಗಿ ಹೋಗಲಿ, ನಮ್ಮ ಕ್ಷೇತ್ರದ ಕೆಲಸವೂ ಆಗ್ತಿಲ್ಲ. ಕೆಲವು ರಸ್ತೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.