NEWSನಮ್ಮಜಿಲ್ಲೆ

ಜನಪ್ರತಿನಿಧಿಯೊಬ್ಬರ ತೇಜೋವಧೆಗೆ ಮುಂದಾಗಿದ್ದ ರೋಹಿಣಿ ಸಿಂಧೂರಿ: ಕ್ರಮಕ್ಕೆ ಶಾಸಕ ಅಶ್ವಿನ್ ಕುಮಾರ್ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಏಕಾಏಕಿ ಜನಪ್ರತಿನಿಧಿಯೋರ್ವರ ತೇಜೋವಧೆಗೆ ಮುಂದಾಗಿದ್ದು, ಮಾಹಿತಿ ಕೊರತೆಯಿಂದ ಗಂಭೀರ ಆರೋಪ ಮಾಡಿರುವ ಅವರ ಮೇಲೆ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕೆಂದು ತಿ.ನರಸೀಪುರ ಕ್ಷೇತ್ರದ ಶಾಸಕ ಎಂ.ಅಶ್ವಿನ್ ಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪಟ್ಟಣದ ತಾಲೂಕು ಕಚೇರಿಯ ಮಿನಿ ವಿಧಾನಸೌಧದಲ್ಲಿರುವ ಶಾಸಕರ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಾ.ರಾ ಮಹೇಶ್ ಅವರ ಮೇಲೆ ಭೂ ಕಬಳಿಕೆ ವೃಥಾ ಆರೋಪಕ್ಕೆ ರಾಜ್ಯ ಸರ್ಕಾರದ ತನಿಖೆಯಲ್ಲಿ ಕ್ಲೀನ್ ಚಿಟ್ ನೀಡಿದ್ದು, ಆರೋಪವನ್ನು ಹೊರಿಸಿರುವ ರೋಹಿಣಿ ಸಿಂಧೂರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಧು ಒತ್ತಾಯಿಸಿದರು.

ವಿಧಾನಸಭಾ ಕ್ಷೇತ್ರವೊಂದನ್ನು ಶಾಸಕರಾಗಿ ಪ್ರತಿನಿಧಿಸುವ ಸಾ.ರಾ.ಮಹೇಶ್ ಪಕ್ಷದ ಮುಖಂಡರಲ್ಲದೆ, ಮಾಜಿ ಸಚಿವರು ಕೂಡ. ಅಂತಹವರ ಮೇಲೆ ದಾಖಲೆಗಳಿಲ್ಲದೆ ಸಾರ್ವಜನಿಕ ಆಡಳಿತ ಸೇವೆಯ ಮುಖ್ಯ ಅಧಿಕಾರಿಯೊಬ್ಬರು ಆರೋಪವನ್ನು ಹೊರಿಸಿದ್ದು ಬೇಸರದ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಅಧಿಕಾರಿಯಾಗಿ ಕೆಲಸ ಮಾಡುವುದೇ ಪ್ರತಿಷ್ಠೆಯಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯನ್ನು ದಕ್ಷತೆಯಿಂದ ಕೆಲಸ ಮಾಡಲು ಬಿಡುತ್ತಿಲ್ಲವೆಂಬ ಸಿಂಧೂರಿ ಆರೋಪವನ್ನು ತಳ್ಳಿ ಹಾಕಿದ ಅಶ್ವಿನ್ ಕುಮಾರ್, ಈ ಹಿಂದೆ ಡಿಸಿಗಳಾಗಿದ್ದ ಹರ್ಷಗುಪ್ತ, ಮಣಿವಣ್ಣನ್, ಸಿ.ಶಿಖಾ ಹಾಗೂ ಇನ್ನಿತರ ಅಧಿಕಾರಿಗಳು ಕೆಲಸವನ್ನು ಮಾಡಿಲ್ಲವೇ ಎಂದು ಪ್ರಶ್ನಿಸಿದರು.

ಜನಪ್ರತಿನಿಧಿಯೊಬ್ಬರ ಆರೋಪವನ್ನು ವೈಯಕ್ತಿಕವಾಗಿ ತೆಗೆದುಕೊಂಡ ಮನಸ್ಥಿತಿಯನ್ನು ನಿರ್ಗಮಿತ ಜಿಲ್ಲಾಧಿಕಾರಿಗಳು ಸರಿಪಡಿಸಿಕೊಳ್ಳಬೇಕು. ಸುಳ್ಳು ಕಾರಣಕ್ಕೆ ಇಂತಹ ಹುದ್ದೆಗೆ ಚ್ಯುತಿಯನ್ನು ತರಬಾರದು ಎಂದರು.

ಕೊರೊನಾ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳಂತೆ ಜನಪ್ರತಿನಿಧಿಗಳು ಅವರವರ ಕ್ಷೇತ್ರಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಗ್ರಾಪಂ ಸದಸ್ಯರಿಂದ ಸಂಸದರ ವರೆಗೆ, ಡಿ ಗ್ರೂಪ್ ನೌಕರ ನಿಂದ ಜಿಲ್ಲಾಧಿಕಾರಿಯವರಿಗೆ ಎಲ್ಲರೂ ಜನರಿಗಾಗಿ ಸಾರ್ವಜನಿಕ ಸೇವಕರಾಗಿ ಕೆಲಸವನ್ನು ಮಾಡಬೇಕು.

ಜನಪ್ರತಿನಿಗಳನ್ನ ವಿಲನ್ ಗಳಂತೆ ಬಿಂಬಿಸಿ, ಅಧಿಕಾರಿಗಳಾದ ನಾವು ಸರಿ ಅನ್ನೋ ಮನಸ್ಥಿತಿ  ಇಬ್ಬರಲ್ಲೂ ಇರಬಾರದು. ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಸಮನ್ವಯತೆ ಇರಬೇಕು. ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಪ್ರತಿನಿಧಿ ಮೇಲೆ ವೃತ ಆರೋಪ ಹೊರಿಸಿರುವ ಪ್ರಕರಣದ ತನಿಖೆ ನಡೆಸಿ, ಶಿಸ್ತು ಕ್ರಮ ಜರುಗಿಸಬೇಕೆಂದು ಶಾಸಕರು ಒತ್ತಾಯಿಸಿದರು.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?