NEWSನಮ್ಮರಾಜ್ಯಸಿನಿಪಥ

ಸ್ಯಾಂಡಲ್​ವುಡ್​ ಹಿಟ್​ ಜೋಡಿ ಶಿವರಾಜ್​ಕುಮಾರ್​ – ಸುಧಾರಾಣಿ ನಟಿಸಿದ ಮೊದಲ ಸಿನಿಮಾ ‘ಆನಂದ್​’ಗೀಗ 35ರ ಸಂಭ್ರಮ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಶಿವರಾಜ್​ಕುಮಾರ್​ ಮತ್ತು ಸುಧಾರಾಣಿ ಅವರದ್ದು ಒಂದು ಕಾಲದಲ್ಲಿ ಹಿಟ್​ ಜೋಡಿ. ಒಂದೇ ಸಮಯಕ್ಕೆ ಚಿತ್ರರಂಗಕ್ಕೆ ಕಾಲಿಟ್ಟ ಈ ಇಬ್ಬರೂ​ ಕಲಾವಿದರು ಬಳಿಕ ಸ್ಯಾಂಡಲ್​ವುಡ್​ನಲ್ಲಿ ಮಾಡಿದ್ದು ದೊಡ್ಡ ಸಾಧನೆ. ನಾಯಕ-ನಾಯಕಿಯಾಗಿ ಇಬ್ಬರೂ ನಟಿಸಿದ ಮೊದಲ ಸಿನಿಮಾ ‘ಆನಂದ್​’. 1986ರಲ್ಲಿ ತೆರೆಕಂಡ ಆ ಚಿತ್ರಕ್ಕೀಗ 35 ವರ್ಷ ತುಂಬಿದೆ. ಅದನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಈ ಸ್ಯಾಂಡಲ್‍ವುಡ್ ನಟಿ ಸುಧಾರಾಣಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಆನಂದ್ ಚಿತ್ರ ತೆರೆಕಂಡು 35 ವರ್ಷ ಆಗಿರುವ ಅಪರೂಪದ ಫೋಟೋಗಳನ್ನು ನಿನ್ನೆ ಸುಧಾರಾಣಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

1986 ಜೂ.19 ನನ್ನ ಜೀವನದ ಬಹುಮುಖ್ಯ ದಿನವಾಗಿದೆ. ಆನಂದ್ ಸಿನಿಮಾ ತೆರೆಕಂಡು 35 ವರ್ಷ ಕಳೆಯಿತು. ಇದು ಸಾಧ್ಯವಾಗಲು ಕಾರಣರಾದ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ಮೊದಲ ದಿನದ ಶೂಟಿಂಗ್‍ನಿಂದ 100 ದಿನಗಳ ಸಮಾರಂಭದವರೆಗಿನ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಇನ್‍ಸ್ಟಗ್ರಾಮ್‍ನಲ್ಲಿ ಸುಧಾರಾಣಿ ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಿಶೇಷ ಎಂದರೆ ಸುಧಾರಾಣಿ ಅವರ ಮೊದಲ ಹೆಸರು ಜಯಶ್ರೀ ಆಗಿತ್ತು. ಪತ್ರಿಕೆಗಳಲ್ಲಿ ಬರುತ್ತಿದ್ದ ಕೆಲವು ಲೇಖನಗಳಲ್ಲೂ ಅವರ ಹೆಸರನ್ನು ಜಯಶ್ರೀ ಎಂದೇ ಬರೆಯಲಾಗುತ್ತಿತ್ತು. ಆನಂದ್ ಸಿನಿಮಾದಿಂದಾಗಿ ಅವರು ಸುಧಾರಾಣಿಯಾಗಿ ಬದಲಾದರು. ಚಿತ್ರಕ್ಕಾಗಿ ಶಿವರಾಜ್‍ಕುಮಾರ್ ಜೊತೆ ಮಾಡಿಸಿದ್ದ ಫೋಟೋಶೂಟ್, ಶೂಟಿಂಗ್ ಸಮಯದ ಫೋಟೋ, ಶತದಿನೋತ್ಸವ ಸಂಭ್ರಮದ ಪೋಸ್ಟರ್, ಆಹ್ವಾನ ಪತ್ರಿಕೆ ಹಾಗೂ ಸೋಲೋ ಫೋಟೋಶೂಟ್ ಮುಂತಾದ್ದನ್ನು ಸುಧಾರಾಣಿ ಈಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಶಿವರಾಜ್‍ಕುಮಾರ್ ಮತ್ತು ಸುಧಾರಾಣಿ ಅವರದ್ದು ಹಿಟ್ ಜೋಡಿಯಾಗಿತ್ತು. ಒಂದೇ ಸಮಯಕ್ಕೆ ಚಿತ್ರರಂಗಕ್ಕೆ ಕಾಲಿಟ್ಟ ಈ ಇಬ್ಬರು ಕಲಾವಿದರು ಬಳಿಕ ಸ್ಯಾಂಡಲ್‍ವುಡ್‍ನಲ್ಲಿ ದೊಡ್ಡ ಸಾಧನೆಯನ್ನು ಮಾಡಿದರು.

ನಾಯಕ, ನಾಯಕಿಯಾಗಿ ಇಬ್ಬರೂ ನಟಿಸಿದ ಮೊದಲ ಸಿನಿಮಾ ಆನಂದ್ ಆಗಿದೆ. ಆನಂದ್ ಸಿನಿಮಾ ಮೂಲಕವಾಗಿಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶಿವರಾಜ್‍ಕುಮಾರ್ ಅವರು ಸಿನಿ ಪಯಣಕ್ಕೆ 35 ವರ್ಷ ಪೂರೈಸಿದ್ದಾರೆ.

ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಕೋರುತ್ತಿದ್ದಾರೆ. ಆನಂದ್ ಚಿತ್ರಕ್ಕೆ ಸಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನ ಮಾಡಿದ್ದರು. ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಪಕಿ ಆಗಿದ್ದರು. ರಾಜೇಶ್, ತಾರಾ, ಜಯಂತಿ, ತೂಗುದೀಪ ಶ್ರೀನಿವಾಸ್ ಮುಂತಾದವರು ಸಹ ನಟಿಸಿದ್ದರು.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?