ಬೆಳಗಾವಿ: ನಾಲ್ಕು ದಿನಗಳ ರಮೇಶ್ ಜಾರಕಿಹೊಳಿ ಅವರ ಮುಂಬೈ ವಾಸ ಅಂತ್ಯಗೊಂಡಿದ್ದು, ಮುಂಬೈನಿಂದ ಗೋಕಾಕ್ ನಗರಕ್ಕೆ ವಾಪಸಾಗಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು ಎನ್ನಲಾಗಿದ ಜಾರಕಿಹೊಳಿ ಈಗ ಸಂಪುಟದಲ್ಲಿ ಸ್ಥಾನ ನೀಡುವಂತೆ ಮಹಾರಾಷ್ಟ್ರ ನಾಯಕರ ಮೂಲಕ ಸಿಎಂ ಯಡಿಯೂರಪ್ಪರಿಗೆ ಒತ್ತಡ ಹೇರಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ನಡುವೆ ಸಿಎಂ ಯಡಿಯೂರಪ್ಪ ಜತೆ ಅಸಮಾಧಾನ ಕುರಿತು ಹಾಗೂ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಸಲು ಬೆಂಗಳೂರಿಗೆ ರಾಜಕಿಹೊಳಿ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.