ಜೇವರ್ಗಿ: ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಸಂಭ್ರಮದಿಂದ ಇಂದು ಕಾರಹುಣ್ಣಿಮೆಯನ್ನು ಆಚರಿಸಲಾಯಿತು.
ರೈತನ ಆಪ್ತಮಿತ್ರ ಎಂದು ಕರೆಯುವ ಎತ್ತುಗಳನ್ನು ಬೆಳಗ್ಗೆಯಿಂದಲೇ ಮೈ ತೊಳೆದು ವಿವಿಧ ಬಣ್ಣಗಳಿಂದ ಅಲಂಕರಿಸಿ ನಂತರ ಮನೆಯ ಹೊರಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಎತ್ತುಗಳಿಗೆ ಆರತಿಯನ್ನು ಮನೆಯ ಹೆಂಗಳೆಯರು ಬೆಳಗಿ ಬರಮಾಡಿಕೊಂಡರು.
ಪೂಜೆ ನಂತರ ಎತ್ತುಗಳಿಗೆ ವಿಶೇಷ ನೈವೇದ್ಯವನ್ನು ತಿನ್ನಿಸಿ ಸಂಭ್ರಮ ಪಟ್ಟರು. ಗ್ರಾಮಗಳ ಪ್ರತಿ ರೈತರು ಎತ್ತುಗಳನ್ನು ಮೆರವಣಿಗೆ ಮಾಡಿ ಬಳಿಕ ಎತ್ತುಗಳಿಂದ ಸಂಜೆ ಕರಿ ಹರಿಯುವ ಕಾರ್ಯಕ್ರಮ ಮಾಡಿ ಸಂಭ್ರಮ ಪಟ್ಟರು.