NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

ಸಾರಿಗೆ ನೌಕರರ ಸಮಸ್ಯೆ ಕೇಳುವಲ್ಲಿ ಇನ್ನೂ ಸಚಿವರು- ಅಧಿಕಾರಿಗಳ ಉದಾಸೀನತೆ ಏಕೆ…?

ನೌಕರರ ಪರ ವಕೀಲರ ನೇತೃತ್ವದಲ್ಲಾದರೂ ಸಭೆ ಕರೆಯುವ ಮನಸ್ಸು ಮಾಡಲಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಳೆದ ಏಪ್ರಿಲ್‌ 7ರಿಂದ ಆರಂಭವಾಗಿ ಏ.20ಕ್ಕೆ ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿ, ಬಹುತೇಕ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ ವಜಾಗೊಂಡ ನೌಕರರನ್ನು ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳುವಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಏಕೋ ಮನಸ್ಸು ಕರಗಿದಂತೆ ಕಾಣಿಸುತ್ತಿಲ್ಲ.

ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಡೆಸಿದ ಹೋರಾಟದಲ್ಲಿ ಹಲವು ಅಮಾಯಕ ನೌಕರರನ್ನು ನಾಲ್ಕೂ ನಿಗಮಗಳಲ್ಲಿ ವಜಾ, ವರ್ಗಾವಣೆ ಮತ್ತು ಅಮಾನತಿನ ಶಿಕ್ಷೆ ನೀಡಿರುವುದು ಸರಿಯಲ್ಲ. ಏನೆ ಮಾಡಿದರೂ ಕಾನೂನಿನಡಿಯೇ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಸಾರಿಗೆ ನೌಕರರ ಪರ ಹೈಕೋರ್ಟ್‌ನಲ್ಲಿ ವಕಾಲತ್ತು ವಹಿಸಿರುವ ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈ ಕೋರ್ಟ್‌ ವಕೀಲರಾದ ಎಚ್‌.ಬಿ. ಶಿವರಾಜು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಅದರಲ್ಲಿ ಅಮಾನತುಗೊಂಡ ನೌಕರರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಂಡಿದೆ. ಆದರೆ, ವಜಾಗೊಂಡವರನ್ನು ಮತ್ತೆ ಕರ್ತವ್ಯಕ್ಕೆ ತೆಗದುಕೊಂಡಿಲ್ಲ, ಇನ್ನು ವರ್ಗಾವಣೆಗೊಂಡವರ ವರ್ಗಾವಣೆ ರದ್ದು ಮಾಡಿ ಏ.6ರ ಹಿಂದೆ ಇದ್ದಂತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ನಡೆದುಕೊಳ್ಳುವ ಬದಲು ಸಾರಿಗೆ ಸಚಿವರಿಗೂ ದಿಕ್ಕು ತಪ್ಪಿಸಿ ನೌಕರರನ್ನು ಅತಂತ್ರ ಸ್ಥಿತಿಯಲ್ಲೇ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ನಡುವೆ ವಕೀಲರಾದ ಎಚ್‌.ಬಿ.ಶಿವರಾಜು ಅವರು ಮೊದಲು ನೌಕರರನ್ನು ಏ.6ರ ಹಿಂದೆ ಇದ್ದಂತೆ ನಡೆಸಿಕೊಳ್ಳಿ ನಂತರ ಕಾನೂನು ಹೋರಾಟ ಮುಂದುವರಿಯಲಿ ಎಂದು ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು. ಆದರೂ ಅವರ ಮನವಿಗೆ ಸರ್ಕಾರವಾಗಲಿ ಅಧಿಕಾರಿಗಳಾಗಲಿ ಕಿವಿಗೊಟ್ಟಂತೆ ಕಾಣುತ್ತಿಲ್ಲ.

ಇದರಿಂದ ಇನ್ನೊಂದು ಚಾನ್ಸ್‌ ಎಂಬಂತೆ ಸಾರಿಗೆ ಸಚಿವರು ಅಥವಾ ಅಧಿಕಾರಿಗಳು ವಕೀಲರಾದ ಶಿವರಾಜು ಅವರ ನೇತೃತ್ವದಲ್ಲಾದರೂ ಕೂಟದ ಪದಾಧಿಕಾರಿಗಳ ಸಭೆ ಕರೆದು ಇರುವ ಗೊಂದಲಗಳನ್ನು ನಿವಾರಿಸಬಹುದಿತ್ತು. ಅದನ್ನು ಮಾಡಲಿಲ್ಲ.

ಇನ್ನು ಸಾರಿಗೆ ನೌಕರರಿಗೆ ಆಗುತ್ತಿರುವ ಸಮಸ್ಯೆಯನ್ನು ಸದ್ಯ ಬಗೆಹರಿಸುವ ಬಗ್ಗೆ ಮನಸ್ಸು ಮಾಡಿ ಸ್ವತಃ ವಕೀಲರಾದ ಶಿವರಾಜು ಅವರೇ ಸಚಿವರಿಗೆ ಫೋನ್‌ ಮಾಡಿದರೆ ಅವರ ಆಪ್ತ ಕಾ‌ರ್ಯದರ್ಶಿ ಫೋನ್‌ ರಿಸಿವ್‌ ಮಾಡಿ ಸಾಹೇಬರು ಈಗ ಬಿಸಿಯಾಗಿದ್ದಾರೆ. ಇಷ್ಟಕ್ಕೂ ನೀವು ಯಾರು? ಸರ್ಕಾರಿ ವಕೀಲರ? ನೌಕರರ ಸಮಸ್ಯೆ ನಿವಾರಿಸುವುದಕ್ಕೆ ಸಚಿವರ ಅಪಾಯಿಂಟ್‌ಮೆಂಟ್‌ ಸದ್ಯಕ್ಕೆ ಕೊಡಲು ಸಾಧ್ಯವಿಲ್ಲ ಎಂದು ಫೋನ್‌ ಕಾಲ್‌ ಕಟ್‌ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಂದರೆ ಇವರು ಏಷ್ಯಾದಲ್ಲಿಯೇ ಒಳ್ಳೆ ಹೆಸರು ಮಾಡಿರುವ KSRTC ಸಂಸ್ಥೆಯ ನೌಕರರ ಸಮಸ್ಯೆ ಆಲಿಸಲಾಗದಷ್ಟು ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ಬಿಸಿಯಾಗಿದ್ದಾರೆಯೆ. ಅಂದರೆ ಇವರಿಗೆ ಸಾರಿಗೆ ಸಂಸ್ಥೆ ಮತ್ತು ನೌಕರರ ಸಮಸ್ಯೆ ನಿವಾರಿಸುವ ಕೆಲಸ ಬಿಟ್ಟು ಮತ್ತಾವುದನ್ನು ಸರ್ಕಾರ ವಹಿಸಿದೆ ಎಂಬುವುದು ತಿಳಿಯುತ್ತಿಲ್ಲ.

ಇನ್ನು ಸುಪ್ರೀಮ್‌ ಕೋರ್ಟ್‌ನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ  ಪ್ರಕರಣ ಸೇರಿದಂತೆ ವಿವಿಧ ರಾಜ್ಯಗಳ ಅನೇಕ ಗಣ್ಯವ್ಯಕ್ತಿಗಳ ನೂರಾರು ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಧೀಶರನ್ನೊಳಗೊಂಡ  ತ್ರಿಸದಸ್ಯ ಪೀಠದ ಮುಂದೆ ವಾದ ಮಂಡಿಸಿ ಯಶಸ್ಸು ಕಂಡಿರುವ  ( ಉದಾ: ಪ್ರೇಮ್‌ ಕುಮಾರ್‌ V/S ಉತ್ತರ ಪ್ರದೇಶ ಸರ್ಕಾರ, ಪುರುಷೋತ್ತಮ ಶರ್ಮಾ V/S ಮಹಾರಾಷ್ಟ್ರ ಸರ್ಕಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧ ಪಟ್ಟ 23 ವರ್ಷಗಳ ಸುದೀರ್ಘ ಪ್ರಕರಣವನ್ನು ವಜಾಗೊಳಿಸುವಷ್ಟರ ಮಟ್ಟಿಗೆ ವಾದ ಮಂಡಿಸಿರುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಯಶಸ್ಸು)  ವಕೀಲರನ್ನೇ ಕರೆದು ಮಾತನಾಡಿಸದಷ್ಟು ಉದಾಸೀನತೆ ಸಾರಿಗೆ ಸಚಿವರಿಗೆ ಮತ್ತು ಸಂಸ್ಥೆ ಅಧಿಕಾರಿಗಳಿಗೆ ಏಕೆ ಬಂದಿದೆ ಎಂಬುವುದು ತಿಳಿಯದಾಗಿದೆ.

ಇನ್ನು ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಸರ್ಕಾರ ಮತ್ತು ಸಚಿವರು ನಡೆದುಕೊಳ್ಳುತ್ತಿದ್ದಾರೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸಭೆಕರೆದು ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿದರೆ, ಮುಂದೆ ಯಾವುದೇ ಮುಷ್ಕರವಾಗಲಿ ಅಥವಾ ಪ್ರತಿಭಟನೆಯನ್ನಾಗಲಿ ಮಾಡುವುದಿಲ್ಲ ಎಂಬ ಅಫಿಡವಿಟ್‌ ನೌಕರರಿಂದ ಮಾಡಿಸಿಕೊಡುತ್ತೇವೆ ಎಂದು ವಕೀಲರು ಭರವಸೆ ನೀಡುತ್ತಿದ್ದಾರೆ. ಇದಕ್ಕೆ ಸಚಿವರು ಮತ್ತು ಅಧಿಕಾರಿಗಳು ಓಗೊಟ್ಟು ಸಾರ್ವಜನಿಕರ ಹಿತ ದೃಷ್ಟಿಯಿಂದಲಾದರೂ ಒಮ್ಮೆಸಭೆ ಕರೆಯಬೇಕಿದೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ