ನ್ಯೂಡೆಲ್ಲಿ: ಸಂಸತ್‌ನ ಮುಂಗಾರು ಅಧಿವೇಶನ ಸೋಮವಾರ (ಜು.19) ಆರಂಭವಾಗಲಿದೆ.
ಅಧಿವೇಶನ ಹಿನ್ನೆಲೆಯಲ್ಲಿ ಭಾನುವಾರ ಸರ್ವಪಕ್ಷಗಳ ಸಭೆಯನ್ನು ಆಯೋಜಿಸಲಾಗಿತ್ತು. ʻಸಂಸತ್‌ನ ಮುಂಗಾರು ಅಧಿವೇಶನ ಸಂದರ್ಭದಲ್ಲಿ ವಿವಿಧ ವಿಷಯಗಳ ಕುರಿತು ಆರೋಗ್ಯಕರ ಹಾಗೂ ಅರ್ಥಪೂರ್ಣ ಚರ್ಚೆಗೆ ಸರ್ಕಾರ ಸಿದ್ಧವಿದೆʼ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
33 ಪಕ್ಷಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ರಕ್ಷಣಾ ಮಂತ್ರಿ ರಾಜನಾಥ್‌ಸಿಂಗ್, ರಾಜ್ಯಸಭೆಯ ಸದನ ನಾಯಕ ಪೀಯೂಷ್ ಗೋಯಲ್, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್‌ರಂಜನ್ ಚೌಧರಿ.
ಟಿಎಂಸಿ ಸಭಾನಾಯಕ ಡೆರೆಕ್ ಓಬ್ರಿಯಾನ್, ಡಿಎಂಕೆ ನಾಯಕ ತಿರುಚಿ ಶಿವ, ಸಮಾಜವಾದಿ ಪಾರ್ಟಿಯ ರಾಮಗೋಪಾಲ್ ಯಾದವ್, ಬಿಎಸ್‌ಪಿಯ ಸತೀಶ್ ಮಿಶ್ರಾ, ಎನ್‌ಡಿಎ ಅಂಗಪಕ್ಷವಾದ ಅಪ್ನಾ ದಳದ ನಾಯಕಿ ಅನುಪ್ರಿಯಾ ಪಟೇಲ್, ಎಲ್‌ಜಿಪಿ ಮುಖಂಡ ಪಶುಪತಿ ಪರಸ್ ಸಹ ಉಪಸ್ಥಿತರಿದ್ದರು.
ಮುಂಗಾರು ಅಧಿವೇಶನ ಆಗಸ್ಟ್ 13ರಂದು ಮುಕ್ತಾಯಗೊಳ್ಳುವುದು.