NEWSನಮ್ಮರಾಜ್ಯರಾಜಕೀಯ

ಧರ್ಮಾಧಿಕಾರಿಗಳು ಭ್ರಷ್ಟ್ರಾಚಾರಿಗಳ ಪರ ನಿಂತಿರುವುದು ಸರಿಯಲ್ಲ: ಎಚ್‌.ವಿಶ್ವನಾಥ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಧರ್ಮಾಧಿಕಾರಿಗಳು ಭ್ರಷ್ಟ್ರಾಚಾರಿಗಳ ಪರ ನಿಂತಿರುವುದು ಸರಿಯಲ್ಲ. ಧರ್ಮಾಧಿಕಾರಿಗಳನ್ನು ಬೀದಿಗೆ ಬರುವಂತೆ ಮಾಡಿ ಅವರ ಬೆಂಬಲ ಗಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸರಿಯಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಎಚ್.ವಿಶ್ವನಾಥ್ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

ಇದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮಠಗಳು ಶ್ರದ್ದಾ ಕೇಂದ್ರಗಳಾಗಿರಬೇಕೇ ವಿನಃ ರಾಜಕೀಯ ಮಾಡಬಾರದು. ಧರ್ಮದಲ್ಲಿ ರಾಜಕಾರಣ ಇರಬಾರದು, ರಾಜಕಾರಣದಲ್ಲಿ ಧರ್ಮವಿರಬೇಕು ಎಂದು ಹೇಳಿದರು.

ಕರ್ನಾಟಕ ಸರ್ವ ಧರ್ಮಗಳ ನೆಲೆವೀಡು ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ, ಬಸವೇಶ್ವರರು ಸರ್ವ ಧರ್ಮಗಳ ಸಮನ್ವಯತೆ ಸಾರಿದ್ದಾರೆ. ಇಂತಹ ಹಿನ್ನೆಲೆಯುಳ್ಳ ನಾಡಿನಲ್ಲಿ ಮಠಾಧೀಶರು ಈಗ ಒಂದು ಪಕ್ಷ, ಓರ್ವ ವ್ಯಕ್ತಿಯ ಬೆಂಬಲಕ್ಕೆ ನಿಂತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ ಅವರು ಯಾವ ರಾಜಕೀಯಕ್ಕೂ ಆಸ್ಪದ ನೀಡಲಿಲ್ಲ. ಅಂತಹವರನ್ನು ನೋಡಿ ಜನತಂತ್ರ ವ್ಯವಸ್ಥೆಯಲ್ಲಿ ಕೆಲ ಮಠಾಧೀಶರು ಕಲಿಯಬೇಕಿದೆ. ಕಾಣಿಕೆ ಪಡೆಯುವ ಯಾವ ಸ್ವಾಮೀಜಿಗಳೂ ಕೋವಿಡ್ ಸಮಯದಲ್ಲಿ ಮಠದಿಂದ ಹೊರ ಬರಲಿಲ್ಲ. ಯಾರೂ ಬರದಂತೆ ಮಠಗಳ ಬಾಗಿಲು ಬಂದ್ ಮಾಡಿಕೊಂಡರು. ಇದರ ನಡುವೆಯೂ ಸುತ್ತೂರು ಶ್ರೀಗಳು ಬಡ ಜನರಿಗೆ ನೆರವಾದರು ಎಂದು ತಿಳಿಸಿದರು.

‘ಸ್ವಯಂಕೃತ ಅಪರಾಧದಿಂದ ನೀವು ಜೈಲು ಪಾಲಾದಾಗ ಯಾವ ಮಠಾಧೀಶರು ನಿಮ್ಮ ಪರವಾಗಿ ನಿಂತಿದ್ದರು ಹೇಳಿ. ನಿಮ್ಮಿಂದಲೇ ಬಿಜೆಪಿಗೆ 104 ಸ್ಥಾನ ಬಂದಿಲ್ಲ, ಮೋದಿಯಿಂದ 104 ಸ್ಥಾನ ಬಂದಿದ್ದು. ಅವರು ಕೊಟ್ಟ ಆಡಳಿತ ನೀವು ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

error: Content is protected !!
LATEST
ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ