ಬೆಂಗಳೂರು: ಲಂಚ ಅವತಾರದಲ್ಲಿ ಈಗ ಎಸಿಬಿ ಬಲೆಗೆ ಬಿದ್ದಿರುವ ಮಿಕ ಕೇವಲ ಒಂದು ಸಾಸಿವೆ ಕಾಳಿನಲ್ಲಿನ ಕಣ್ಣಿಗೆ ಕಾಣಿಸದಷ್ಟು ಚಿಕ್ಕ ತುಣುಕು ಅಷ್ಟೇ. ಸಾರಿಗೆ ಸಂಸ್ಥೆಯಲ್ಲಿ ದಿನ ಬೆಳಗಾದರೆ ಲಂಚವಿಲ್ಲದೇ ಬಸ್ಗಳೇ ಹೊರಗೆ ಬರೋದಿಲ್ಲ ಎಂಬ ಕಟು ಸತ್ಯದ ಬಗ್ಗೆ ಅರಿವಿದ್ದರೂ ನೌಕರರು ಮಾತ್ರ ನಮಗೆ ಇದರಿಂದ ಎಲ್ಲಿ ತೊಂದರೆ ಆಗುತ್ತದೋ ಎಂಬ ಭಯದಲ್ಲಿ ತಿಣುಕಾಡುತ್ತಾಲೇ ಕೆಲಸ ಮಾಡುತ್ತಿದ್ದಾರೆ.
ಮೊದಲು ಸಾರಿಗೆಯ ನಾಲ್ಕು ಸಂಸ್ಥೆಗಳಿಲ್ಲಿವರು 2 ರೂ. ಲಂಚದಿಂದ 2ಲಕ್ಷ ರೂ. ಲಂಚದ ಕೆಟ್ಟ ಭ್ರಷ್ಟಾಚಾರ ತೊಲಗಿಸಲು ವಿಜಯಪಥ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲರ ಮಾರ್ಗ ದರ್ಶನದಲ್ಲಿ ರಾಜ್ಯದ ಎಲ್ಲ ಡಿಪೋಗಳಿಗೆ ತಂಡ ಕಳುಹಿಸಿ ಮಾಹಿತಿ ಕಲೆ ಹಾಕುವ ಮೂಲಕ ಲಂಚಾವತಾರ ಅಧಿಕಾರಿಗಳಿಗೆ ಬೆವರಿಳಿಸಲು ಸದ್ದಿಲ್ಲದೆ ಸಿದ್ಧತೆಯಲ್ಲಿ ತೊಡಗಿದೆ.
ಹೀಗಾಗಿ ಯಾವುದೇ ಚಾಲನಾ ಸಿಬ್ಬಂದಿಗೆ ನಿಮ್ಮ ಡಿಪೋಗಳಲ್ಲಿ ಸರಿಯಾಗಿ ಡ್ಯೂಟಿ ಕೊಡದಿದ್ದರೆ ನಮ್ಮ ವಿಜಯಪಥ ಆನ್ಲೈನ್ ಪತ್ರಿಕೆಯನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಜತೆಗೆ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿರಿಸಲಾಗುವುದು. ಪ್ರತಿಯೊಬ್ಬ ನೌಕರರು ಇನ್ನು ಮುಂದೆ ಲಂಚ ಕೊಡುವುದಿಲ್ಲ ಎಂಬ ವಾಗ್ದಾನ ಮಾಡಿ ಭ್ರಷ್ಟಚಾರ ನಡೆದರೆ ಅದನ್ನು ವಿರೋಧಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಈ ಮೂಲಕ ನಮ್ಮ ಸಲಹೆ.
ಇನ್ನು ನಿನ್ನೆ ಅಂದರೆ, ಮಂಗಳವಾರ ತಡರಾತ್ರಿ ಚಿಂತಾಮಣಿಯಲ್ಲಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೆಎಸ್ ಆರ್ ಟಿಸಿ ಟ್ರಾಫಿಕ್ ಕಂಟ್ರೋಲರ್ ವೆಂಕಟಾಚಲಪತಿಯನ್ನು ಬಲೆಗೆ ಕೆಡವಿದ್ದಾರೆ.
ವೆಂಕಟಾಚಲಪತಿ ಸಂಬಂಧಿ ಹಾಗೂ ಮೇಲಧಿಕಾರಿಯಾಗಿದ್ದ ಡಿಸಿ ಚಂದ್ರಶೇಖರ್ ಅವರಿಗೆ ಲಂಚದ ಮೊತ್ತ ತಲುಪಿಸುತ್ತಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
ಹೌದು! ಕೋಲಾರ ಕೆಎಸ್ಆರ್ಟಿಸಿ ಡಿಸಿ ಚಂದ್ರಶೇಖರ್ ತಮ್ಮ ಸಂಬಂಧಿಯಾದ ಜಿ.ಎನ್. ವೆಂಕಟಾಚಲಪತಿ ಮೂಲಕ ಕಂಡಕ್ಟರ್ ಬಳಿ 2 ಲಕ್ಷ ರೂ. ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಿವೃತ್ತಿ ಘೋಷಣೆ ಮಾಡಲು ಇಷ್ಟು ದೊಡ್ಡ ಮೊತ್ತ ಕೇಳಿದ್ದು ಮುಂಗಡವಾಗಿ 1 ಲಕ್ಷ ರೂ. ಸ್ವೀಕರಿಸಿದ್ದ ಚಂದ್ರಶೇಖರ್ 50 ಸಾವಿರ ರೂ. ನೀಡುವಂತೆ ಪಟ್ಟು ಹಿಡಿದಿದ್ದರು.
ಅದರಲ್ಲಿ 40 ಸಾವಿರ ರೂ. ಲಂಚ ಪಡೆಯುವ ವೇಳೆ ವೆಂಕಟಾಚಲಪತಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೋಲಾರ ಎಸಿಬಿ ಡಿವೈಎಸ್ಪಿ ವಿರೇಂದ್ರಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಇಂಥ ಸಾರಿಗೆ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಡಿಪೋ ಡಿಪೋಗಳಲ್ಲೇ ಬಿಸಿ ಮುಟ್ಟಿಸುವ ಕೆಲಸವಾಗಬೇಕು. ಅದಕ್ಕೆ ಎಸಿಬಿ ಅಧಿಕಾರಿಗಳಿಗೆ ಹಾಗೂ ವಿಜಯಪಥಕ್ಕೆ ತಾವು ಬೆಂಬಲವಾಗಿ ನಿಂತು ಲಂಚ ಮುಕ್ತ ಸಂಸ್ಥೆಯಾಗಿಸಲು ಕೈ ಜೋಡಿಸಿ.