CrimeNEWS

ಮಗಳ ಅದ್ದೂರಿ ಮದುವೆ: ಶಾಸಕ ಜಮೀರ್ ಮನೆ ಮೇಲೆ ಇಡಿ ದಾಳಿಗೆ ಕಾರಣವಾಯ್ತ..!?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೆ ನಡೆದ ಇಡಿ ಅಧಿಕಾರಿಗಳ ದಾಳಿ ಸತತ 23 ಗಂಟೆ ಗಳ ಬಳಿಕ ಅಂತ್ಯವಾಗಿದೆ.

ಇಡಿ ದಾಳಿಗೆ ಪ್ರಮುಖ ಕಾರಣಗಳನ್ನು ನೋಡುತ್ತಾ ಹೋದರೆ ಮೊದಲಿಗೆ ಸಿಗೋದೆ ಜಮೀರ್ ಅವರ ಮಗಳ ಮದುವೆ ಅದ್ದೂರಿಯಾಗಿ ಮಾಡಿದ್ದು ಎಂಬ ವದಂತಿ ಹರಿದಾಡುತ್ತಿದೆ.

ಜಮೀರ್ ಮನೆ ಮೇಲಿನ ಇಡಿ ದಾಳಿ ಏಕಾಯಿತು ಎಂಬುವುದು ಎಲ್ಲರ ಕುತೂಹಲವಾಗಿದೆ. ಈ ದಾಳಿಗೆ ಮೊದಲ ಕಾರಣ ಜಮೀರ್ ಅವರ ಮಗಳ ಅದ್ದೂರಿ ಮದುವೆ ಎಂಬ ಮಾತು ಕೇಳಿಬರುತ್ತಿದೆ.

ಕಳೆದ ಜುಲೈ 22 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದ ಆ ಅದ್ದೂರಿ ಮದುವೆ ಯಾವ ಮಹಾರಾಜರ ಮದುವೆಗೂ ಕಡಿಮೆ ಇರಲಿಲ್ಲ. ಬಾಲಿವುಡ್ ನಟ -ನಟಿಯರು, ರಾಜಕೀಯ ಮುಖಂಡರು, ಉದ್ಯಮಿಗಳು ಸೇರಿದಂತೆ ಗಣ್ಯರು ಮದುವೆಗೆ ಆಗಮಿಸಿ ವಧು ವರರಿಗೆ ಶುಭ ಕೋರಿದ್ದರು.

ಮಗಳ ಮೈಮೇಲೆ ಲಕ್ಷಾಂತರ ರೂ. ಮೌಲ್ಯದ ಕೆಜಿ, ಕೆಜಿ ಚಿನ್ನಾಭರಣ, ಲಕ್ಷಾಂತರ ರೂ. ಬೆಲೆಯ ಬಟ್ಟೆಗಳು. ಅಣ್ಣ ಅಂದವರಿಗೆ ಕೈತುಂಬಾ ಕಾಸು, ಮದುವೆಗೆ ಬಂದವರಿಗೆ ಬೆಲೆಬಾಳುವ ವಸ್ತ್ರಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದು ಇಡಿ ಕಣ್ಣು ಇವರತ್ತ ಬೀಳಲು ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.

ಮದುವೆಯ ಅಲಂಕಾರಕ್ಕೆ ವಿದೇಶದಿಂದ ಬಂದಿದ್ದ ವಸ್ತ್ರಗಳ ಅಲಂಕಾರಿಗರು, ಹೀಗೆ ಹಲವು ವಿಶೇಷತೆಯಿಂದ ಅದ್ದೂರಿಯಾಗಿ ಮದುವೆ ನಡೆದಿತ್ತು. ಐಎಂಎ ಸಂಸ್ಥಾಪಕ ಮಾನ್ಸೂರ್ ಖಾನ್ ಕೊಟ್ಟ ಕೋಟ್ಯಂತರ ಹಣ, ಕೆಜಿಗಟ್ಟಲೇ ಚಿನ್ನಾಭರಣವನ್ನು ಜಮೀರ್‌ಗೆ ನೀಡಿರುವ ಬಗ್ಗೆ ಆರೋಪ ಕೂಡ ಕೇಳಿಬಂದಿತ್ತು.

ಹಾಗಾಗಿ ಈ ಎಲ್ಲದರಲ್ಲೂ ಇಡಿ ದಾಳಿಗೆ ಇದು ಕೂಡ ಒಂದು ಕಾರಣವಾಗಿದೆ. ಇದರೊಂದಿಗೆ ಮಗಳ ಅದ್ದೂರಿ ಮದುವೆ ನಂತರ ಐಟಿ ಮತ್ತು ಇಡಿಗೆ ಸುಳ್ಳು ಲೆಕ್ಕ ತೋರಿಸಿರುವ ಬಗ್ಗೆ ಮಾಹಿತಿ ಹೋಗಿದೆ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...