CrimeNEWSದೇಶ-ವಿದೇಶ

2 ಬಾಟಲ್‌ ವೈನ್‌ ಅಕ್ರಮ ಸಾಗಾಟ ಆರೋಪ: ಲಕ್ಷ ರೂ. ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ -ಪಿಸಿ, ಎಸ್​ಐ ಸಸ್ಪೆಂಡ್​

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಗೋದಾವರಿ: ಯುವಕನೊಬ್ಬ ಅಕ್ರಮವಾಗಿ ಸಾರಾಯಿ ಸಾಗಣೆ ಮಾಡಿದ್ದಾನೆ ಎಂದು ಆರೋಪಿಸಿ, ಪೊಲೀಸರು ಲಂಚ ಕೇಳಿದ್ದರು ಎನ್ನಲಾಗಿದೆ. ಇದರಿಂದ ಭಯಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಪ್ರಕರಣವನ್ನು ಇಲಾಖಾ ತನಿಖೆಗೆ ಒಪ್ಪಿಸಿ ಸಂಬಂಧಪಟ್ಟ, ಲಂಚ ಕೇಳಿದ ಪೊಲೀಸ್​ ಕಾನ್ಸ್​​ಟೇಬಲ್ ಮತ್ತು ಪೇದೆಯ ಮೇಲೆ ನಿಗಾ ಇಡದ ಸಬ್​​ಇನ್ಸ್​​ಪೆಕ್ಟರ್​​​ನನ್ನು ಪೊಲೀಸ್​ ವರಿಷ್ಠಾಧಿಕಾರಿ ಅಮಾನತು​ ಮಾಡಿ ಆದೇಶ ಹೊರಡಿಸಿದ್ದಾರೆ.

2 ವರ್ಷಗಳ ಹಿಂದಿನ ಹಳೆಯ ಪ್ರಕರಣವೊಂದರಲ್ಲಿ 23 ವರ್ಷದ ಈ ಯುವಕನಿಂದ ಪೊಲೀಸ್​ ಕಾನ್ಸ್​​ಟೇಬಲ್​ ಮೊದಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಬಳಿಕ ಅಷ್ಟು ಮೊತ್ತ ನೀಡಲಿಲ್ಲವೆಂದರೆ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿದ್ದ ಎಂದು ತಿಳಿದುಬಂದಿದೆ.

ಮೃತ ಯುವಕನನ್ನು ಪಿ. ಮಜ್ಜಿ ಎಂದು ಗುರುತಿಸಲಾಗಿದ್ದು, ಈತ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಗ್ರಾಮೀಣ ಮಂಡಲದ ಪಿಡಿಮಗೋಯಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಮಜ್ಜಿ ತೆಲಂಗಾಣದಿಂದ ಆಂಧ್ರ ಪ್ರದೇಶಕ್ಕೆ ಎರಡು ವೈನ್‌ ಬಾಟಲ್​ಗಳನ್ನು ಅಕ್ರಮವಾಗಿ ಸಾಗಿಸಿದ್ದಾನೆ ಎಂದು ಕೃಷ್ಣಾ ಜಿಲ್ಲೆಯ ಚಿಲಕಲು ಪೊಲೀಸ್​ ಠಾಣೆಯಲ್ಲಿ 2020ನೇ ಸಾಲಿನಲ್ಲಿ ಪ್ರಕರಣ ದಾಖಲಾಗಿತ್ತು.

ಒಂದು ವರ್ಷದ ಬಳಿಕ ಚಿಲಕಲು ಪೊಲೀಸ್​ ಠಾಣೆಯ ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್ ಎಂಬಾತ ಪ್ರಕರಣದ ಸಂಬಂಧ ಠಾಣೆಗೆ ಬರುವಂತೆ ​ಯುವಕ ಮಜ್ಜಿಗೆ ಸೂಚಿಸಿದ್ದರು. ಅದರಂತೆ ಆತ ಮಂಗಳವಾರ ಠಾಣೆಗೆ ತೆರಳಿದ್ದ. ಆ ವೇಳೆ ಮಜ್ಜಿ ವಿರುದ್ಧ ಪ್ರಕರಣ ಕೈಬಿಡಲು ಒಂದು ಲಕ್ಷ ರೂಪಾಯಿ ನೀಡುವಂತೆ ಸತಾಯಿಸಿದ್ದಾನೆ. ಇಲ್ಲವಾದಲ್ಲಿ ಡ್ರಗ್ಸ್​​ ಕೇಸ್​​ನಲ್ಲಿ ಫಿಟ್​​ ಮಾಡುವುದಾಗಿ ಧಮ್ಕಿ ಹಾಕಿ, ಕಾನ್ಸ್​​ಟೇಬಲ್​ ಬೆದರಿಸಿದ್ದಾನೆ.

ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್ ಬೆದರಿಕೆ, ಒತ್ತಡ ತಾಳಲಾರದೆ ಮಜ್ಜಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ರಾಜಮಂಡ್ರಿಗೆ ಮರಳಿದವನೆ ಸೆಲ್ಫಿ ವಿಡಿಯೋ ಮಾಡಿಟ್ಟು, ಅದರಲ್ಲಿ ವಿವರವಾಗಿ ಪ್ರಕರಣದ ವಿವರಣೆ ಹೇಳಿಕೊಂಡಿದ್ದಾನೆ. ಅದೇ ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕನ ಸಾವಿನ ಬಳಿಕ ಕೃಷ್ಣಾ ಜಿಲ್ಲೆಯ ಎಸ್​ಪಿ ಸಿದ್ದಾರ್ಥ ಕೌಶಲ್​​ ಅವರು ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್​ನನ್ನು ಅಮಾನತುಗೊಳಿಸಿದ್ದಾರೆ. ಬಳಿಕ, ಸಬ್​ಇನ್ಸ್​​​ಪೆಕ್ಟರ್​​ ದುರ್ಗಾಪ್ರಸಾದ್​ ರಾವ್​​ನನ್ನೂ ಸಸ್ಪೆಂಡ್​ ಮಾಡಿದ್ದಾರೆ.

Leave a Reply

error: Content is protected !!
LATEST
BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ