Please assign a menu to the primary menu location under menu

NEWSದೇಶ-ವಿದೇಶರಾಜಕೀಯ

ನನ್ನ ಭಾಷಣ ಕೋವಿಡ್‌, ಭಯೋತ್ಪಾದನೆ ನಿಗ್ರಹ ಕೇಂದ್ರೀಕರಿಸಲಿದೆ: ಪ್ರಧಾನಿ ಮೋದಿ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಭಾರತ-ಅಮೆರಿಕ ರಾಷ್ಟ್ರದ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತು ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ಅಮೆರಿಕ ಭೇಟಿಯು ಒಂದು ಉತ್ತಮ ಸಂದರ್ಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬುಧವಾರ ಅಮೆರಿಕಗೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೋವಿಡ್ -19 ಸಾಂಕ್ರಾಮಿಕ, ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ ಮತ್ತು ಇತರ ಪ್ರಮುಖ ವಿಚಾರಗಳನ್ನು ಕೇಂದ್ರೀಕರಿಸಿ ಭಾಷಣ ಮಾಡುವ ಮೂಲಕ ಭೇಟಿಯನ್ನು ಮುಕ್ತಾಯಗೊಳಿಸಲಿದ್ದೇನೆಂದು ಹೇಳಿದ್ದಾರೆ.

ಅಮೆರಿಕ ಸಂಯುಕ್ತ ಸಂಸ್ಥಾನದ ಅತ್ಯುನ್ನತ ಅಧ್ಯಕ್ಷ ಜೋ ಬಿಡೆನ್ ಅವರ ಆಹ್ವಾನದ ಮೇರೆಗೆ 22-25 ಸೆಪ್ಟೆಂಬರ್ ರಂದು ಅಮೆರಿಕಗೆ ಭೇಟಿ ನೀಡುತ್ತೇನೆ. ಭೇಟಿ ವೇಳೆ ಗ್ಲೋಬಲ್ ಪಾರ್ಟನರ್​​ಶಿಪ್​​ ಬಗ್ಗೆ ಸಮಗ್ರವಾಗಿ ಅಧ್ಯಕ್ಷ ಜೋ ಬೈಡನ್​ ಜೊತೆ ಚರ್ಚಿಸುತ್ತೇನೆ.

ಪರಸ್ಪರ ಆಸಕ್ತಿ ವಿಷಯಗಳ ಜೊತೆಗೆ ಗ್ಲೋಬಲ್ ಸಮಸ್ಯೆ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ವಿನಿಮಯ ಮಾಡಿಕೊಳ್ಳುವುದು. ಜೊತೆಗೆ ಯುಎಸ್​ಎ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್​ ಅವರ ಭೇಟಿಯನ್ನೂ ಕೂಡ ಎದುರು ನೋಡುತ್ತಿದ್ದೇನೆ.

ಹ್ಯಾರಿಸ್ ಜೊತೆ ಜಾಗತಿಕ ವಿಚಾರಗಳು ಮತ್ತು ಎರಡು ದೇಶಗಳ ಪರಸ್ಪರ ಸಹಕಾರದ ಬಗ್ಗೆ ಚರ್ಚೆಯಾಗಲಿದೆ. ಜೊತೆಗೆ ಅಧ್ಯಕ್ಷ ಜೋ ಬೈಡನ್ ನೇತೃತ್ವದಲ್ಲಿ ನಡೆಯಲಿರುವ ಕ್ವಾಡ್​ ಶೃಂಗಸಭೆಯಲ್ಲೂ ಭಾಗಿಯಾಗಲಿದ್ದೇನೆ. ಇದೇ ಮೊದಲ ಬಾರಿಗೆ ಕ್ವಾಡ್​​ ಲೀಡರ್​ಗಳ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಮ್ಯಾರಿಸನ್ ಹಾಗೂ ಜಪಾನ್ ಪ್ರಧಾನಿ ಸುಗಾ ಅವರನ್ನು ಭೇಟಿ ಮಾಡಲಿದ್ದು, ಉಭಯ ನಾಯಕರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಬೈಡೆನ್ ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಮೆರಿಕಕ್ಕೆ ಹೊರಡಲಿರುವ ಮೋದಿಯವರು, ಕ್ವಾಡ್‌ ಶೃಂಗ ಸಮ್ಮೇ​ಳನ, ವಿಶ್ವ​ಸಂಸ್ಥೆ 76ನೇ ವಾರ್ಷಿಕ ಸಾಮಾನ್ಯ ಸಭೆ​ಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಜೋ ಬೈಡೆನ್‌ ಜತೆ ದ್ವಿಪಕ್ಷೀಯ ಮಾತು​ಕತೆಯನ್ನೂ ನಡೆಸಲಿದ್ದಾರೆ. ಹೀಗಾಗಿ ಮೋದಿ-ಬೈಡೆನ್ ಭೇಟಿ ಮಹತ್ವ ಪಡೆದುಕೊಂಡಿದೆ.

Leave a Reply

error: Content is protected !!
LATEST
ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ವಿತರಣೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ ₹390 ಕೋಟಿ ಹೂಡಿಕೆಯ ಬ್ಯಾಟರಿ ಫ್ಯಾಕ್ಟರಿಗೆ ಶಂಕುಸ್ಥಾಪನೆ : ಸಚಿವ ಪಾಟೀಲ್‌ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು... KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ -ಕಿಚಡಿ ಮುದ್ದೆ, ಪೊಂಗಲ್‌ ರುಚಿಯ ಸವಿ ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬ... ಹೈಪರ್‌ಟೆನ್ಷನ್: ಭಾರತದ ಯುವಜನತೆಗೆ ಅಡಗಿದ ಅಪಾಯ: ಡಾ.ಸಾಯಿಶಂಕರ್ ಹುಬ್ಬಳ್ಳಿ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೆ ಸಿಎಂ ಒತ್ತಾಯಿಸಿ: ಸಚಿವರಿಗೆ ವಾಯವ್ಯ ವಲಯ ನೌಕರರ ಕೂಟ ಮನವಿ