Please assign a menu to the primary menu location under menu

NEWSನಮ್ಮರಾಜ್ಯಶಿಕ್ಷಣ-

ಶಾಲಾ ಶುಲ್ಕ ವಿನಾಯಿತಿಗೆ ಆಗ್ರಹಿಸಿ ಎಎಪಿ ಬೃಹತ್‌ ಪ್ರತಿಭಟನೆ: ಸಾಥ್‌ ನೀಡಿದ ಹಲವು ಸಂಘಟನೆಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರಾಜ್ಯದ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದು ಆಮ್ ಆದ್ಮಿ ಪಾರ್ಟಿ ಪೋಷಕರ ಪರವಾಗಿ ಫೀಸ್ ಇಳಿಸಲು ಆಗ್ರಹಿಸಿ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತು.

ಆಮ್ ಆದ್ಮಿ ಪಾರ್ಟಿಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಪೋಷಕರು, ಪೋಷಕರ ಸಂಘ, ಸಮನ್ವಯ ಸಮಿತಿ, ವಾಯ್ಸ್ ಆಫ್ ಪೇರೆಂಟ್ಸ್ ಮೊದಲಾದ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ “ಆರೋಗ್ಯ ಬಿಕ್ಕಟ್ಟಿನ ನಂತರ ರಾಜ್ಯ ಎದುರಿಸಿದ ಬೃಹತ್ ಸಮಸ್ಯೆ ಎಂದರೆ ಶೈಕ್ಷಣಿಕ ಬಿಕ್ಕಟ್ಟು. ಸಾಲು ಸಾಲು ಲಾಕ್ ಡೌನ್ ನಿಂದಾಗಿ ಮಕ್ಕಳ ಪೋಷಕರು ಉದ್ಯೋಗ ಕಳೆದುಕೊಂಡಿದ್ದಾರೆ. ಆದಾಯ ಇಲ್ಲದೆ ಉಳಿತಾಯವೂ ಖರ್ಚಾಗಿದೆ. ಈ ಸಂಕಷ್ಟದ ಮಧ್ಯೆ ಇವರಿಗೆ ಮಕ್ಕಳ ಫೀಸ್ ಪಾವತಿಸಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.

ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಅವೈಜ್ಞಾನಿಕ ನಿರ್ಧಾರಗಳಿಂದ ಸಮಸ್ಯೆಗಳು ಬಿಗಡಾಯಿಸಿದೆ. ಇವರು ಎಲ್ಲ ಖಾಸಗಿ ಶಾಲೆಗಳಿಗೆ 30% ಶುಲ್ಕ ಇಳಿಸಲು ಆದೇಶಿಸಿದ್ದರು. ಆದರೆ ಹೇಗೆ ಇಳಿಸಬೇಕು ಎಂಬ ಸ್ಪಷ್ಟತೆ ನೀಡಲಿಲ್ಲ. ಶಾಲೆಗಳು ಹೈಕೋರ್ಟ್ ಮೊರೆ ಹೋಗಿದ್ದವು ಮತ್ತು ಹೈಕೋರ್ಟ್ 15% ಶುಲ್ಕ ಇಳಿಸಲು ಆದೇಶ ನೀಡಿದೆ.

“ಇದರಿಂದ ಏನೂ ಪ್ರಯೋಜನ ಇಲ್ಲ. ಪೋಷಕರು ಶುಲ್ಕದ ಉಳಿದ ಮೊತ್ತವನ್ನು ಭರಿಸಲು ಸರ್ಕಾರ ಹೇಗೆ ನೆರವಾಗುತ್ತದೆ ಎಂಬುದು ಪ್ರಶ್ನೆಯಾಗಿದೆ.

ಪ್ರತೀ ಮಗುವಿಗೆ 14 ವರ್ಷದ ತನಕ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ. ಆದರೆ ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಸೋತಿದೆ.

ಈ ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ವೀಕ್ಷಕ ರೋಮಿ ಭಾಟಿ ಅವರು “ಈ ಸಮಸ್ಯೆಗೆ ಇರುವ ಏಕೈಕ ಪರಿಹಾರ ಎಂದರೆ ದೆಹಲಿ ಮಾದರಿಯಂತೆ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಮಾಡುವುದು. ಸತತ ಭ್ರಷ್ಟ ಸರ್ಕಾರಗಳು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಕಾರಣ ರಾಜ್ಯದ ಶಿಕ್ಷಣ ವ್ಯವಸ್ಥೆ ಕುಲಗೆಟ್ಟು ಹೋಗಿದೆ. ಈ ಕಾರಣಕ್ಕೆ ಸರಕಾರಿ ಶಾಲೆಗಳ ಬಗ್ಗೆ ಪೋಷಕರೂ ನಿರಾಸಕ್ತಿ ತಾಳಿದ್ದಾರೆ” ಎಂದರು.

“ಸದ್ಯಕ್ಕೆ ಸರ್ಕಾರ ಶಾಲಾ ಶುಲ್ಕದ ಹೊರೆಯನ್ನು ಇಳಿಸುವ ಮುಖಾಂತರ ಪೋಷಕರ ಆರ್ಥಿಕ ಸಂಕಷ್ಟದಲ್ಲಿ ಅವರ ಕೈ ಹಿಡಿಯಬೇಕು. ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದು ಅಥವಾ ಶಿಕ್ಷಕರ ಸಂಬಳವನ್ನು ಸರ್ಕಾರವೇ ಭರಿಸುವ ಮುಖಾಂತರ ಪೋಷಕರ ಮೇಲಿನ ಶುಲ್ಕದ ಹೊರೆಯನ್ನು ಇಳಿಸಬಹುದು” ಎಂದು ಆಗ್ರಹಿಸಿದರು.

ಈ ಯೋಜನೆ 20-21 ಮತ್ತು 21-22 ರ ಶೈಕ್ಷಣಿಕ ವರ್ಷಗಳಿಗೂ ಜಾರಿ ಮಾಡಬೇಕು. ಎಲ್ಲ ಸ್ಟಾಕ್. ಹೋಲ್ಡರ್ ಗಳನ್ನು ಬಲಪಡಿಸಲು ಪರಿಣಾಮಕಾರಿಯಾದ ಶಾಲಾ ನಿರ್ವಹಣಾ ಸಮಿತಿಗಳನ್ನು ರಚಿಸಬೇಕು.

ಸರ್ಕಾರ ಪ್ರತೀ ವಾರ ವಿದ್ಯಾರ್ಥಿಗಳ ದಾಖಲಾತಿ ಮಾಹಿತಿಯನ್ನು ಪ್ರಕಟ ಮಾಡಬೇಕು.

ಆಮ್ ಆದ್ಮಿ ಪಾರ್ಟಿ ಕರ್ನಾಟಕ ಸರ್ಕಾರ ಸಮರ್ಪಕ ನಿರ್ಣಯವನ್ನು ತೆಗೆದುಕೊಳ್ಳುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲ. ಇದೇ ಬರುವ ಆದಿತ್ಯವಾರ ಫ್ರೀಡಂ ಪಾರ್ಕಿನಲ್ಲಿ “ಚಿಂತನ ಮಂಥನ” ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ಎಎಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್‌ ಸೆಹವಾನಿ, ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್‌ ದಾಸರಿ, ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ, ಪೋಷಕರ ಸಮನ್ವಯ ಸಮಿತಿಯ ಚಿದಾನಂದ್‌, ಎಎಪಿ ಮುಖಂಡರಾದ ಲಕ್ಷ್ಮೀಕಾಂತ ರಾವ್‌, ರಾಜಶೇಖರ್‌ ದೊಡ್ಡಣ್ಣ, ದರ್ಶನ್‌ ಜೈನ್, ಜಗದೀಶ್‌ ಚಂದ್ರ, ಉಷಾ ಮೋಹನ್‌, ಪ್ರಕಾಶ್‌ ನೆಡುಂಗಡಿ, ಬಿ.ಟಿ.ನಾಗಣ್ಣ, ಸುರೇಶ್‌ ರಾಥೋಡ್‌ ಹಾಗೂ ಅನೇಕ ಮುಖಂಡರು, ನೂರಾರು ಕಾರ್ಯಕರ್ತರು, ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!
LATEST
ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ವಿತರಣೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ ₹390 ಕೋಟಿ ಹೂಡಿಕೆಯ ಬ್ಯಾಟರಿ ಫ್ಯಾಕ್ಟರಿಗೆ ಶಂಕುಸ್ಥಾಪನೆ : ಸಚಿವ ಪಾಟೀಲ್‌ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು... KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ -ಕಿಚಡಿ ಮುದ್ದೆ, ಪೊಂಗಲ್‌ ರುಚಿಯ ಸವಿ ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬ... ಹೈಪರ್‌ಟೆನ್ಷನ್: ಭಾರತದ ಯುವಜನತೆಗೆ ಅಡಗಿದ ಅಪಾಯ: ಡಾ.ಸಾಯಿಶಂಕರ್ ಹುಬ್ಬಳ್ಳಿ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೆ ಸಿಎಂ ಒತ್ತಾಯಿಸಿ: ಸಚಿವರಿಗೆ ವಾಯವ್ಯ ವಲಯ ನೌಕರರ ಕೂಟ ಮನವಿ