NEWSನಮ್ಮರಾಜ್ಯರಾಜಕೀಯ

ಸುದ್ದಿ ಮಾಧ್ಯಮಗಳ ಮುಂದೆ ಬರುವ ಸಾರಿಗೆ ಕಾರ್ಮಿಕರೆಲ್ಲ ತರಲೆನನ್ನಮಕ್ಕಳೆ : NWKRTC ಹಾವೇರಿ ಡಿಸಿ ಜಗದೀಶ್‌ ನಾಯಕ್‌

ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಸುದ್ದಿ ಮಾಧ್ಯಮಗಳ ಮುಂದೆ ಬರುವ ಸಾರಿಗೆ ಕಾರ್ಮಿಕರೆಲ್ಲರೂ ತರಲೆನನ್ನಮಕ್ಕಳೇ ಎಂದು ಎನ್‌ಡಬ್ಲ್ಯುಕೆಆರ್‌ಟಿಸಿ ಹಾವೇರಿ ವಿಭಾಗದ ನಿಯಂತ್ರಣಾಧಿಕಾರಿ (ಡಿಸಿ) ಜಗದೀಶ್‌ ನಾಯಕ್‌ ನೌಕರರ ಬಗ್ಗೆ ಮತ್ತು ಮಾಧ್ಯಮಗಳ ಬಗ್ಗೆ ಬಹಳ ತುಚ್ಯವಾಗಿ ಹೇಳಿದ್ದಾರೆ.

ಅಂದರೆ ಮಾಧ್ಯಮಗಳು ಇರುವುದು ತರಲೆ ಮಾಡಿಕೊಂಡು ಬರುವಂತಹವರ ಸುದ್ದಿ ಮಾಡಲಿಕ್ಕಾ? ಈ ಅಧಿಕಾರಿ ಹೇಳುತ್ತಿರುವುದನ್ನು ನೋಡಿದರೆ, ಮಾಧ್ಯಮಗಳಲ್ಲಿ ಬರುವ ಸುದ್ದಿಗಳೆಲ್ಲ ಪ್ರಯೋಜನಕ್ಕೆ ಬಾರದು ಎಂಬಂತಿದೆ. ಇವರ ಅಕ್ರಮಗಳನ್ನು ಮುಚ್ಚಿಹಾಕಿ ಇವರ ಅನ್ಯಾಯದ ಪರವಾದ ಸುದ್ದಿಗಳು ಬಂದರೆ ಮಾಧ್ಯಮಗಳು ಮಾಡುವ ಸುದ್ದಿ ಇವರಿಗೆ ಸರಿಯಾಗಿರುತ್ತದೆ ಅಂಥ ಆಯಿತು.

ಅಂದರೆ, ನೌಕರರ ವಿರುದ್ಧ ಇವರು ನಡೆದುಕೊಳ್ಳುವುದೆಲ್ಲ ಕಾನೂನು ಪ್ರಕಾರವಾಗಿರುತ್ತದೆ. ಅದರೆ ನೌಕರರು ಡ್ಯೂಟಿ ಕೊಡಿ ಎಂದು ಕೇಳಿದರೆ ಅವರನ್ನು ಗಂಟೆಗಟ್ಟಲೇ ಡಿಪೋಗಳಲ್ಲೇ ನಿಲ್ಲಿಸಿಕೊಂಡು ಬಳಿಕ ಈ ದೀನ ಡ್ಯೂಟಿ ಇಲ್ಲ ಮನೆಗೆ ಹೋಗು ಎಂದು ಹೇಳಿ ಅವರ ಅಮೂಲ್ಯ ಸಮಯವನ್ನು ವ್ಯರ್ತಮಾಡಿರೂ ಈ ನೌಕರರು ಏನೂ ಮಾತನಾಡದೆ ವಾಪಸ್‌ ಮನೆಗೆ ಹೋಗಬೇಕು.

ಅಂಥ ನೌಕರರು ಇವರಿಗೆ ಒಳ್ಳೆಯವರಾಗಿ ಕಾಣುತ್ತಾರೆ. ಏಕೆ ನಮಗೆ ಡ್ಯೂಟಿಕೊಡುತ್ತಿಲ್ಲ ಎಂದು ಕೇಳಿದ ನೌಕರರು ಇವರಿಗೆ ತರಲೆನನ್ನಮಕ್ಕಳಂತೆ ಕಾಣುತ್ತಾರೆ. ಇದೇ ನಿಗಮಗಳಲ್ಲಿ ನಡೆಯುತ್ತಿರುವ ಕೆಲ ಅಧಿಕಾರಿಗಳ ಹಿಟ್ಲರ್‌ ದರ್ಬಾರ್‌.

ಹೌದು! ಇದೇ ಸೆಪ್ಟೆಂಬರ್‌ 24ರಂದು ವಿಜಯಪಥದಲ್ಲಿ ಸಂಚಾರಿ ನಿರೀಕ್ಷಕರಿಂದ ಹಲ್ಲೆಗೊಳಗಾದ ಚಾಲಕ ಕಂ. ನಿರ್ವಾಹಕನನ್ನೇ ಅಮಾನತು ಮಾಡಿದ ಹಾವೇರಿ ವಿಭಾಗದ ಸಾರಿಗೆ ಡಿಸಿ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು.

ಈ ವೇಳೆ ಇದೇ ಡಿಸಿ ಜಗದೀಶ್‌ ನಾಯಕ್‌ ಅವರು ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು. ಆದರೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಹಾನಗಲ್‌ ಘಟಕದ ಚಾಲಕ ಕಂ. ನಿರ್ವಾಹಕರೊಬ್ಬರಿಗೆ ಡ್ಯೂಟಿ ಕೊಡದೆ ಹಲ್ಲೆ ಮಾಡಿದ ಸಂಚಾರಿ ನಿರೀಕ್ಷರನ್ನು ವಿಚಾರಣೆ ಮಾಡುವ ಬದಲಿಗೆ ಚಾಲಕ ಕಂ. ನಿರ್ವಾಹಕರದೇ ತಪ್ಪು ಎಂದು ಅವರೊಬ್ಬರನ್ನೇ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಘಟನೆ ನಡೆದಿರುವುದು ಕಳೆದ ಆಗಸ್ಟ್‌ 4 ರಂದು. ಅಂದು ಘಟಕದ ಚಾಲಕ ಕಂ. ನಿರ್ವಾಹಕ ಎಸ್‌.ಎಂ.ಲಾಳಸೇರಿ ಅವರು ಡ್ಯೂಟಿಗೆ ಹಾಜರಾಗಿದ್ದಾರೆ. ಈ ವೇಳೆ ಅವರಿಗೆ ಡ್ಯೂಟಿ ಕೊಡಬೇಕಾದ ಸಂಚಾರಿ ನಿರೀಕ್ಷಕ ಎನ್‌.ಬಿ.ಚೌವ್ಹಾಣ್‌ ಅವರು ಕರ್ತವ್ಯಕ್ಕೆ ನಿಯೋಜಿಸದೆ ಅವಾಚ್ಯವಾಗಿ ಬೈದಿದ್ದಾರೆ. ಅಲ್ಲದೆ ದೈಹಿಕ ಹಲ್ಲೆಯನ್ನು ಮಾಡಿದ್ದು, ಮೂಗಿನ ಮೇಲೆ ಗುದಿದ್ದರಿಂದ ರಕ್ತ ಬಂದಿದ್ದು ತೀವ್ರ ನೋವಾಗಿದೆ. ಜತೆಗೆ ಎದೆಗೆ ಹೊಡೆದಿದ್ದರಿಂದ ಕೆಳಗೆ ಬಿದ್ದಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದಿದ್ದಾರೆ.

ಇದು ಅಲ್ಲದೆ ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಎಸ್‌.ಎಂ.ಲಾಳಸೇರಿ ದೂರು ನೀಡಿದ್ದಾರೆ. ಆ ವೇಳೆ ನೀವು ಇಬ್ಬರು ಒಂದೇ ನಿಗಮದ ನೌಕರರು ಹೀಗಾಗಿ ಗಲಾಟೆ ಮಾಡಿಕೊಂಡು ಮುಂದಕ್ಕೆ ಹೋಗುವುದು ಬೇಡ ಎಂದು ಇದೇ ನಿಗಮದ ಹಿರಿಯ ಅಧಿಕಾರಿಗಳು ಇಬ್ಬರಿಗೂ ತಿಳಿ ಹೇಳಿ ಪ್ರಕರಣವನ್ನು ಕೊನೆ ಮಾಡುವುದಾಗಿ ಹೇಳಿದ್ದರು. ಜತೆಗೆ ಪೊಲೀಸ್‌ ಠಾಣೆಯಲ್ಲೂ ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಸಂಚಾರಿ ನಿರೀಕ್ಷಕ ಎನ್‌.ಬಿ.ಚೌವ್ಹಾಣ್‌ ಹೇಳಿಕೆ ನೀಡಿದ್ದರು.

ಈ ಎಲ್ಲ ಬೆಳವಣಿಗೆ ಆದ ಬಳಿಕ ಅಂದರೆ ಆಗಸ್ಟ್‌ 26ರಂದು ಚಾಲಕ ಕಂ. ನಿರ್ವಾಹಕ ಎಸ್‌.ಎಂ.ಲಾಳಸೇರಿ ಅವರನ್ನು ಡಿಸಿ ಅಮಾತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನು ಗಮನಿಸಿದರೆ ಇಲ್ಲಿ ಹಲ್ಲೆಗೆ ಒಳಗಾಗಿರುವ ನೌಕರರ ರಕ್ಷಣೆಗೆ ಬರಬೇಕಾದ ಡಿಸಿ ಜಗದೀಶ್‌ ನಾಯಕ್‌ ಅವರು ಹಲ್ಲೆ ಮಾಡಿದವರಿಗೇ ಬೆಂಬಲವಾಗಿ ನಿಂತಿದ್ದಾರೆ. ಅಲ್ಲದೇ ಈ ಬಗ್ಗೆ ವಿಜಯಪಥ ವರದಿಗಾರರು ಫೋನ್‌ ಕರೆ ಮಾಡಿ ಮಾತನಾಡಿಸಿದರೆ ಆ ವೇಳೆ ನಿಮ್ಮ ಬಳಿಗೆ (ಮಾಧ್ಯಮಗಳ ಮುಂದೆ) ಬರುವವರು ತರಲೆನನ್ನಮಕ್ಕಳು ಅವರ ಮಾತನ್ನು ನೀವು ಕೇಳುತ್ತೀರಲ್ಲ ಎಂದು ನಮಗೆ ಬುದ್ಧಿ ಹೇಳಲು ಬರುತ್ತಾರೆ.

ಇನ್ನು ಸಂಚಾರಿ ನಿರೀಕ್ಷಕ ಎನ್‌.ಬಿ.ಚೌವ್ಹಾಣ್‌ ಅವರ ವಿರುದ್ಧ ಏಕೆ ವಿಚಾರಣೆ ನಡೆಸಿಲ್ಲ ಎಂದರೆ ಅವರು ಕಾರ್ಮಿಕರಿಗಿಂತ ಮೇಲಿನ ಅಧಿಕಾರಿ ಹೀಗಾಗಿ ಅವರ ವಿಚಾರಣೆ ಇನ್ನು ನಡೆಸಿಲ್ಲ. ಮೊದಲು ಕೆಳಹಂತದ ಕಾರ್ಮಿಕರನ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳುತ್ತಾರೆ. ಅಲ್ಲ ಸಾರ್‌ ನೀವು ಪ್ರಕರಣದ ಇಬ್ಬರೂ ಆರೋಪಿಗಳ ವಿಚಾರಣೆಯನ್ನು ಏಕಕಾಲಕ್ಕೆ ನಡೆಸಬೇಕಲ್ಲವೇ ಎಂದು ಕೇಳಿದರೆ.

ಇಲ್ಲ ನಾವು ಕಾರ್ಮಿಕರ ವಿರುದ್ಧವೇ ಮೊದಲು ಕ್ರಮ ಜರುಗಿಸುವುದು ಎಂದು ಹೇಳುತ್ತಾರೆ. ಅಂದರೆ ಇಲ್ಲಿ ಕಾರ್ಮಿಕರಿಗೊಂದು ಕಾನೂನು ಅಧಿಕಾರಿಗಳಿಗೊಂದು ಕಾನೂನು ಇದೆ ಎಂದಾಯಿತು. ಅಧಿಕಾರಿ ಕಾರ್ಮಿಕರ ಮೇಲೆ ಹಲ್ಲೆ ಮಾಡಲು ಇಲ್ಲಿ ಅವಕಾಶವಿದೆ. ಅದೇ ನೌಕರರ ಅಧಿಕಾರಿ ಮಾಡುತ್ತಿರುವ ತಪ್ಪನ್ನು ತೋರಿಸಿದರೆ ಆತನಿಗೆ ಅಮಾನತು, ವಜಾದಂಥ ಶಿಕ್ಷೆ…

ಇಂಥ ಕೆಲ ಅಧಿಕಾರಿಗಳ ನಡುವೆ ನಿಗಮಗಳಲ್ಲಿ ಅದು ಹೇಗೆ ನೌಕರರು ಉಸಿರು ಬಿಗಿಹಿಡಿದುಕೊಂಡು ಕೆಲಸಮಾಡುತ್ತಿದ್ದಾರೋ ಆ ದೇವರಿಗೇ ಗೊತ್ತು. ನಿಗಮಗಳಲ್ಲಿ ಈ ರೀತಿ ದೌರ್ಜನ್ಯ ನಡೆಸುವ ಇಂಥ ಕೆಲ ಅಧಿಕಾರಿಗಳ ದಬ್ಬಾಳಿಕೆ ಯಾವಾಗ ನಿಲ್ಲುವುದೋ… ಇದಕ್ಕೆ ಕಡಿವಾಣ ಹಾಕುವಂತ ಸಚಿವರು ಮತ್ತು ಅಧಿಕಾರಿಗಳು ಯಾವಾಗ ಬರುತ್ತಾರೋ …

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ