ಬೆಂಗಳೂರು: ಬಿಎಂಟಿಸಿಯ ಭದ್ರತಾ ಮತ್ತು ಜಾಗ್ರತಾ ವಿಭಾಗದ (S&V) ನಿರ್ದೇಶಕರಾಗಿದ್ದ ಡಾ. ಅರುಣ್ ಕೆ. ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಡಾ. ಅರುಣ್ ಕೆ. ಅವರನ್ನು ಹೊಸ ಜಿಲ್ಲೆಯಾಗಿರುವ ವಿಜಯನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಅದೇಶ ಹೊರಡಿಸಿದೆ.
ಮುಷ್ಕರದ ಸಮಯಲ್ಲಿ ಬಿಎಂಟಿಸಿಯ ನೌಕರರನ್ನು ಮನಸೋಯಿಚ್ಚೆ ವಜಾ, ಅಮಾನತು ಮಾಡುವ ಮೂಲಕ ಐಪಿಎಸ್ ಅಧಿಕಾರಿ ಡಾ.ಅರುಣ್ ಅವರು ನೌಕರರ ಕೆಂಗಣ್ಣಿಗೆ ಗುರಿಯಾಗಿದ್ದರು. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ, ರಜೆ ಮೇಲೆ ತೆರಳಿದ್ದ ನೂರಾರು ನೌಕರರನ್ನು ವಜಾ ಅಮಾನತು ಮಾಡುವ ಮೂಲಕ ಒಂದು ರೀತಿ ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದರು ಎಂಬ ಆರೋಪವು ಈ ಅಧಿಕಾರಿಯ ವಿರುದ್ಧ ಕೇಳಿ ಬಂದಿತ್ತು.
ಇನ್ನು ಪ್ರಮುಖವಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಒಂದು ಕಡೆ ಮುಷ್ಕರದ ಸಮಯದಲ್ಲಿ ನೌಕರರ ವಿರುದ್ಧ ತೆಗೆದುಕೊಂಡಿರುವ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುತ್ತೇವೆ ಎಂದು ಭರವಸೆ ನೀಡುತ್ತಿದ್ದರೆ. ಇತ್ತ ಬಿಎಂಟಿಸಿಯಲ್ಲಿ ಅಮಾನತುಗೊಂಡಿದ್ದ 57 ನೌಕರರನ್ನು ಏಕಾಏಕಿ ಇದೇ ಸೆ.27 ರಂದು ವಜಾ ಮಾಡಿ ಆದೇಶ ಹೊರಡಿಸುವ ಮೂಲಕ ಸರ್ಕಾರ ಮತ್ತು ಸಚಿವರು ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದರು.
ಅರುಣ್ ಅವರ ಈ ನಡೆಯಿಂದ ಸರ್ಕಾರ ಮಾಧ್ಯಮಗಳ ಮುಂದೆ ಮುಜುಗರಕ್ಕೆ ಸಿಲುಕಿಕೊಂಡಿತ್ತು. ಸಿಎಂ ಮತ್ತು ಸಚಿವರ ಆದೇಶಕ್ಕೂ ಕಿಮ್ಮತ್ತಿಲ್ಲದಂತಾಗಿದೆ ಎಂದು ಬಹುತೇಕ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಈ ಎಲ್ಲ ಬೆಳವಣಿಗೆಯ ನಡುವೆ ಇಂದು ಡಾ. ಅರುಣ್ ಕೆ. ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಉತ್ತಮ ಬೆಳವಣಿಗೆ ಘನ ರಾಜ್ಯ ಸಚಿವರು ಪಕ್ಷತೀತವಾಗಿ ಯಾವುದೇ ಪ್ರಭಾವಕ್ಕೊಳಗಾಗದೇ ಈ ತರಹ ನ್ಯಾಯಯುತ ನಿರ್ಧಾರ ತೆಗೆದುಕೊಂಡರೆ ಸರ್ಕಾರಕ್ಕೂ ಹಾಗೂ ಈ ಸಮಾಜಕ್ಕೆ ಉತ್ತಮ ಬೆಳವಣಿಗೆಯೆಂದು ಭಾವಿಸಬೇಕು