ಬೆಂಗಳೂರು: ಕನ್ನಡಕ್ಕೆ, ಕನ್ನಡಿಗರಿಗೆ ಅಗ್ರಸ್ಥಾನ ಸಿಗಬೇಕುಎನ್ನುವುದೇ ನನ್ನ ಕನಸು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕಮಾಧ್ಯಮ ಅಕಾಡೆಮಿ 40 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಲಾಂಛನ ಬಿಡುಗಡೆಮಾಡಿ, ‘ಕ್ಲಬ್ ಹೌಸ್’ ಉದ್ಘಾ ಟಿಸಿ ಮಾತನಾಡಿದರು.
ಕರ್ನಾಟಕ ಸಂಪದ್ಭರಿತ, ಸುರಕ್ಷಿತ, ವಿಫುಲ ಅವಕಾಶ ಇರುವ ಸುಂದರ ನಾಡು. ಈ ನಾಡು ಎಲ್ಲರನ್ನೂ ಆಕರ್ಷಿಸುವ ಸುಂದರ ಬೀಡಾಗಬೇಕು ಎಂದು ಹೇಳಿದರು.
ಇನ್ನು ದೀರ್ಘಾವಧಿ ಬದಲು ಅಲ್ಪಾವಧಿ ಫಲಿತಾಂಶದ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇ ನೆ. ರಾಜ್ಯ ದಲ್ಲಿರುವ 10 ಕೃಷಿ- ಹವಾಮಾನ ವಲಯಗಳಲ್ಲಿ ವೈಜ್ಞಾ ನಿಕವಾಗಿ ಬೆಳೆಗಳನ್ನು ಬೆಳೆದು, ಅವುಗಳ ಸಂಸ್ಕರಣೆ, ಮೌಲ್ಯ ವರ್ಧನೆಯಮೂಲಕ ರೈತರ ಆದಾಯ ಹೆಚ್ಚಿಸಲು ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಜತೆಗೆ ಲಭ್ಯ ವಿರುವ ಜಲ ಸಂಪನ್ಮೂಲದ ಸದ್ಬಳಕೆ ಮೂಲಕ ನೀರಾವರಿ ಸಾಮರ್ಥ್ಯವನ್ನು ಸಹ ಹೆಚ್ಚಿ ಸಲಾಗುವುದು. ಆರೋಗ್ಯ ಸೇವೆಗಳ ಸುಧಾರಣೆಗೆ, ವಿಶೇಷವಾಗಿ ತಾಲೂಕು ಆಸ್ಪತ್ರೆಗಳ ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಮಾಧ್ಯಮ ಅಕಾಡೆಮಿ ಅಧ್ಯ ಕ್ಷ ಸದಾಶಿವ ಶೆಣೈ ಪ್ರಾಸ್ತಾವಿಕವಾಗಿಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಜಿ. ಜಗದೀಶ್, ಅಕಾಡೆಮಿಯ ಸದಸ್ಯರು, ಕಾರ್ಯದರ್ಶಿ ಸಿ.ರೂಪಾ ಇತರರು ಇದ್ದರು.