CrimeNEWSನಮ್ಮರಾಜ್ಯ

ಮಂಗಳೂರು ಕೆಎಸ್ಆರ್ಟಿಸಿ ಡಿಸಿ ಅರುಣ್ ಕುಮಾರ್‌ನಿಂದ ಇನ್ನೆಷ್ಟು ನೌಕರರ ಪ್ರಾಣ ಪಕ್ಷಿ ಹಾರಿಹೋಗುವುದೋ….!?

ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ಮಂಗಳೂರು ಕೆಎಸ್ಆರ್ಟಿಸಿ ವಿಭಾಗದ ನಿಯಂತ್ರಣದಿಕಾರಿ (DC)ಅರುಣ್ ಕುಮಾರ್‌ ಅವರ ವರ್ತನೆ ಮಿತಿಮೀರಿ ಹೋಗಿದೆ. ಅವರ ಕಿರುಕುಳದಿಂದ ಮನನೊಂದ ಕಾರ್ಮಿಕರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನು ಕೆಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ.

ಇಷ್ಟಾದರೂ ಅವರು ತಮ್ಮ ಹಳೇ ಚಾಳಿಯನ್ನು ಬಿಡದೆ ನೌಕರರಿಗೆ ಕಿರುಕುಳ ನೀಡುತ್ತಿದ್ದು, ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ನೌಕರರನ್ನು ಕಾಡುತ್ತಿದ್ದಾರೆ.

ಹೀಗಾಗಿ ಈ ಡಿಸಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ನೌಕರರು ಮನವಿ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಚಾಲಕ ಕಂ ನಿರ್ವಾಕರೊಬ್ಬರು ಇವರು ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು, ಇನ್ನು ಮಹಿಳಾ ಸಿಬ್ಬಂದಿಯೊಬ್ಬರು ಮಾನಸಿಕವಾಗಿ ಒತ್ತಡೆಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇಷ್ಟಾದರೂ ಇವರನ್ನು ಬೇರೆಡೆಗೆ ವರ್ಗಾವಣೆ ಅಥವಾ ಅಮಾನತು ಮಾಡದೆ ನಿಗಮದ ಎಂಡಿಗಳು ಕಂಡು ಕಾಣದಂತೆ ವರ್ತಿಸುತ್ತಿರುವುದು ಏತಕ್ಕೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ.

ದಯಮಾಡಿ ಇಂಥ ಡಿಸಿ ನಮಗೆ ಬೇಡ ಇವರನ್ನು ಯರವಲು ಸೇವೆ ಮೇಲೆ ಬೇರೆ ಇಲಾಖೆಗೆ ವರ್ಗಾವಣೆ ಮಾಡಿಬಿಡಿ, ಇದರಿಂದ ನಮ್ಮ ಇನ್ನಷ್ಟು ನೌಕರರ ಪ್ರಾಣವಾದರೂ ಉಳಿಯಬಹುದು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅರುಣ್ ಕುಮಾರ್ ವಿರುದ್ಧ ಉರ್ವಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಆದ್ರೂ ಸಹ. ಮಾಧ್ಯಮಗಳಲ್ಲಿ ಇವರ ನಡತೆ ಬಗ್ಗೆ ಆಡಿಯೋ ಸಹಿತ ಆರೋಪ ಬಂದರೂ  ಸಹ. ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಲಿಕ್ಕೆ ಆಗದೆ. ಸಚಿವರು ಅತಾಸರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಈ ರೀತಿ ಒಬ್ಬ ನಿಯಂತ್ರಣಾಧಿಕಾರಿ ಶೋಷಣೆ ಮಾಡುತ್ತ ಹೋದರೆ ಇನ್ನು ಎಷ್ಟು ನೌಕರರು ಆತ್ಮಹತ್ಯೆಗೆ ಗುರಿಯಾಗುತ್ತರೋ ಗೊತ್ತಿಲ್ಲ.

ಅರುಣ್ ಕುಮಾರ್ ಒಬ್ಬ ಲಂಚ ಲೂಟಿ ಕೋರ ದಬ್ಬಾಳಿಕೆ, ಅವಾಚ್ಯ ಪದಗಳಿಂದ ನೌಕರರನ್ನು ನಿಂದಿಸುವ ವ್ಯಕ್ತಿ. ಈ ವ್ಯಕ್ತಿಯನ್ನು ಸಾರಿಗೆ ಇಲಾಖೆಯಲ್ಲಿ ಮುಂದುವರಿಸಿದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲಸಮಾಡಬೇಕಿರುವ ಚಾಲನಾ ಸಿಬ್ಬಂದಿಗಳು ಒತ್ತಡಕ್ಕೆ ಒಳಗಾಗಿ ಏನು ಅನಾಹುತವಾಗುತ್ತದೋ ಗೊತ್ತಿಲ್ಲ. ಆದ್ದರಿಂದ ಈತನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ನಮಗೇ ಈತನಿಂದ ಮುಕ್ತಿಸಿಗುವಂತೆ ಮಾಡಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.

ಡಿಸಿ ವಿರುದ್ಧ ಬಹುತೇಕ ಎಲ್ಲ ಆರೋಪಗಳಲ್ಲೂ ಸಾಕ್ಷಿ ಇದ್ದರೂ ಸಹ  ಯಾವುದೇ ಕ್ರಮ ತೆಗೆದುಕೊಳ್ಳದೆ ದುಡಿಯುವ ಕಾರ್ಮಿಕರ ಜೀವನದಲ್ಲಿ ಆಟ ಆಡುವುದು ಎಷ್ಟರಮಟ್ಟಿಗೆ ಸರಿ. ಇಂತಹ ಲಜ್ಜೆಗೆಟ್ಟ ಅಧಿಕಾರಿ ಮಂಗಳೂರು ವಿಭಾಗದಲ್ಲಿ ಇರುವುದು ಸರಿಯಲ್ಲ. ಇಂಥವರಿಂದ ನಮ್ಮ ಸರ್ಕಾರಕ್ಕೂ ಕೆಟ್ಟ ಹೆಸರು.

ಆದ್ದರಿಂದ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರಿಗೆ ಸಾರ್ವಜನಿಕರ ಹಿತದೃಷ್ಟಿಯಿಂದಲೂ ನಾವು ಬೇಡಿ ಕೊಳ್ಳುವುದೆಂದರೆ ಆದಷ್ಟು ಬೇಗ ಯಾರ ಮಾತನ್ನು ಕೇಳದೆ, ಯಾರ ಒತ್ತಡಕ್ಕೂ ಮಣಿಯದೆ ಅರುಣ್ ಕುಮಾರ್ ಅವರನ್ನು ಆದಷ್ಟು ಬೇಗ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕಾಗಿ ಬೇಡಿಕೊಳ್ಳುತ್ತಿದ್ದೇವೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಕಾಪು ಶಾಸಕರಾದ ಲಾಲಾಜಿ ಮೆಂಡನ್, ಸುನಿಲ್ ಕುಮಾರ್ ಕಾರ್ಕಳ, ಶ್ರೀನಿವಾಸ್ ಪೂಜಾರಿ, ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟರು, ಬೈಂದೂರು ಶಾಸಕ ಸುಕುಮಾರ್ ಶೆಟ್ರು ಇವರೆಲ್ಲರಲ್ಲಿ ನಮ್ಮ ಮನವಿ ಇಂತಿ ನಿಮ್ಮ ವಿಶ್ವಾಸಿಗಳು ಕೆಎಸ್‌ಆರ್ಟಿಸಿ ನೌಕರರು ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆ.

Leave a Reply

error: Content is protected !!
LATEST
ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ