ಹಾವೇರಿ: ಸಿದ್ದರಾಮಯ್ಯ ನೀನು ಕಾಂಗ್ರೆಸ್ನಲ್ಲಿ ಇರೋವರ್ಗೂ ನಿನಗಂತೂ ಅಚ್ಛೇದಿನ್ ಬರಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಂಧಗಿ ಉಪಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ತಕ್ಷ ಡಿ.ಕೆ.ಶಿವಕುಮಾರ್ ಸುಮ್ಮನೆ ಕುಳಿತಿರ್ತಾನೆ ಅಂತಾ ಅನ್ಕೊಂಡಿದ್ದೀಯಾ. ನಿನಗೆ ಅಚ್ಛೇದಿನ್ ಬರೋಕೆ ಡಿಕೆಶಿ ಬಿಡಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಪಿಸುಮಾತು ಪ್ರಾರಂಭವಾಗಿರೋದೇಕೆ ಗೊತ್ತಾ? ಮೊನ್ನೆ ಸೋನಿಯಾ ಗಾಂಧಿಯವರು ಸಿದ್ದರಾಮಯ್ಯ ಅವರನ್ನು ಕರೆದು ನೀವು ಕರ್ನಾಟಕಕ್ಕೆ ಬೇಡ ದೆಹಲಿಗೆ, ರಾಷ್ಟ್ರರಾಜಕಾರಣಕ್ಕೆ ಬನ್ನಿ ಅಂತಾ ಕಿವಿ ಮಾತು ಹೇಳಿದ್ದಾರೆ.
ಆ ಕಿವಿ ಮಾತು ಹೇಳಿದ್ದಕ್ಕೆ ಇಲ್ಲಿ ಬಂದು ಪಿಸುಮಾತು ಆರಂಭಿಸಿದ್ದಾರೆ. ಅಂದ್ರೆ ನನ್ನನ್ನು ದೆಹಲಿಗೆ ಕಳಿಸ್ತಾರೆ ಅಂತಾ ಗೊತ್ತಾಗಿ ಇಲ್ಲಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳೋದಕ್ಕೆ ಚದುರಂಗದ ಆಟ ಆರಂಭಮಾಡಿದ್ದಾರೆ ಎಂದು ಕಾಲೆಳೆದರು.
ಇನ್ನು ಇದು ಕೊನೆಯಾಗೋದಿಲ್ಲ. ಕಾಂಗ್ರೆಸ್ ಅನ್ನು ಮುಗಿಸೋದಕ್ಕೆ ಯಾರೂ ಬೇಕಾಗಿಲ್ಲ ಕಾಂಗ್ರೆಸ್ ನಾಯಕರೇ ಸಾಕು ಮತ್ತ್ಯಾರೂ ಬೇಕಾಗಿಲ್ಲ. ನಾವು ರಾಜಕಾರಣದಲ್ಲಿ 30 ವರ್ಷ ಜನರ ವಿಶ್ವಾಸ ಗಳಿಸಿ ಇಲ್ಲಿಗೆ ಬಂದು ನಿಂತಿದ್ದೇವೆ. ಸುಳ್ಳು ಹೇಳಿ ಬಂದಿಲ್ಲ ಎಂದು ತಿರುಗೇಟು ನೀಡಿದರು.
ನಾವು ಮತ್ತೆ ನಿಮ್ಮ ಮನೆಯ ಬಾಗಿಲಿಗೆ ಬರ್ಬೇಕು. ನಾವು ಸುಳ್ಳು ಹೇಳಲ್ಲ. ನಾವು ನಿಮ್ಮೋರು. ನಾವು ನಿಮ್ಮ ಜೊತೆಗೆ ಇರೋರು. ನಿಮ್ಮ ಜೊತೆ ಬದುಕಿ ಬಾಳೋರು. ಸಿದ್ದರಾಮಯ್ಯನಂತೆ ನಾವು ಕುಂಡಲಿಯಲ್ಲಿರುವ ಗಿಡವಲ್ಲ. ನಾವು ಹೆಮ್ಮರ ಅಂತಾ ಬೊಮ್ಮಾಯಿ ಹೇಳಿದರು.