ನ್ಯೂಡೆಲ್ಲಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಅವರಿಗೆ ಡೆಂಘೆ ದೃಢಪಟ್ಟಿದೆ.
ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಬುಧವಾರ ಮನ್ಮೋಹನ್ ಸಿಂಗ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಿವ್ರ ಸುಸ್ತು ಹಾಗೂ ಜ್ವರದಿಂದ ಬಳಲುತ್ತಿದ್ದ ಮನ್ಮೋಹನ್ ಸಿಂಗ್ ಅವರಿಗೆ ಪ್ಲೇಟ್ಲೇಟ್ ಪ್ರಮಾಣ ಕಡಿಮೆಯಾಗಿತ್ತು. ಸದ್ಯ ಸೂಕ್ತ ಚಿಕಿತ್ಸೆ ನಡೆಸಲಾಗತ್ತಿದ್ದು ಪ್ಲೇಟ್ಲೇಟ್ಸ್ ಪ್ರಮಾಣ ಹೆಚ್ಚಾಗತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಡಾ. ನಿತೀಶ್ ನಾಯ್ಕ್ ನೇತೃತ್ವದ ಹೃದ್ರೋಗ ತಜ್ಞರ ತಂಡ ಮಾಜಿ ಪ್ರಧಾನಿಯ ಆರೋಗ್ಯದ ಬಗ್ಗೆ ನಿಗ ವಹಿಸಿದ್ದು, ಸದ್ಯ ಆರೊಗ್ಯದಲ್ಲಿ ಚೇತರಿಕೆ ಕಂಡುಬರ್ತಿದೆ ಎಂದು ಹೇಳಿದ್ದಾರೆ.