NEWSನಮ್ಮರಾಜ್ಯರಾಜಕೀಯ

ಜೀವನ ನಡೆಸಲು ಕಿಡ್ನಿ ಮಾರಾಟಕ್ಕೆ ಮುಂದಾದ ಸಾರಿಗೆ ನೌಕರ : ಸಮಸ್ಯೆ ಆಲಿಸದ ಸರ್ಕಾರ, ಐಸಿಯುನಲ್ಲಿ ವಿಪಕ್ಷಗಳ ನಾಯಕರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪ್ರಕಾಶ ಬ ಬಾಗೇವಾಡಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕ, ಬಿಲ್ಲೆ ಸಂಖ್ಯೆ: 7881/24843 ನನ್ನ ಕಿಡ್ನಿ ಮಾರಾಟಕ್ಕೆ ಇದೆ ಬ್ಲಡ್ ಗ್ರೂಪ್ B+ ನೆಗೆಟಿವ್. ಕಿಡ್ನಿ ಅವಶ್ಯವಿರುವವರು ನನ್ನ  ಮೊ.ನಂ: 9901737335 / 9901737335ಕ್ಕೆ ಸಂಪರ್ಕಿಸಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಹೌದು! ಸಾರಿಗೆ ನೌಕರರು ಕಳೆದ 6-7 ತಿಂಗಳುಗಳಿಂದ ಪರಿಪರಿಯಾಗಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೊಂಡರು ಸಾರಿಗೆ ನಿಗಮಗಳ ಅಧಿಕಾರಿಗಳು, ಸಚಿವರು ಮತ್ತು ಸರ್ಕಾರ ಸ್ಪಂದಿಸುವ ಬದಲಿಗೆ ಶಿಕ್ಷೆ ನೀಡಿ ಕ್ರೌರ್ಯ ಮೆರೆಯುತ್ತಿದ್ದು, ಈ ಕ್ರೌರ್ಯವನ್ನು ಖಂಡಿಸಿ ನ್ಯಾಯ ದೊರಕಿಸಿಕೊಡಬೇಕಾದ ವಿಪಕ್ಷಗಳು ಏನು ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿವೆ.

ಇನ್ನು ಇತ್ತ ನೋಡಿದರೆ, ಆಡಳಿತ ಪಕ್ಷಕ್ಕಿಂತ ವಿಪಕ್ಷಗಳು ಹೆಚ್ಚು ಆಕ್ಟಿವ್‌ ಆಗಿ ನೌಕರರ ಸಮಸ್ಯೆಗೆ ಸ್ಪಂದಿಸಬೇಕಿತ್ತು. ಆದರೆ, ಇಲ್ಲಿ ವಿಪಕ್ಷಗಳ ನಾಯಕರು ಐಸಿಯುನಲ್ಲಿರುವ ರೋಗಿಗಳಾಗಿದ್ದಾರೆ. ನೌಕರರ ಯಾವುದೇ ಸಮಸ್ಯೆಗೂ ಸ್ಪಂದಿಸದ ಸ್ಥಿತಿಗೆ ತಲುಪಿದ್ದಾರೆ.

ಇನ್ನು ಸರ್ಕಾರ ಕೇಳಬೇಕೆ. ವಿಕ್ಷಗಳೇ ನಮ್ಮನ್ನು ಪ್ರಶ್ನಿಸುತ್ತಿಲ್ಲ ಎಂದಾದರೆ ನಾವು ಮಾಡುತ್ತಿರುವುದೆಲ್ಲವೂ ಸರಿಯಿದೆ ಎಂಬಂತೆ ನೌಕರರನ್ನು, ಇನ್ನಿಲ್ಲದಂತೆ  ಕಾಡುತ್ತಿದೆ. ಜತೆಗೆ ಸಾರಿಗೆ ಸಚಿವ ಶ್ರೀರಾಮುಲು ಅವರು ಕೊಟ್ಟು ಮಾತನಂತೆ ನಡೆದುಕೊಳ್ಳದೆ ನೌಕರರಿಗೆ ಕೊಟ್ಟ ಮಾತನ್ನು ತಪ್ಪುತಿರುವುದರಿಂದ ಈಗ ಮತ್ತೆ ನೌಕರರು ಸಮಸ್ಯೆಗೆ ಸಿಲುಕುತ್ತಿದ್ದಾರೆ.

ಸಮಸ್ಯೆಯನ್ನು ಬಗೆಹರಿಸಬೇಕಾದ ಸಚಿವರು ಅಧಿಕಾರಿಗಳು ಹೇಳಿದಂತೆ ಕೇಳುವ ಮನಸ್ಥಿತಿಗೆ ತಲುಪಿದ್ದು, ಈ ಇಲಾಖೆಯಿಂದ ನಾವು ಕೂಡ ಎಲ್ಲಿ ಐಸಿಯು ಸೇರಬೇಕಾಗುತ್ತದೋ ಏನೋ ಎಂದು ನೌಕರರ ನ್ಯಾಯಯುತ ಬೇಡಿಕೆಗಳತ್ತ ಗಮನಕೊಡದೆ ಸುಮ್ಮಾನಾಗಿ ಮೂಲೆ ಸೇರಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ನೌಕರರ ದುಡಿಯುವ ಕೈಯನ್ನೇ ಕಟ್ಟಿಹಾಕಿರುವ ಅಧಿಕಾರಿಗಳು: ಇನ್ನು ಸಚಿವರ ಈ ನಡೆಯಿಂದ ಆರ್ಥಿಕವಾಗಿ ತುಂಬಾ ಬಳಲುತ್ತಿರುವ ಸಾರಿಗೆ ನೌಕರರು ವಿಧಿ ಇಲ್ಲದೆ ತಮ್ಮ ಅಂಗಾಂಗಗಳ ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ದುಡಿದು ತಿನ್ನುವ ಶಕ್ತಿ, ಮನಸ್ಸು ಇದ್ದರೂ ಕೆಲ ಅಧಿಕಾರಿಗಳು ನೌಕರರ ದುಡಿಯುವ ಕೈಯನ್ನೇ ಕಟ್ಟಿಹಾಕಿರುವುದರಿಂದ ಇಂದು ಸಾರಿಗೆ ನಿಗಮಗಳಲ್ಲಿ ಸಮಸ್ಯೆ ಮೇಲೆ ಸಮಸ್ಯೆ ಹೆಚ್ಚಾಗುತ್ತಲೇ ಇದೆ.

ಇನ್ನು ತಿಂಗಳೆಲ್ಲಾ ದುಡಿದರೂ ಕೈ ಸೇರುತ್ತಿರುವ ಅರ್ಧಂಬರ್ದ ವೇತನದಿಂದ ಕುಟುಂಬ ನಿರ್ವಾಹಣೆ ಮಾಡಲು ಸಾಧ್ಯವಾಗದೆ ಪರಿತಪ್ಪಿಸುತ್ತಿದ್ದಾರೆ. ಮತ್ತೊಂದೆಡೆ ಘಟಕಗಳಲ್ಲಿ ಕೆಲ ಮೇಲಧಿಕಾರಿಗಳ ಕಿರುಕುಳಕ್ಕೆ ಅಕ್ಷರಶಃ ನಲುಗಿ ಹೋಗುತ್ತಿದ್ದಾರೆ.

ತಾವು ಮಾಡದ ತಪ್ಪಿಗೆ ವಿವಿಧ ಶಿಕ್ಷೆಗೆ ಗುರಿಯಾಗಿರುವ ಇನ್ನೂ ಗುರಿಯಾಗುತ್ತಿರುವ ನೌಕರರು ಬದುಕಲು ದಾರಿ ಕಾಣದೆ ಪರಿತಪ್ಪಿಸುತ್ತಿದ್ದಾರೆ. ಅದಕ್ಕೆ ಪ್ರತ್ಯಕ್ಷ ನಿದರ್ಶನ ಎಂಬಂತೆ ತನ್ನ ಕುಟುಂಬದ ನೆಮ್ಮದಿ-ಸಂತೋಷ ಕಿತ್ತುಕೊಂಡ ಘಟಕಾಧಿಕಾರಿಯೊಬ್ಬನ ಕಿರುಕುಳದಿಂದ ಬೇಸತ್ತ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ  ನೌಕರನೊಬ್ಬ ಅರ್ಧ ಸಂಬಳದಿಂದ ಜೀವನ ನಡೆಸಲು ಸಾಲುತ್ತಿಲ್ಲ.. ಹೀಗಾಗಿ ಕಿಡ್ನಿ ಮಾರುತ್ತಿದ್ದೇನೆ…. ಆಸಕ್ತರಿದ್ದರೆ ಸಂಪರ್ಕಿಸಿ ಎಂದು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾನೆ.

ಜೀವನ ನಡೆಸಲು ಕಿಡ್ನಿ ಮಾರುತ್ತಿದ್ದೇನೆ:  ಪ್ರಕಾಶ್ ಬಿ. ಬಾಗೇವಾಡಿ ಎನ್ನುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದಲ್ಲಿ ಕೆಲಸ ಮಾಡುತ್ತಿರುವ ಚಾಲಕನೇ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಜೀವನ ನಡೆಸಲು ಕಿಡ್ನಿ ಮಾರುತ್ತಿದ್ದೇನೆ ಸಹಕರಿಸಿ ಎಂದು ತನ್ನ ಮೊಬೈಲ್ ನಂ: 9901737335 / 9901737335 ಗಳನ್ನು ಹಾಕಿ ತನ್ನ ಸಮಸ್ಯೆಯನ್ನು ಈ ಮೂಲಕ ತೋಡಿಕೊಂಡಿದ್ದಾನೆ.

ಸಾರಿಗೆ ನೌಕರರ ಜೀವನವನ್ನು ಹೇಗೆ ಅಧಿಕಾರಿಗಳು ಕಸಿದುಕೊಳ್ಳುತ್ತ ರೌವರವ ನರಕಗೊಳಿಸಿದ್ದಾರೆ ಎನ್ನುವುದಕ್ಕೆ ಬಾಗೇವಾಡಿ ಅವರು ಹಾಕಿರುವುದೆ ಈ ಸ್ಟೇಟಸ್‌ಯೇ ಸಾಕ್ಷಿಯಾಗಿದೆ.

ಹೊಸಪೇಟೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ ಬ. ಬಾಗೇವಾಡಿ ಅವರು ಮುಷ್ಕರದ ವೇಳೆ ಮೇಲಧಿಕಾರಿಗಳ ಪಿತೂರಿಯಿಂದಾಗಿ ಶಿಸ್ತುಕ್ರಮಕ್ಕೆ ಒಳಗಾಗಿದ್ದಾರೆ. ಆದರೆ ವಿಚಾರಣೆ ವೇಳೆ ಆತನಿಂದ ಯಾವುದೇ ತಪ್ಪುಗಳಾಗಿಲ್ಲ. ಆತ ನಿರ್ದೋಷಿ ಎಂದು ಸಾಬೀತಾಗಿದೆ.

ಪೊಲೀಸರು ಬಿ ರಿಪೋರ್ಟ್ ಕೂಡ ಹಾಕಿದ್ದಾರೆ. ಇಷ್ಟಾದರೂ ನೌಕರನಿಂದ ಅವಮಾನವಾಯಿತು ಎಂಬ ಜಿದ್ದಿಗೆ ಬಿದ್ದಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಸೀನಯ್ಯ, ಘಟಕ ವ್ಯವಸ್ಥಾಪಕ ವೆಂಕಟೇಶ್ ಅಮಾಯಕ ನಿರಪರಾಧಿ ನೌಕರ ಪ್ರಕಾಶ್ ಅವರನ್ನು ದೂರದ ಕಲ್ಬುರ್ಗಿಯ ಚಿಂಚೊಳ್ಳಿ ಡಿಪೋಗೆ ವರ್ಗಾವಣೆ ಮಾಡಿದ್ದಾರೆ.

ಶಾಪವಾದ ಎಂಡಿಗಳ ನಡೆ: ಇನ್ನು ಮಾಡದ ತಪ್ಪಿಗೆ ಹಲವಾರು ನೌಕರರು ಶಿಕ್ಷೆ ಅನುಭವಿಸುತ್ತಿದ್ದರೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಏನೂ ಆಗುತ್ತಲೇ ಇಲ್ಲ ಎಲ್ಲವೂ ಸರಿಯಾಗಿದೆ ಎಂಬಂತೆ ವರ್ತಿಸುತ್ತಿದ್ದಾರೆ. ಜತೆಗೆ ಅಧಿಕಾರಿಗಳು ಹೇಳುವುದನ್ನೇ ನಂಬಿ ಅವರ ಮಾತಿನಂತೆ ನಡೆಯುತ್ತಿದ್ದಾರೆ. ಇದು ನೌಕರರಿಗೆ ಒಂದು ರೀತಿ ಶಾಪವಾಗಿ ಪರಿಣಮಿಸಿದೆ.

ಯಾವುದೇ ಸಾಕ್ಷ್ಯಗಳು ಇಲ್ಲದಿದ್ದರೂ ಸಾವಿರಾರು ನೌಕರರ ಜೀವನದ ಜತೆ ಚೆಲ್ಲಾಟವಾಡುತ್ತಿರುವ ಕೆಲ ಅಧಿಕಾರಿಗಳಿಗೆ ಕಾನೂನಿನ ಪ್ರಕಾರ ತಕ್ಕ ಶಿಕ್ಷೆ ನೀಡುವ ನಿಟ್ಟಿನಲ್ಲಿ ಒಬ್ಬ ದಕ್ಷ ವಕೀಲರು ಮುಂದಾಗಬೇಕಿದೆ. ಈ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ನಾವು ಇದ್ದೇವೆ ಎಂಬುದನ್ನು ತೋರಿಸುವ ಒಬ್ಬ ವ್ಯಕ್ತಿಯ ಅವಶ್ಯವಂತೂ ಸದ್ಯದ ಪರಿಸ್ಥಿತಿಯಲ್ಲಿ ಖಂಡಿತ ಇದೆ.

ಇನ್ನು ಸಾರಿಗೆ ಸಚಿವ ಶ್ರೀರಾಮುಲು ಅವರ ಮಾತಿಗೆ ಸೊಪ್ಪಾಕದ ಅಧಿಕಾರಿಗಳು ಅವರ ಬಾಯಿಯನ್ನು ಮುಚ್ಚಿಸುವಲ್ಲಿ ಸಫಲರಾಗಿದ್ದು, ನೌಕರರಿಗೆ ಕಿರುಕುಳ ಕೊಡುವುದನ್ನು ಮುಂದುವರಿಸಿದ್ದಾರೆ. ಇದರಿಂದಲೇ ತಿಳಿಯುತ್ತಿದೆ. ಇಂದಿನ ರಾಜಕಾರಣಿಗಳ ಪೌರುಷ ಉತ್ತರ ಕುಮಾರನದು …..

ವಿಪಕ್ಷ ಸ್ಥಾನ ತೆರವುಗೊಳಿಸಿದರೆ ಸಾರ್ವಜನಿಕರ ಹಣವಾದರೂ ಉಳಿಯಲಿದೆ: ಇನ್ನು ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ರಾಜ್ಯದಲ್ಲಿ ಬದುಕ್ಕಿದ್ದಾರೆ ಎಂಬುವುದಕ್ಕೆ ಯಾವುದೇ ಖಾತರಿ ಇಲ್ಲ. ಕಾರಣ ಅವರನ್ನು ಆಸ್ಪತ್ರೆಯ ಐಸಿಯುನಲ್ಲಿ ಇರುವ ರೋಗಿಯಂತೆ ದೂರದಿಂದ ಮಾತ್ರ ನೋಡಲು ಸಾಧ್ಯವಾಗಿದೆ. ಅಂದರೆ ಹತ್ತಿರದಿಂದ ನೋಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ವಿಪಕ್ಷಗಳು ಇವೆ.

ಸಾರಿಗೆ ನೌಕರರ ಸಮಸ್ಯೆ ಬಗ್ಗೆ ಈವರೆಗೂ ಒಂದೇ ಒಂದು ಚಕಾರವನ್ನು ಎತ್ತದ ಇಂಥ ವಿಪಕ್ಷಗಳ ಅಗತ್ಯವಿದೆಯೇ? ಇವರ ಅಗತ್ಯ ರಾಜಕ್ಕೆ ಬೇಕಿಲ್ಲ. ಹೀಗಾಗಿ ವಿಪಕ್ಷ ಸ್ಥಾನದಲ್ಲಿ ಇವರನ್ನು ಕೂರಿಸಲು ವ್ಯಯಿಸುತ್ತಿರುವ ಸಾರ್ವಜನಿಕರ ಹಣವೂ ಪೋಲಾಗುತ್ತಿದೆ. ಆದ್ದರಿಂದ ಆಸ್ಥಾನವನ್ನು ಸರ್ಕಾರ ತೆರವುಗೊಳಿಸಿ ಸಾರ್ವಜನಿಕರ ಹಣವನ್ನಾದರೂ ಉಳಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ.

……. ಒಮ್ಮೆ ಸುದ್ದಿಯ ಮಧ್ಯೆ ಕಾಣುವ ಜಾಹೀರಾತು ತೆರೆದು ನಿಮಗೆ ಇಷ್ಟವಾದದನ್ನು ಆಯ್ಕೆ ಮಾಡಿಕೊಳ್ಳಿ, ಆರ್ಥಿಕವಾಗಿ ನಮ್ಮನ್ನೂ ಸದೃಢಗೊಳಿಸಿ……..

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ