NEWSನಮ್ಮರಾಜ್ಯರಾಜಕೀಯ

ಹುಬ್ಬಳ್ಳಿಯಿಂದ-ವಿಧಾನಸೌಧದವರೆಗೆ ಪಾದಯಾತ್ರೆಗೆ ಸಜ್ಜಾಗುತ್ತಿರುವ ಸಾರಿಗೆ ನೌಕರರಿಂದ ಅಭಿಪ್ರಾಯ ಸಂಗ್ರಹ

ನನ್ನ ಆತ್ಮೀಯ ಸಹೋದರ, ಸಹೋದರಿಯರೇ ನಾನು ಟಿ.ಡಿ.ಗುಡಿಮನಿ ಮಾಡುವ ಮನವಿ

ವಿಜಯಪಥ ಸಮಗ್ರ ಸುದ್ದಿ
ನನ್ನ ಆತ್ಮೀಯ ಸಹೋದರ, ಸಹೋದರಿಯರೇ ನಾನು ಟಿ.ಡಿ.ಗುಡಿಮನಿ ಮಾಡುವ ಮನವಿ ಏನೆಂದರೆ, ಈ ಸಾರಿಗೆ ನೌಕರರ ಕೂಟದ ಅಧ್ಯಕ್ಷರು ಕಳೆದ ವರ್ಷ (ಡಿಸೆಂಬರ್) ಸರ್ಕಾರಕ್ಕೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಅಂತ ಮನವಿ ಕೊಡಲಿಕ್ಕೆ ಹೋದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕೂಟದ ಮುಖಂಡರು ಹಾಗೂ ಇನ್ನಿತರ ಮುಖಂಡರನ್ನು ಬಂಧಿಸಿತ್ತು.

ಕಾರಣ ಇಡೀ ರಾಜ್ಯದ ಸಾರಿಗೆ ನೌಕರರು ಆ ಸಂಘ ಈ ಸಂಘ ಎನ್ನದೇ ನಾವೆಲ್ಲರೂ ಸ್ವಯಂ ಪ್ರೇರಿತವಾಗಿ ಬೆಂಬಲವನ್ನು ಕೊಟ್ಟೆವು. ತದನಂತರ ಸರ್ಕಾರವು ಸರ್ಕಾರಿ ನೌಕರರು ಎಂದು ಘೋಷಣೆ ಮಾಡಲು ಆಗುವುದಿಲ್ಲ. ಬೇಡಿಕೆಗಳು ಕೇಳಿ ಪೂರೈಸುತ್ತವೆ ಎಂದು ಸರ್ಕಾರ ಲಿಖಿತವಾಗಿ ಬರೆದು ಕೊಟ್ಟು, ಮೂರು ತಿಂಗಳ ಸಮಯಾವಕಾಶ ಕೇಳಿತ್ತು.

ಮುಂದೆ ಏಪ್ರಿಲ್ ತಿಂಗಳಿನಿಂದ ಏನೇನು ಆಗಿದೆ ಅನ್ನೋದು ಇಡೀ ಕರ್ನಾಟಕ ಜನೆತೆಗೂ ಗೊತ್ತು. ಕೂಟದ ರಾಜ್ಯಾಧ್ಯಕ್ಷ ಚಂದ್ರು ಮಾರ್ಚ್ ತಿಂಗಳಿನಲ್ಲಿ ರಾಜ್ಯ ಸುತ್ತಿ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಹಾಕಿದರು.

ಆದರೆ ಪ್ರಸ್ತುತ ಅವರೂ ಸೇರಿದಂತೆ ಇನ್ನುಳಿದಂತೆ ಆಗಿರತಕ್ಕ ವಜಾ, ಅಮಾನತು, ವರ್ಗಾವಣೆ ಅದವರ ಬಗ್ಗೆ 1.30 ಲಕ್ಷ ನೌಕರರಾದ ನಾವು, ನೀವು ಧ್ವನಿ ಎತ್ತುತ್ತಾ ಇಲ್ಲ. ಯಾಕೆಂದರೆ ಎಲ್ಲಿ ಏರು ಧ್ವನಿಯಲ್ಲಿ ಮಾತಾಡಿದರೆ ನಮಗೂ ಏನಾಗುತ್ತೆ ಎನ್ನುವುದು.

ಕೆಲವೊಂದು ಸಂಘಟನೆಯ ಕಾರ್ಯಕರ್ತರ ವಿಚಾರ, ಆದ್ರೆ ಕೂಟದ ನಿಷ್ಠಾವಂತರು ಕೂಟದ ತತ್ವಗಳನ್ನು, ಆದರ್ಶಗಳನ್ನು ಒಪ್ಪಿಕೊಂಡು ನಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಕೆಲವೊಂದು ಸಂಘಟನೆಗಳಿಗೆ ಹೊಟ್ಟೆ ಉರಿಯಾಗಿದೆ.

ಕೂಟದ ಪದಾಧಿಕಾರಿಗಳನ್ನು ಕಂಡು ಸಹಿಸಿಕೊಳ್ಳಲು ಆಗುತ್ತಿಲ್ಲ ಎನ್ನುವುದು ಎಲ್ಲಾ ಘಟಗಳಲ್ಲೂ ಮಾತಾಡಿ ಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಮುಷ್ಕರ ಆಗುವುದಿಲ್ಲ, ನಡೆಯುವುದಿಲ್ಲ, ಅನ್ನೋದು ಗುಲಾಮರ ವಿಚಾರವಾದರೇ, ಸಾಂವಿಧಾನಿಕ ನಮ್ಮ ಹಕ್ಕನ್ನು ಪಡೆದು ಕೊಳ್ಳಲಿಕೆ ಸಾವಿರಾರು ಹೋರಾಟಗಾರರು ತಯಾರಿದ್ದಾರೆ. ಆ ಹೋರಾಟಗಾರರಿಗೆ ಅನೇಕರು ಬೆಂಬಲವಾಗಿ ನಿಲ್ಲುವರು ಇದ್ದಾರೆ.

ಕೆಲವೊಂದು ಸಂಘಟನೆಗಳು ಯಾವ ರೀತಿ 6ನೆ ವೇತನಕ್ಕಾಗಿ ಬೆಂಬಲ ಕೊಟ್ಟಿದ್ದಾವೆ ಎನ್ನೋದು ಎಲ್ಲರಿಗೂ ತಿಳಿದ ವಿಚಾರ . ಇಷ್ಟೆಲ್ಲ ಡ್ಯಾಮೇಜ್ ಆಗಲಿಕ್ಕೆ ಯಾರು ಕಾರಣರು ಎನ್ನುವುದು ನೌಕರರಿಗೇ ತಿಳಿಯದ ವಿಚಾರವೇನಲ್ಲ. ಯಾವ ಸಂಘಟನೆಗಳು ಕಾರ್ಮಿಕರ ಪರವಾಗಿ ಇದ್ದಾವೆ ಅನ್ನೋದು ಪ್ರತಿಯೊಬ್ಬರಿಗೂ, ಬುದ್ದಿವಂತರಿಗೂ ಗೊತ್ತು.

ಬಂಧುಗಳೇ, ಸರ್ಕಾರ ಯಾವ ರೀತಿ ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಿದೆ ಎನ್ನುವುದನ್ನು ಕಾದು ನೋಡೋಣ. ಸರ್ಕಾರದ ಮೇಲೆ ಹಾಗೂ ಸಾರಿಗೆ ಸಚಿವರ ಮೇಲೆ ಸಂಪೂರ್ಣ ವಿಶ್ವಾಸ ಇದೆ.

ಹೀಗಾಗಿ ಇನ್ನು ಕೆಲವು ದಿನಗಳು ಕಾಯೋಣ. ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್‌ ಪ್ರಕರಣಗಳು ಆದವರು ಯಾರು ಧೃತಿಗೆಡಬೇಡಿ ಇನ್ನು ಕಾನೂನು ಹೋರಾಟ ಮುಂದುವರಿದಿದೆ. ನಮಗೆ ಶಾಸಕಾಂಗ ನ್ಯಾಯ ಕೊಡದೆ ಹೋದಲ್ಲಿ ನ್ಯಾಯಾಲಯದಲ್ಲಿ ಖಂಡಿತ ನ್ಯಾಯ ಸಿಕ್ಕೆ ಸಿಗುತ್ತೆ ಅನ್ನುವ ಭರವಸೆಯಿಡಿ.

ಆತ್ಮೀಯರೇ,
ಸರ್ಕಾರದ ಗಮನ ಸೆಳೆಯಲು ಹುಬ್ಬಳ್ಳಿಯಿಂದ-ವಿಧಾನ ಸೌಧದ ವರೆಗೆ ಪಾದಯಾತ್ರೆ ಮಾಡಿ ಮನವಿಮಾಡಲು ನಿರ್ಧರಿಸಿದ್ದೇವೆ ತಾವು ತಾವೇ ದಿನಾಂಕ ಮತ್ತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಕೋರಲಾಗಿದೆ.

ವಜಾ, ವರ್ಗಾವಣೆ, ಅಮಾನತು ಪೊಲೀಸ್‌ ಪ್ರಕರಣಗಳಾದವರು ಮತ್ತು ಆಗಲಾರದವರೂ, ಕೂಟದ ಪದಾಧಿಕಾರಿಗಳು, ಪ್ರತಿಯೊಬ್ಬರೂ ಅಭಿಪ್ರಾಯ (ವಿಶ್ವಾಸಕ್ಕೆ ) ತೆಗೆದುಕೊಂಡು ರಾಜ್ಯಾಧ್ಯಕ್ಷರ
ಮೇರೆಗೆ ಮುಂದಿನ ಹೆಜ್ಜೆ ಇಡಲಾಗುವುದು.

ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇವೆ. ಆದಷ್ಟು ಶೀಘ್ರ ತಿಳಿಸಲು ವಿನಂತಿ.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?