Please assign a menu to the primary menu location under menu

NEWSಕೃಷಿದೇಶ-ವಿದೇಶ

ಪ್ರತಿಭಟನೆಯಿಂದ ಸಾಧಿಸಲಾಗದ್ದು, ಚುನಾವಣೆ ಭಯದಿಂದ ಸಾಧಿಸಬಹುದು : ಪಿ. ಚಿದಂಬರಂ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಪ್ರತಿಭಟನೆಯಿಂದ ಸಾಧಿಸಲಾಗದ್ದು, ಚುನಾವಣೆ ಭಯದಿಂದ ಸಾಧಿಸಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆದಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಂದ ಏನನ್ನು ಸಾಧಿಸಲಾಗದೋ ಅದನ್ನು ಮುಂಬರುವ ಚುನಾವಣೆಯ ಭಯದಿಂದ ಸಾಧಿಸಬಹುದು. ವಿವಾದಿತ ಮೂರು ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವ ಕುರಿತು ಪ್ರಧಾನ ಮಂತ್ರಿಯವರ ಘೋಷಣೆಯು ಯಾವುದೇ ನೀತಿಯ ಬದಲಾವಣೆ ಅಥವಾ ಹೃದಯದ ಬದಲಾವಣೆಯಿಂದ ಪ್ರೇರಿತವಾಗಿಲ್ಲ.

ಇದು ಚುನಾವಣೆಯ ಭಯದಿಂದ ಪ್ರಚೋದಿಸಲ್ಪಟ್ಟಿದೆ. ಅದೇನೇ ಇರಲಿ, ಇದು ರೈತರಿಗೆ ಮತ್ತು ಈ ಕಾನೂನುಗಳ ವಿರುದ್ಧ ಅಚಲವಾಗಿ ನಿಂತಿದ್ದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ವಿಜಯವಾಗಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ರೈತರ ನಿರಂತರ ಹೋರಾಟ ಹಿನ್ನೆಲೆ ಕಾಯ್ದೆಗಳು ವಾಪಸ್ ತೆಗೆದುಕೊಳ್ಳಲಾಗುವುದು. 3 ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುತ್ತಿದ್ದೇವೆ. ಅದಕ್ಕಾಗಿ ಸಮಿತಿ ರಚಿಸುತ್ತೇವೆ. ಇದರಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರೈತರು ಮತ್ತು ಕೃಷಿ ತಜ್ಞರು ಇರಲಿದ್ದಾರೆ. ರೈತರು ಹೋರಾಟವನ್ನು ಕೈ ಬಿಡಿ ಎಂದು ಮೋದಿ ರೈತರಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಭಾರಿ ಚರ್ಚೆಯಾಗಿ ವಿವಾದಕ್ಕೆ ತುತ್ತಾಗಿದ್ದ ಕೃಷಿ ಸಂಬಂಧಿತ ಮೂರೂ ಮಸೂದೆಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ನಮ್ಮ ನಿರ್ಣಯದಲ್ಲಿಯೇ ಎಲ್ಲೋ ತಪ್ಪು ಆಗಿರಬಹುದು. ಹಾಗಾಗಿ ನಾನು ದೇಶವಾಸಿಗಳಲ್ಲಿ ಕ್ಷಮೆ ಕೋರುತ್ತೇನೆ.

ತನ್ಮೂಲಕ ಮೂರೂ ಕೃಷಿ ಮಸೂದೆಗಳನ್ನು ಇದೇ ತಿಂಗಳು ಸಂಸತ್ತಿನಲ್ಲಿ ವಾಪಸ್ ತೆಗೆದುಕೊಳ್ಳುವೆ. ರೈತ ಬಂಧುಗಳು ತಮ್ಮ ತಮ್ಮ ಹೊಲ, ತೋಟಗಳಿಗೆ ವಾಪಸ್ ಹೋಗಿ, ಕೃಷಿಯಲ್ಲಿ ತೊಡಗಿರಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಲೋಕ ಸೇವಾ ಆಯೋಗಗಳು ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುವ ಪ್ರಜಾ ಪ್ರಭುತ್ವದ ಸ್ತಂಭಗಳು: ಸಿಎಂ ಸಿದ್ದರಾಮಯ್ಯ KSRTC: ಶಸ್ತ್ರಚಿಕಿತ್ಸೆ ಗೊಳಗಾದ ಚಾಲಕನಿಗೆ ರಜೆ ಕೊಡದೆ ಗೈರು ಹಾಜರಿಹಾಕಿ 4 ತಿಂಗಳ ವೇತನ ತಡೆಹಿಡಿದ ಅಧಿಕಾರಿಗಳು KSRTC ಮಂಡ್ಯ: ಚಾಲಕನ ಮೇಲೆ ವ್ಯಕ್ತಿ ಹಲ್ಲೆ -ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಯುವ ನಾಯಕತ್ವ ತರಬೇತಿ ಶಿಬಿರ- ವಿಶೇಷ ಶಿಬಿರಗಳಿಂದ ನಾಯಕತ್ವ ಕೌಶಲ್ಯ ವೃದ್ಧಿ ಹೇಮಗಿರಿಯ ಕಲ್ಯಾಣ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಜ.19ರ BMTC ಸಂಘದ ಚುನಾವಣೆಯಲ್ಲಿ ಬಳಕೆದಾರ ಸಹಕಾರ ಸಂಘ ಲೂಟಿಕೋರರ ಹೆಡೆಮುರಿ ಕಟ್ಟಿ - ನೊಂದ ನೌಕರರ ಮನವಿ KSRTC ಹಾಸನ ಹೊಸ ಬಸ್‌ ನಿಲ್ದಾಣ: ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಹೊಡೆದು ಕಳವಿಗೆ ಯತ್ನ KSRTC ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರು : ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್‌ ಪಡೆಯಿರಿ  KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್‌ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್‌ ಚಾಲಕನ ಸ್ಥಿತಿ ಚಿಂತಾ... ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಕೇಂದ್ರ ರಸ್ತೆ ಸಾರಿಗೆ -ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ...