NEWSನಮ್ಮಜಿಲ್ಲೆನಮ್ಮರಾಜ್ಯ

ಮಗು ದತ್ತು ಪಡೆವ ತಾಯಿಗೂ ಹೆರಿಗೆ ರಜೆ : ಕೆಎಸ್‌ಆರ್‌ಟಿಸಿ ಮಹಿಳಾ ಉದ್ಯೋಗಿಗಳಿಗೂ ಅನ್ವಯ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು : ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲೂ 6 ತಿಂಗಳ ಕಾಲ ವೇತನ ಸಹಿತ ಮಾತೃತ್ವ ಅಥವಾ ಹೆರಿಗೆ ರಜೆ ನೀಡುತ್ತಿರುವುದು ನಿಮಗೆ ಗೊತ್ತಿರುವ ವಿಚಾರವೇ. ಆದರೆ, ಇದರ ಜತೆಗೆ ದತ್ತು ತೆಗೆದುಕೊಳ್ಳುವ ತಾಯಿಗೂ ಇದೇ ರೀತಿ ಹೆರಿಗೆ ರಜೆ ನೀಡಬೇಕೆಂದು ಹಲವು ಮಾತುಗಳು ಕೇಳಿಬಂದಿದ್ದವು.

ಕೆಲವೆಡೆ ಈಗಾಗಲೇ ಇದು ಜಾರಿಯಲ್ಲೂ ಇದೆ. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇದೇ ನಿರ್ಧಾರ ಕೈಗೊಂಡಿದೆ. ಮಕ್ಕಳನ್ನು ದತ್ತು ಪಡೆಯುವ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ ನೀಡುವ ಕೆಎಸ್‌ಆರ್‌ಟಿಸಿ ನಿರ್ಧಾರ ತೆಗೆದುಕೊಂಡಿದ್ದು ಅದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅಧಿಸೂಚನೆ ಹೊರಡಿಸಿದ್ದು, ಸಂಸ್ಥೆ ಮಕ್ಕಳನ್ನು ದತ್ತು ಪಡೆಯುವ ಮಹಿಳಾ ಸಿಬ್ಬಂದಿಗೆ 180 ದಿನಗಳ ಹೆರಿಗೆ ರಜೆ ಮಂಜೂರು ಮಾಡಿದೆ. ಆದರೆ, ಈಗಾಗಲೇ ಇಬ್ಬರು ಜೀವಂತ ಮಕ್ಕಳನ್ನು ಹೊಂದಿರುವವರಿಗೆ ಈ ಸೌಲಭ್ಯ ಲಭ್ಯವಿಲ್ಲ ಎಂಬ ಷರತ್ತನ್ನೂ ವಿಧಿಸಿದೆ.

ಇಲ್ಲಿಯವರೆಗೆ, ಮಕ್ಕಳನ್ನು ದತ್ತು ಪಡೆದ ಪೋಷಕರು ಪ್ರತ್ಯೇಕ ರಜೆಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಇತ್ತೀಚಿನ ಆದೇಶವು ಜೈವಿಕ ತಾಯಂದಿರಿಗೆಮಾತ್ರ ನೀಡಲಾದ ಹೆರಿಗೆ ರಜೆಗಳನ್ನು ಪಡೆಯಲು ಈಗ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ತಾಯಿ ಹಾಗೂ ತಂದೆಗೂ ಅನುವು ಮಾಡಿಕೊಡುತ್ತದೆ.

ದತ್ತು ಪಡೆದ ತಾಯಿ 1 ವರ್ಷದೊಳಗೆ ಅಥವಾ ದತ್ತು ಪಡೆದ ಮಗುವಿಗೆ 1 ವರ್ಷ ತುಂಬುವ ಮೊದಲು ರಜೆ ಪಡೆಯಬಹುದು. ದತ್ತು ಪಡೆದ ಪೋಷಕರನ್ನು ಜೈವಿಕ ಪೋಷಕರಿಗೆ ಸಮಾನವಾಗಿ ಪರಿಗಣಿಸಲು ರಾಜ್ಯ ಸರ್ಕಾರದ ನಿರ್ದೇಶನದಂತೆ ಈ ನಿರ್ಧಾರವನ್ನು ಸಾರಿಗೆ ಸಂಸ್ಥೆ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.

ದತ್ತು ಪಡೆದ ತಾಯಿಗೆ 180 ದಿನದ ರಜೆ: ಮಹತ್ವದ ಕ್ರಮದಲ್ಲಿ, ಕರ್ನಾಟಕ ಸರ್ಕಾರವು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ತನ್ನ ಉದ್ಯೋಗಿಗಳಿಗೆ ಜೈವಿಕ ಪೋಷಕರಿಗೆ ಸಮಾನವಾಗಿ ಹೆರಿಗೆ ಮತ್ತು ಪಿತೃತ್ವ ರಜೆಗಳನ್ನು ಪಡೆಯಲು ಈ ಹಿಂದೆ ಆದೇಶವನ್ನು ಪ್ರಕಟಿಸಿತ್ತು. ಈ ಹೊಸ ನಿಯಮ ಮಗುವನ್ನು ದತ್ತು ಪಡೆದ ತಾಯಂದಿರಿಗೆ 180 ದಿನಗಳ ಹೆರಿಗೆ ರಜೆಯನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದೆ.

ಪೋಷಕರ ಸಮಸ್ಯೆ ಗುರುತಿಸಿ ರಜೆ: ಉದ್ಯೋಗಿಗಳ ರಜೆಯನ್ನು ನಿಯಂತ್ರಿಸುವ ಹಣಕಾಸು ಇಲಾಖೆಯ ಅಧಿಕಾರಿಗಳ ಪ್ರಕಾರ, ಮೊದಲು ದತ್ತು ಪಡೆದ ಪೋಷಕರು ತಮ್ಮದೇ ಆದ ರಜೆಗಳನ್ನು ಬಳಸಬೇಕಾಗಿತ್ತು. ಹಿಂದಿನ ವ್ಯವಸ್ಥೆಯಲ್ಲಿ, ಮಹಿಳೆಯರಿಗೆ 60 ದಿನಗಳ ಕಾಲ ರಜೆ ನೀಡಲಾಗುತ್ತಿತ್ತು, ಇದರಲ್ಲಿ ಅವರದೇ ಆದ ರಜೆಗಳು ಸೇರಿತ್ತು. ದತ್ತು ಪಡೆದ ಪೋಷಕರಿಗೂ ಮಗುವಿನೊಂದಿಗೆ ಬಾಂಧವ್ಯ ಹೊಂದಲು ಸಮಯ ಬೇಕಾಗುತ್ತದೆ ಎಂದು ಸರ್ಕಾರ ಈಗ ಹೆರಿಗೆ ರಜೆ ಮಾದರಿಯಲ್ಲೇ ದತ್ತು ಪಡೆದ ಪಾಲಕರು ನೀಡಿದೆ.

ರಾಜ್ಯ ಸರ್ಕಾರ ಫೆಬ್ರವರಿ 2020ರಲ್ಲಿ ಈ ಆದೇಶ ಹೊರಡಿಸಿತ್ತು. ಅದನ್ನು ಏಪ್ರಿಲ್‌ 2021ರಲ್ಲಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಈಗ ಅದೇ ರೀತಿ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರದ ಈ ನಿರ್ಧಾರಕ್ಕೆ ಮಹಿಳಾ ಉದ್ಯೋಗಿಗಗಳು ಸಂತಸ ವ್ಯಕ್ತಪಡಿಸಿದ್ದಾರೆ.ಇತ್ತ ಸಾರ್ವಜನಿಕ ವಲಯದಲ್ಲೂ ಕೆಎಸ್‌ಆರ್‌ಟಿಸಿ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC