Please assign a menu to the primary menu location under menu

NEWSನಮ್ಮಜಿಲ್ಲೆ

ಸಾರಿಗೆ ಸಚಿವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಸಾರಿಗೆ ನೌಕರರ ಪಾದಯಾತ್ರೆ ಆರಂಭ

ಡಿಸೆಂಬರ್‌ 4 ರಂದು ವಿಧಾನಸೌಧ ತಲುಪಿ ಮುಖ್ಯಮಂತ್ರ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಕ್ಕೆ

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಸೋಮವಾರ (ನ.29) ಪಾದಯಾತ್ರೆ ಆರಂಭಿಸಿದ್ದಾರೆ.

ಇಂದು ಪಾದಯಾತ್ರೆ ಬಳ್ಳಾರಿ ಕೇಂದ್ರ ಬಸ್‌ ನಿಲ್ದಾಣದಿಂದ ಆರಂಭವಾಗಿದ್ದು, ಚಳ್ಳಕೆರೆ – ಹಿರಿಯೂರು ಬೈಪಾಸ್‌ – ತುಮಕೂರು – ಯಶವಂತಪುರ – ಮೇಖ್ರಿ ವೃತ್ತ – ಪ್ಯಾಲೇಸ್‌ ಗುಟ್ಟಹಳ್ಳಿ ಮಾರ್ಗವಾಗಿ ಸಾಗಿ ಡಿ.4ರಂದು ವಿಧಾನಸೌಧ ತಲುಪಲಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಮತ್ತು ಬೇಡಿಕೆಗಳ ಮನವಿ ಸಲ್ಲಿಸಲಿದ್ದಾರೆ.

ಸದ್ಯ ಸಾರಿಗೆಯ ನೌಕರರಾದ ದೊಡ್ಡಪ್ಪ ಮತ್ತು ನಿಂಗಪ್ಪ ಈ ಇಬ್ಬರು ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ಆರಂಭಿಸಿದ್ದು, ದಾರಿ ಮಧ್ಯದಲ್ಲಿ ನೌಕರರು ಬಂದು ಸೇರಿಕೊಳ್ಳಲಿದ್ದಾರೆ.

ಪ್ರಮುಖವಾಗಿ ಕಾನೂನು ಬಾಹಿರವಾಗಿ ವಜಾ, ಅಮಾನತು ವರ್ಗಾವಣೆ ಆಗಿರುವವರಿಗೆ ನ್ಯಾಯ ಸಿಗಬೇಕು. ಜತೆಗೆ ವೇತನ ತಾರತಮ್ಯತೆ ನಿವಾರಿಸಬೇಕು. ಅದಕ್ಕಾಗಿ ಸರ್ಕಾರವೇ ಭರವಸೆ ಕೊಟ್ಟಂತೆ 6ನೇ ವೇತನ ಆಯೋಗ ಜಾರಿಯಾಗಬೇಕು ಎಂದು ಆಗ್ರಹಿಸಿ ಪದಾಯಾತ್ರೆಗೆ ಚಾಲನೆ ನೀಡಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಏಪ್ರಿಲ್‌ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದ ವೇಳೆ ಕಾನೂನು ಬಾಹಿರವಾಗಿ ಅಮಾನತು, ವಜಾ, ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದು, ಪ್ರಮುಖವಾಗಿ ಮುಷ್ಕರ ಸಮಯದಲ್ಲಿ ನೌಕರರ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ಕೂಡಲೇ ವಾಪಸ್‌ ಪಡೆದು ಮುಷ್ಕರದ ಹಿಂದೆ ಇದ್ದ ಸ್ಥಿತಿಯಲ್ಲಿ ನೌಕರರನ್ನು ನಡೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ 2020 ಜನವರಿಯಲ್ಲಿ ಆಗಬೇಕಿದ್ದ ಅಗ್ರಿಮೆಂಟ್‌ ಕೂಡ 2ವರ್ಷ ಸಮೀಪಿಸುತ್ತಿದ್ದರು ಸರ್ಕಾರ ಯಾವುದೇ ಚಕಾರವೆತ್ತಿಲ್ಲ. ಹೀಗಾಗಿ ನಮಗೆ 2020 ಜನವರಿಯಲ್ಲಿ ಆಗಬೇಕಿದ್ದ ಅಗ್ರಿಮೆಂಟ್‌ ಬದಲಿಗೆ 6ನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಅಗ್ರಿಮೆಂಟ್‌ ಆದರೆ ಚಾಲನಾ ಸಿಬ್ಬಂದಿಗೆ ಒಂದು ರೀತಿಯ ಅಗ್ರಮೆಂಟ್‌ ಮತ್ತು ಕಚೇರಿಯ ಸಿಬ್ಬಂದಿ ವರ್ಗಕ್ಕೆ ಒಂದು ರೀತಿಯ ಅಗ್ರಿಮೆಂಟ್‌ ಮಾಡಿಕೊಳ್ಳುತ್ತಾರೆ. ಹೀಗಾಗಿ ನಮಗೆ ಈಗಾಗಲೇ ಬರುತ್ತಿರುವ ವೇತನವೇ ಕಡಿಮೆ. ಈ ನಡುವೆ ನಿಗಮದೊಳಗೇ ಅತ್ಯಂತ ಕಡಿಮೆ ವೇತನ ನೀಡುವ ಮೂಲಕ ನಮಗೆ ನಿಗಮಗಳಲ್ಲೇ ತಾರತಮ್ಯತೆ ಮಾಡುತ್ತಿದ್ದಾರೆ ಇದು ಮೊದಲು ಹೋಗಲಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೇರೆ ನಿಗಮಗಳಲ್ಲಿ ಡಿ, ಸಿ ಗ್ರೂಪ್‌ ನೌಕರರಿಗೆ 5 ವರ್ಷಕ್ಕೊಮ್ಮೆ ಮುಂಬಡ್ತಿ ಸಿಗುತ್ತಿದೆ. ಅದರ ಜತೆಗೆ ಅವರಿಗೆ ಹಂತಹಂತವಾಗಿ ವೇತನವೂ ಹೆಚ್ಚಳವಾಗುತ್ತಿದೆ. ಅದೇ ರೀತಿ ನಮಗೂ ಆಗಬೇಕು. ನಾವೂ ನಿವೃತ್ತಿ ಅಂಚಿನವೇಳೆ ಒಳ್ಳೆ ವೇತನ ಪಡೆಯಬೇಕು.

ಆದರೆ, ನಮಗೆ ಕಳೆದ 25-30 ವರ್ಷ ಸೇವೆ ಸಲ್ಲಿಸಿದ್ದರೂ ಒಂದೇ ಒಂದು ಮುಂಬಡ್ತಿಕೂಡ ನೀಡದೆ ಜೀತದಾಳುಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದು ಕೂಡ ಮೊದಲು ತೊಲಗಬೇಕು ಎಂದು ಒತ್ತಾಯಿಸಿದ್ದಾರೆ ಕಾರ್ಮಿಕ ಮುಖಂಡರಾದ ದೊಡ್ಡಪ್ಪ, ನಿಂಗಪ್ಪ ಇನ್ನು ಮುಂತಾದವರು.

Leave a Reply

error: Content is protected !!
LATEST
KSRTC ಹಾಸನ ಹೊಸ ಬಸ್‌ ನಿಲ್ದಾಣ: ಬಸ್‌ನಲ್ಲಿ ಮಲಗಿದ್ದ ಚಾಲನಾ ಸಿಬ್ಬಂದಿಗಳ ಮುಖಕ್ಕೆ ಸ್ಪ್ರೇ ಹೊಡೆದು ಕಳವಿಗೆ ಯತ್ನ KSRTC ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರು : ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್‌ ಪಡೆಯಿರಿ  KSRTC: ಓಂ ಶಕ್ತಿಗೆ ಹೋಗಿ ಬರುತ್ತಿದ್ದ ಬಸ್‌ -ಲಾರಿ ನಡುವೆ ಭೀಕರ ಅಪಘಾತ- ನಾಲ್ವರು ಸಾವು, ಬಸ್‌ ಚಾಲಕನ ಸ್ಥಿತಿ ಚಿಂತಾ... ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಕೇಂದ್ರ ರಸ್ತೆ ಸಾರಿಗೆ -ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ... ಸಾರಿಗೆ ಸಿಬ್ಬಂದಿಗೆ ಸರಿ ಸಮಾನ ವೇತನ ಸಿಗಬೇಕು: NWKRTC ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ NWKRTC- ನಿರ್ವಾಹಕ ಚೀರ್ಚಿನಕಲ್ ಆತ್ಮಹತ್ಯೆ ಯತ್ನ- ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎಂಡಿಗೆ ಸಾರಿಗೆ ನೌಕರರ ಸೇನ... ಸಾರಿಗೆ ನೌಕರರಿಗೆ ಕೊಟ್ಟ ಚುನಾವಣೆ ಪ್ರಣಾಳಿಕೆಯ ಭರವಸೆ ಈಡೇರಿಸುವತ್ತಾ ಕಾಂಗ್ರೆಸ್‌ ಸರ್ಕಾರ...!? KSRTC 4 ನಿಗಮಗಳ ಬಸ್‌ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್‌ KSRTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ