Friday, November 1, 2024
NEWSದೇಶ-ವಿದೇಶನಮ್ಮರಾಜ್ಯ

40ನೇ ದಿನವು ಮುಂದುವರಿದ MSRTC ನೌಕರರ ಮುಷ್ಕರ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ನೌಕರರು ತಮ್ಮ ಮುಷ್ಕರ ಇಂದಿಗೆ 40ನೇ ದಿನವೂ ಮುಂದುವರಿದಿದೆ. ಈ ನಡುವೆ ರಾಜ್ಯದಾದ್ಯಂತ ಒಟ್ಟು 250 ಡಿಪೋಗಳಲ್ಲಿ 78 ಡಿಪೋಗಳಲ್ಲಿ ಬಸ್ ಕಾರ್ಯಾಚರಣೆ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕಳೆದ ತಿಂಗಳು ದೀಪಾವಳಿ ಹಬ್ಬದ ನಂತರ ಮುಷ್ಕರ ತೀವ್ರಗೊಂಡಾಗಿನಿಂದ ಡಿಸೆಂಬರ್ 5 ರಂದು, ನಿಗಮವು ತನ್ನ ಸುಮಾರು 16,000 ವಾಹನಗಳ ಪೈಕಿ ಅತಿ ಹೆಚ್ಚು 1,700 ಬಸ್‌ಗಳನ್ನು ರಸ್ತೆಗಿಳಿಸಿದ್ದಾಗಿ ನಿಗಮದ ವಕ್ತಾರರು ತಿಳಿಸಿದ್ದಾರೆ.

ಆದರೆ ಬಹುತೇಕ ಎಲ್ಲ ನೌಕರರು ಮುಷ್ಕರದಿಂದ ಹಿಂದೆ ಸರಿಯದೆ ನಷ್ಟದಲ್ಲಿರುವ ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸಲೇ ಬೇಕು ಎಂಬ ತಮ್ಮ ನಿಲುವನ್ನು ಸಡಿಲಿಸದೆ ಪಟ್ಟು ಹಿಡಿದು ಕುಳಿತ್ತಿದ್ದಾರೆ. ನೌಕರರು ಕಳೆದ ಅಕ್ಟೋಬರ್ 28 ರಿಂದ ಮುಷ್ಕರವನ್ನು ಕೈಗೊಂಡಿದ್ದು, ನವೆಂಬರ್‌ನಿಂದ ಅದನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಹೀಗಾಗಿ ಬಹುತೇಕ ಬಸ್ ಡಿಪೋಗಳಲ್ಲೇ ಬಸ್‌ಗಳು ನಿಂತಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ನಿಗಮದ ಅಧಿಕಾರಿಗಳ ಪ್ರಕಾರ ಮುಷ್ಕರದ ನಂತರ ಇದುವರೆಗೆ 9,625 ಕಾಯಂ ನೌಕರರನ್ನು ಅಮಾನತುಗೊಳಿಸಿದೆ ಮತ್ತು 1,990 ದಿನಗೂಲಿ ಕಾರ್ಮಿಕರ ಸೇವೆಗಳನ್ನು ವಜಾಗೊಳಿಸಿದೆ.

ಎಂಎಸ್‌ಆರ್‌ಟಿಸಿ ಅಧ್ಯಕ್ಷರಾಗಿರುವ ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್ ಅವರು ಪದೇಪದೇ ಮನವಿ ಮತ್ತು ಎಚ್ಚರಿಕೆ ನೀಡಿದರೂ ಸಹ, ಹೆಚ್ಚಿನ ಸಂಖ್ಯೆಯ ನೌಕರರು ಮುಷ್ಕರವನ್ನು ಮುಂದುವರಿಸಿದ್ದಾರೆ ಮತ್ತು ಅವರಲ್ಲಿ ಅನೇಕರು ನಿಗಮದ ಡಿಪೋಗಳು ಮತ್ತು ಬಸ್ ನಿಲ್ದಾಣಗಳ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಯೂನಿಯನ್ ಮೂಲಗಳ ಪ್ರಕಾರ, MSRTC ಕಳೆದ ವಾರದಿಂದ ಹಲವಾರು ಉದ್ಯೋಗಿಗಳನ್ನು ವರ್ಗಾವಣೆ ಮಾಡಿದೆ. ಇದರಿಂದಾಗಿ ಹಲವು ಡಿಪೋಗಳಲ್ಲಿ ಹಾಜರಾತಿ ಸುಧಾರಿಸಿದ್ದು, ಇನ್ನು ಕೆಲವು ಡಿಪೋಗಳಲ್ಲಿ ಬಸ್ ಸಂಚಾರ ಪುನರಾರಂಭವಾಗುವ ಸಾಧ್ಯತೆ ಇದೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...